More

    ಬಹಳ ವರ್ಷಗಳ ಹಿಂದೆಯೇ ಧನುಷ್​-ಐಶ್ವರ್ಯಾ ಬೇರೆ ಆಗ್ಬೇಕಿತ್ತಂತೆ! ಆದ್ರೆ ಈ ಸಮಯಕ್ಕಾಗಿ ಕಾದಿದ್ದರು

    ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳಾದ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಜ.17 ರಂದು ಏಕಾಏಕಿ ಗುಡ್​ ಬೈ ಹೇಳಿರುವುದು ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಆಘಾತವಾಗಿದೆ.

    ಧನುಷ್​ ಮತ್ತು ಐಶ್ವರ್ಯಾರ ಫ್ರೆಂಡ್ಸ್​ ಹೇಳುವ ಪ್ರಕಾರ ಈ ನಿರ್ಧಾರ ದಿಢೀರನೇ ತೆಗೆದುಕೊಂಡ ನಿರ್ಧಾರವಲ್ಲ. ಬರೋಬ್ಬರಿ ಆರು ತಿಂಗಳು ಧನುಷ್​ ಮತ್ತು ಐಶ್ವರ್ಯಾ ಪರಸ್ಪರ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲೂ ತುಂಬಾ ವರ್ಷಗಳ ಹಿಂದೆಯೇ ಇವರಿಬ್ಬರು ಡಿವೋರ್ಸ್​ ಆಗಬೇಕಿತ್ತಂತೆ. ಆದರೆ, ಮಕ್ಕಳು ಚಿಕ್ಕವರಾಗಿದ್ದ ಕಾರಣ ದೊಡ್ಡವರಾಗುವವರೆಗೂ ಸುಮ್ಮನಿದ್ದರು. ಇದೀಗ ಮಕ್ಕಳು ದೊಡ್ಡವರಾಗಿ ಒಂದು ಹಂತಕ್ಕೆ ಬಂದಿದ್ದು, ಡಿವೋರ್ಸ್​ಗೆ ಇದು ಸೂಕ್ತ ಸಮಯವೆಂದು ತಿಳಿದು ಇಬ್ಬರು ಬೇರೆಯಾಗಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ.

    ಇನ್ನು ಡಿವೋರ್ಸ್​ ನಿರ್ಧಾರದ ಹಿಂದೆ ಯಾವುದೇ ವೈಯಕ್ತಿಕ ದ್ವೇಷವಾಗಲಿ ಅಥವಾ ಕೌಟುಂಬಿಕ ಕಲಹಗಳಾಗಲಿ ಇರಲಿಲ್ಲ ಎಂದು ಸ್ಟಾರ್​ ಜೋಡಿಯ ಸ್ನೇಹ ಬಳಗ ತಿಳಿಸಿದೆ. ಧನುಷ್​ ಅವರ ಕೆಲಸದ ಸ್ವಭಾವವೇ ಡಿವೋರ್ಸ್​ಗೆ ಕಾರಣ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಸಿನಿಮಾವೇ ತನ್ನ ಸರ್ವಸ್ವ ಎಂದು ಭಾವಿಸಿರುವ ಧನುಷ್​, ಕುಟುಂಬಕ್ಕೆ ಸಮಯ ನೀಡುತ್ತಿರಲಿಲ್ಲ. ಇದೇ ವಿಚಾರಕ್ಕೆ ಐಶ್ವರ್ಯಾ ಜತೆ ಜಗಳವು ನಡೆಯುತ್ತಿತ್ತು. ಆದರೆ, ಜಗಳದ ನಂತರವೂ ಧನುಷ್​ ಹೊಸ ಚಿತ್ರಗಳಿಗೆ ಸಹಿ ಹಾಕುತ್ತಿದ್ದರು ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ.

    ಧನುಷ್ ಅವರು ಸಿನಿಮಾಗಳನ್ನು ತಪ್ಪಿಸಿಕೊಳ್ಳುವ ಮಾಧ್ಯಮವಾಗಿ ಬಳಸಿಕೊಂಡರು. ಏಕೆಂದರೆ, ಅಂತರ್ಮುಖಿಯಾಗಿರುವ ಅವರಿಗೆ ತನ್ನ ಸಮಸ್ಯೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿಯೇ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

    ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿರುವ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.

    ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)

    ಧನುಷ್​-ಐಶ್ವರ್ಯಾ ನಡುವೆ ನಡೆಯುತ್ತಿತ್ತು ಜಗಳ: ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು!

    ಈ ವಿಷಯದಲ್ಲಿ ಟಾಲಿವುಡ್​ ಬೆಸ್ಟ್​ ಅಂತೆ: ಕನ್ನಡ ಸಿನಿ ಇಂಡಸ್ಟ್ರಿ ವಿರುದ್ಧ ಅಪ್ಸರಾ ರಾಣಿ ಗಂಭೀರ ಆರೋಪ

    ಅಕ್ಕ or ಆಂಟಿ ಎಂದು ಕರೆಯಬೇಕೆ? ನೆಟ್ಟಿಗನ ಪ್ರಶ್ನೆಗೆ ಖ್ಯಾತ ನಿರೂಪಕಿ ಅನಸೂಯಾ ಉತ್ತರ ಹೀಗಿತ್ತು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts