More

    ಪೆಟ್ರೋಲಿಯಂ ಕಂಪನಿಗಳ ನಿರಂತರ ಬೆಲೆ ಏರಿಕೆ: 100ರ ಗಡಿ ಮುಟ್ಟಿದ ಡೀಸೆಲ್​ ದರ..!

    ತಿರುವನಂತಪುರಂ: ಇಂಧನ ದರ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರು ಇಂದಲ್ಲ ನಾಳೆ ಪೆಟ್ರೋಲ್​-ಡೀಸೆಲ್​ ಬೆಲೆ ಕಡಿಮೆ ಆಗುತ್ತದೆ ಎಂಬ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಆದರೆ, ಬೆಲೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಪೆಟ್ರೋಲ್​ ಬೆಲೆ ನೂರರ ಗಡಿ ದಾಟಿದ್ದು, ಇದೇ ಮೊದಲ ಬಾರಿಗೆ ಕೇರಳದಲ್ಲಿ ಡೀಸೆಲ್​ ಬೆಲೆ ನೂರರ ಗಡಿ ಮುಟ್ಟಿದೆ.

    ವೀಕೆಂಡ್​ ಮೋಜಿಗಾಗಿ ಹೊರಗಡೆ ಹೋಗಲು ಪ್ಲಾನ್​ ಹಾಕಿಕೊಂಡಿದ್ದವರ ಜೇಬಿಗೆ ಪೆಟ್ರೋಲ್​-ಡೀಸೆಲ್​ ದರ ಭಾರವಾಗಿದೆ. ಕೇರಳದಲ್ಲಿ ಭಾನುವಾರ ಡೀಸೆಲ್​ ದರ ಪ್ರತಿ ಲೀಟರ್​ 100.11 ರೂಪಾಯಿಗೆ ತಲುಪಿದೆ. ಕೇರಳ ರಾಜಧಾನಿ ತಿರುವನಂತಪುರದ ಪರಸ್ಸಾಲಾ ದಾಖಲೆ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ.

    ಪೆಟ್ರೋಲಿಯಂ ಕಂಪನಿಗಳು ನಿರಂತರವಾಗಿ ಇಂಧನ ದರ ಏರಿಸುತ್ತಿರುವ ಪರಿಣಾಮ ಜನರ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ. ಆಯಿಲ್​ ಕಂಪನಿಗಳು ಭಾನುವಾರ ಪೆಟ್ರೋಲ್​ ಬೆಲೆಯಲ್ಲಿ 32 ಪೈಸೆ ಮತ್ತು ಡೀಸೆಲ್​ ಬೆಲೆಯಲ್ಲಿ 38 ಪೈಸೆ ಏರಿಕೆ ಮಾಡಿವೆ. ಕಳೆದ 17 ದಿನಗಳಲ್ಲಿ ಪ್ರತಿ ಲೀಟರ್​ ಡೀಸೆಲ್​ಗೆ 4.55 ರೂ. ಮತ್ತು ಪೆಟ್ರೋಲ್​ಗೆ 2.99 ರೂಪಾಯಿ ಹೆಚ್ಚಳವಾಗಿದೆ.

    ಕೊಚ್ಚಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 104.57 ರೂಪಾಯಿಗೆ ಏರಿಕೆಯಾದರೆ, ಡೀಸೆಲ್​ 98.14 ರೂ.ಗೆ ಹೆಚ್ಚಾಗಿದ್ದು, ಶತಕದ ಹೊಸ್ತಿಲಲ್ಲಿ ಬಂದು ನಿಂತಿದೆ. ಬೆಲೆ ಏರಿಕೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಡೀಸೆಲ್​ ಬೆಲೆಯು 100ರ ಗಡಿ ದಾಟುವುದರಲ್ಲಿ ಯಾವುದೇ ಸಂಶಯವೇ ಇಲ್ಲ.

    ಇನ್ನು ಆಘಾತಕಾರಿ ಅಂಶವೆಂದರೆ, 2016 ಜನವರಿಯಿಂದ ಕೇವಲ ಐದೇ ವರ್ಷದಲ್ಲಿ ಡೀಸೆಲ್​ ದರ ದುಪ್ಪಟ್ಟಾಗಿದೆ. ಸುಮಾರು 50 ರೂಪಾಯಿ ಹೆಚ್ಚಾಗಿದೆ. ದಿನೇದಿನೆ ಬೆಲೆ ಏರಿಕೆಯಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳು ಬೃಹತ್​ ಪ್ರತಿಭಟನೆಗಳಿ ಸಜ್ಜಾಗಿವೆ. (ಏಜೆನ್ಸೀಸ್​)

    ಹಿರಿಯ ನಟ ಸತ್ಯಜಿತ್ ಸಾವಿನ ಬಗ್ಗೆ ಪುತ್ರನ ನೋವಿನ ಮಾತು: ಸಾಮಾಜಿಕ ಜಾಲತಾಣದ ಮೇಲೆ ಬೇಸರ..!

    Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!

    ಭಜರಂಗಿ-2ನಲ್ಲಿ ಚಿಣಿಮಿಣಿಕಿ ಭಾವನಾ; ದಿ ಲೇಡಿ ಫೈರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts