More

    ಈಗಷ್ಟೇ ಚೇತರಿಕೆ ಕಾಣುತ್ತಿರುವ ಸಿನಿಮಾ ಕ್ಷೇತ್ರದ ಮೇಲೆ ಮತ್ತೆ ರೂಪಾಂತರಿ ಕರೊನಾತಂಕ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ಈಗಾಗಲೇ ತತ್ತರಿಸಿ ಹೋಗಿ ಈಗಷ್ಟೇ ಚೇತರಿಕೆ ಕಾಣುತ್ತಿರುವ ಭಾರತೀಯ ಸಿನಿರಂಗಕ್ಕೆ ಮತ್ತೊಮ್ಮೆ ಭಯ ಶುರುವಾಗಿದೆ. ಕರೊನಾ ರೂಪಾಂತರಿ ಓಮಿಕ್ರಾನ್​ ತಳಿಯಿಂದಾಗಿ ಸಿನಿಮಾ ಕ್ಷೇತ್ರವರಿಗೆ ಆತಂಕ ಕಾಡತೊಡಗಿದೆ.

    ಚಿತ್ರರಂದ ಇತ್ತೀಚೆಗೆ ತಾನೇ ಚೇತರಿಸಿಕೊಳ್ಳುತ್ತಿದೆ. ಸರ್ಕಾರ 50% ನಿಂದ 100% ಸೀಟು ಭರ್ತಿಗೆ ಇತ್ತೀಚೆಗೆ ತಾನೇ ಅವಕಾಶ ನೀಡಿದೆ. ಆದ್ರೆ, ಹೊಸ ವೈರಸ್ ಚಿತ್ರೋದ್ಯಮಕ್ಕೆ ಪೆಟ್ಟು ನೀಡಿದ್ರೆ ಕಷ್ಟ ಚಿತ್ರೋದ್ಯಮ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡೂ ವರ್ಷಗಳಿಂದ ನಮ್ಮ ಜೀವನವನ್ನು ಮನೆಯಲ್ಲೇ ಕಳೆದಿದ್ದೇವೆ. ಮೂರು ವರ್ಷಗಳ ಹಿಂದೆ ಮಾಡಿದ ಸಿನಿಮಾಗಳು ಈಗ ರಿಲೀಸ್ ಮಾಡುತ್ತಿದ್ದೇವೆ. ಆದ್ರೆ, ಹೊಸ ವೈರಸ್ ನಮ್ಮ ಚಿತ್ರೋದ್ಯಮಕ್ಕೆ ಭಯ ಹುಟ್ಟಿಸುತ್ತಿದೆ ಎಂದು ಚಿತ್ರೋದ್ಯಮಿಗಳು ಹೇಳಿದ್ದಾರೆ.

    ಒಂದು ಕಡೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಕುಟುಂಬ ಸಮೇತರಾಗಿ ಬರುವುದು ಕಡಿಮೆ ಆಗಿದೆ. ಇನ್ನೊಂದೆಡೆ ಕರೊನಾ ಭಯ ಹುಟ್ಟಿಸುತ್ತಿದ್ದು, ಮುಂದೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ಅನುಮಾನವಾಗಿದೆ.

    ಇದರ ನಡುವೆ ಕನ್ನಡ ಚಿತ್ರೋದ್ಯಮದವರು ಬಹುತೇಕ ಓಟಿಟಿ, ಪ್ರೈಮ್, ನೆಟ್ ಫ್ಲಿಕ್ಸ್ ನಂತಹ ಫ್ಲಾಟ್ ಫಾರ್ಮ್ ಕಡೆ ಮುಖ ಮಾಡುತ್ತಿದ್ದಾರೆ. ಮುಂದೆ ಚಿತ್ರ ಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಆಲೋಚನೆ ಮಾಡುತ್ತಿದ್ದಾರೆ. ಮುಂದೆ ಆನ್​ಲೈನ್ ಫ್ಲಾಟ್ ಫಾರ್ಮ್​ನಲ್ಲಿ ಬಿಡುಗಡೆ ಮಾಡಿದ್ರೆ ಒಳ್ಳೆಯದು ಎಂಬ ಆಲೋಚನೆ ಮಾಡುತ್ತಿದ್ದು, ಬಿಟ್ಟು ಬಿಡದೇ ಕಾಡುತ್ತಿರುವ ಕರೊನಾ ಚಿತ್ರರಂಗದ ಭವಿಷ್ಯ ಬಗ್ಗೆ ಚಿಂತಿಸುವಂತೆ ಮಾಡಿದೆ.

    ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

    ರಾಡ್​ನಿಂದ ಕುಟಂಬದ ಮೇಲೆ ಹಲ್ಲೆ: ತಡೆಯಲು ಬಂದ ಇನ್ಸ್​ಪೆಕ್ಟರ್​ ಸೇರಿ ಐವರ ಬರ್ಬರ ಹತ್ಯೆ

    ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ್ದ ಮೀಟೂ ಕೇಸ್​ ಮತ್ತೆ ಮುನ್ನೆಲೆಗೆ: ಶ್ರುತಿ ಹರಿಹರನ್​ಗೆ ಪೊಲೀಸರ ಬುಲಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts