More

    VIDEO| ಟಾಲಿವುಡ್​ ಐಟಂ ಸಾಂಗ್​​ಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ ಚಾಹಲ್​ ಪತ್ನಿ ಧನಶ್ರೀ: ವಿಡಿಯೋ ವೈರಲ್​

    ನವದೆಹಲಿ: ಟೀಮ್​ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಪತ್ನಿ ಬಗ್ಗೆ ಬಹುತೇಕರಿಗೆ ತಿಳಿದಿದೆ. ಏಕೆಂದರೆ, ಅವರೊಬ್ಬರ ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​. ಅವರ ಹೆಸರು ಧನಶ್ರೀ ವರ್ಮ. ನೃತ್ಯ ಸಂಯೋಜಕಿ ಆಗಿರುವ ಧನಶ್ರೀ ಓರ್ವ ಯೂಟ್ಯೂಬರ್​ ಕೂಡ ಹೌದು. ಯುಟ್ಯೂಬ್​ನಲ್ಲಿ ವಿವಿಧ ಡ್ಯಾನ್ಸ್​ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತ ಗಮನ ಸೆಳೆಯುತ್ತ ಬಂದಿರು ಧನಶ್ರೀ ವರ್ಮ ಅವರು ಈಗ ಟಾಲಿವುಡ್​ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

    ತೆಲುಗಿನ “ಮಾಚರ್ಲ ನಿಯೋಜಕವರ್ಗಂ” ಸಿನಿಮಾದ ಐಟಂ ಸಾಂಗ್​ ರಾ ರಾ ರೆಡ್ಡಿ ಹಾಡಿಗೆ ಧನಶ್ರೀ ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಈ ಸಾಂಗ್​ ಟಾಲಿವುಡ್​​ನಲ್ಲಿ ಸಿಕ್ಕಾಪಟ್ಟೆ ಹಿಟ್​ ಆಗಿದೆ. ಈ ಐಟಂ ಸಾಂಗ್​ನಲ್ಲಿ ರಾನು ರಾನು ಅಂಟುಂದೆ ಸಿನ್ನದೋ ಎಂಬ ಸಾಲನ್ನು ಬಳಸಿಕೊಳ್ಳಲಾಗಿದೆ. ಇದು ನಿತಿನ್​ ಅಭಿನಯದ ಜಯಂ ಸಿನಿಮಾದ ಹಾಡು. ಅದನ್ನು ಅವರದ್ದೇ ಆದ ಮಾಚರ್ಲ ನಿಯೋಜಕವರ್ಗಂ ಹೊಸ ಸಿನಿಮಾದಲ್ಲಿ ರೀಮಿಕ್ಸ್​ ಮಾಡಲಾಗಿದೆ. ಈ ಹಾಡಿಗೆ ಸಿನಿಮಾದಲ್ಲಿ ನಟಿ ಅಂಜಲಿ ಅವರು ನಿತಿನ್​ ಜೊತೆ ಮೈಚಳಿ ಬಿಟ್ಟು ಕುಣಿದಿದ್ದಾರೆ.

    ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಕಷ್ಟು ಸಾಮಾಜಿಕ ಜಾಲತಾಣ ಬಳಕೆದಾರರು ರೀಲ್ಸ್​ ಮತ್ತು ಶಾರ್ಟ್ಸ್​ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಚಾಹಲ್​ ಪತ್ನಿ ಧನಶ್ರೀ ಸಹ ಹೆಜ್ಜೆ ಹಾಕಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಆಲ್​​ವೇಸ್​ ಬಾರ್ನ್​ ರೆಡಿ. ನಿಮ್ಮ ಶಕ್ತಿಯು ಯಾವಾಗಲೂ ಪರಿಮಾಣವನ್ನು ಹೇಳುತ್ತದೆ. ನೀವು ಮಾತನಾಡುವ ಮೊದಲು ಅದು ನಿಮ್ಮನ್ನು ಪರಿಚಯಿಸುತ್ತದೆ ಎಂದು ಅಡಿಬರಹ ನೀಡಿದ್ದಾರೆ.

    ಧನಶ್ರೀ ಸೊಂಟ ಬಳುಕಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದು, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಮಾಚರ್ಲ ನಿಯೋಜಕವರ್ಗಂ, ಆಗಸ್ಟ್​ 12ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ನಿತಿನ್​, ಕೃತಿಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಯಾರನ್ನೂ ಬಿಟ್ಟಿಲ್ಲ: ಸಹೋದರನ ಖಾಸಗಿ ಜೀವನದ ಸ್ಫೋಟಕ ರಹಸ್ಯ ಬಯಲು ಮಾಡಿದ ಸೋನಮ್​ ಕಪೂರ್​!

    ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ

    ಹಾಲು ಒಕ್ಕೂಟ ನೌಕರರಿಗೂ ಭ್ರಷ್ಟ ನಿಗ್ರಹ ಕಾಯ್ದೆ ಅನ್ವಯ: ಹೈಕೋರ್ಟ್ ಆದೇಶ, ಕೆಎಂಎಫ್ ಅಧಿಕಾರಿ ಅರ್ಜಿ ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts