More

    ಮುರಿದುಬೀಳುತ್ತಾ ಪತಿ-ಪತ್ನಿ ಸಂಬಂಧ? ಡಿವೋರ್ಸ್ ವದಂತಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಧನಶ್ರೀ!

    ನವದೆಹಲಿ: ಕ್ರಿಕೆಟಿಗ ಯುಜವೇಂದ್ರ ಚಾಹಲ್ ಜೊತೆಗಿನ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ಚಾಹಲ್​ ಪತ್ನಿ ಹಾಗೂ ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​ ಧನಶ್ರೀ ವರ್ಮ, ತಮ್ಮ ಇನ್​ಸ್ಟಾಗ್ರಾಂ ಮೂಲಕ ಎಲ್ಲಾ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

    ಧನಶ್ರೀ ಅವರು ತಮ್ಮ ಇನ್​​ಸ್ಟಾಗ್ರಾಂ ಪ್ರೊಫೈಲ್​ನಲ್ಲಿದ್ದ ಚಾಹಲ್​ ಸರ್​ನೇಮ್​ ಅನ್ನು ತೆಗೆದುಹಾಕಿದ ಬಳಿಕ ಇಬ್ಬರ ಡಿವೋರ್ಸ್​ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದಾದ ಬಳಿಕ ಚಾಹಲ್​ ಸ್ಪಷ್ಟನೆ ನೀಡಿದ್ದರು. ಆ ನಂತರ ಎಲ್ಲರ ಚಿತ್ತರ ಧನಶ್ರೀ ಮೇಲಿತ್ತು. ಅವರು ಏನು ಹೇಳುತ್ತಾರೆ ಎಂಬ ಕತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು, ಇದೇ ಮೊದಲ ಬಾರಿಗೆ ವದಂತಿ ಬಗ್ಗೆ ಧನಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

    ಮುರಿದುಬೀಳುತ್ತಾ ಪತಿ-ಪತ್ನಿ ಸಂಬಂಧ? ಡಿವೋರ್ಸ್ ವದಂತಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಧನಶ್ರೀ!

    ನಮ್ಮ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಸಿ ಎಂದು ಪತಿ ಚಾಹಲ್ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ​ ಬರೆದುಕೊಂಡಿದ್ದನ್ನೇ ಧನಶ್ರೀ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ವದಂತಿಗೆ ತಡೆ ನೀಡಿದ್ದಾರೆ. ನೀವೆಲ್ಲ ಅಂದುಕೊಂಡಂತೆ ನಮ್ಮಿಬ್ಬರ ನಡುವೆ ಏನೂ ಆಗಿಲ್ಲ. ನಾವು ಚೆನ್ನಾಗಿಯೇ ಇದ್ದೇವೆ ಎಂಬ ಸಂದೇಶವನ್ನು ಧನಶ್ರೀ ರವಾನಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಧನಶ್ರೀ ವರ್ಮ ಮತ್ತು ಚಾಹಲ್​ ದಾಂಪತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಯಿತು. ಟ್ವಿಟರ್​ನಲ್ಲಿ ಇಬ್ಬರ ವಿಷಯ ಟ್ರೆಂಡ್​ ಸಹ ಆಗಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಅದಕ್ಕೆ ಕಾರಣವೂ ಇದೆ. ಏನೆಂದರೆ, ಧನಶ್ರಿ ಅವರು ತಮ್ಮ ಇನ್​​ಸ್ಟಾಗ್ರಾಂ ಪ್ರೊಫೈಲ್​ನಲ್ಲಿದ್ದ ಚಾಹಲ್​ ಸರ್​ನೇಮ್​ ಅನ್ನು ತೆಗೆದುಹಾಕಿದ್ದಾರೆ. ಅಲ್ಲದೆ, ಕೆಲ ದಿನಗಳಿಂದ ಚಾಹಲ್​ ಕೂಡ ಹೊಸ ಜೀವನ ಆರಂಭ ಎಂದು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಹೀಗಾಗಿ ಇಬ್ಬರ ಡಿವೋರ್ಸ್​ ಸಂಗತಿ ಮುನ್ನೆಲೆಗೆ ಬಂದಿತು.

    ಮುರಿದುಬೀಳುತ್ತಾ ಪತಿ-ಪತ್ನಿ ಸಂಬಂಧ? ಡಿವೋರ್ಸ್ ವದಂತಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಧನಶ್ರೀ!

    ಅಂದಹಾಗೆ ಚಾಹಲ್​ ಮತ್ತು ಧನಶ್ರೀ 2020ರಲ್ಲಿ ವಿವಾಹವಾಗಿದ್ದಾರೆ. ಪರಸ್ಪರ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು, ಮದುವೆಯಾಗುವ ಮೂಲಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಧನಶ್ರೀ ಅವರೇನು ಸಾಮಾನ್ಯ ಮಹಿಳೆಯಲ್ಲ. ಅವರ ಬಗ್ಗೆ ಬಹುತೇಕರಿಗೆ ತಿಳಿದಿದೆ. ಏಕೆಂದರೆ, ಅವರು ಸೋಶಿಯಲ್​ ಮೀಡಿಯಾ ಸೆನ್ಷೆಷನಲ್​ ಸ್ಟಾರ್​. ನೃತ್ಯ ಸಂಯೋಜಕಿ ಮತ್ತು ಓರ್ವ ಯೂಟ್ಯೂಬರ್​ ಕೂಡ ಹೌದು. ಮತ್ತೊಂದೆಡೆ ಚಹಾಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು ಮತ್ತು ಐಪಿಎಲ್‌ನಲ್ಲಿ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. (ಏಜೆನ್ಸೀಸ್​)

    ಧನಶ್ರೀ-ಚಾಹಲ್​ ದಾಂಪತ್ಯ ಜೀವನ ಮುರಿದುಬಿತ್ತಾ? ಸ್ಪಿನ್​ ಮಾಂತ್ರಿಕ ಯಜುವೇಂದ್ರ ಚಾಹಲ್​ ಹೇಳಿದ್ದೇನು?

    ಈವರೆಗೂ ಐದು ಮಂದಿಯನ್ನು ಕೊಂದಿದ್ದೇವೆ… ಮಾಜಿ ಬಿಜೆಪಿ ಶಾಸಕನ ಸ್ಫೋಟಕ ವಿಡಿಯೋ ವೈರಲ್​

    ಈ ಫೋಟೋದಲ್ಲಿರೋ ಬಾಲಕಿ ಯಾರೆಂದು ಗುರುತಿಸುವಿರಾ? ಇಂದು ದಕ್ಷಿಣ ಭಾರತದ ಸ್ಟಾರ್​ ನಟಿ ಈಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts