More

    ಧಾರವಾಡದ ಮೆಡಿಕಲ್​ ಕಾಲೇಜಿನಲ್ಲಿ ಕೋವಿಡ್​ ಸ್ಫೋಟ: 66 ವಿದ್ಯಾರ್ಥಿಗಳಲ್ಲಿ ಕರೊನಾ ಪಾಸಿಟಿವ್​

    ಧಾರವಾಡ: ದೇಶದಲ್ಲಿ ಕೋವಿಡ್​ ಪ್ರಕರಣಗಳು ಸಂಪೂರ್ಣವಾಗಿ ಇಳಿಕೆಯಾಗಿದೆ ಅಂದ ಮಾತ್ರಕ್ಕೆ ಕರೊನಾ ಸಂಪೂರ್ಣ ಮುಗಿದು ಹೋಗಿಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಏಕೆಂದರೆ ಇತ್ತೀಚೆಗೆ ಜನರು ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದಾರೆ. ಮಾಸ್ಕ್​ ಧರಿಸುವಿಕೆ ಕಡಿಮೆ ಆಗಿದೆ. ಸಾಮಾಜಿಕ ಅಂತರ ಮಾತ್ರ ನಾಪತ್ತೆಯಾಗಿದೆ. ಕರೊನಾ ಇಲ್ಲವೇ ಇಲ್ಲ ಅನ್ನುವಂತೆ ಆರಾಮಾಗಿ ಜನರು ಓಡಾಡಿಕೊಂಡಿದ್ದಾರೆ. ಆದರೆ, ಕೋವಿಡ್​ ಇನ್ನು ಮುಗಿದಿಲ್ಲ ಎಂಬುದನ್ನು ಜನರು ಮರೆಯಬಾರದು ಎಂಬುದಕ್ಕೆ ಧಾರವಾಡದ ಈ ಘಟನೆ ಎಚ್ಚರಿಕೆ ಗಂಟೆಯಾಗಿದೆ.

    ಧಾರವಾಡ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕರೊನಾ ಸ್ಫೋಟವಾಗಿದೆ. ಬರೋಬ್ಬರಿ 66 ವಿದ್ಯಾರ್ಥಿಗಳಿಗೆ ಕೊವಿಡ್ ಪಾಸಿಟಿವ್ ಆಗಿದೆ. ಸತ್ತೂರು ಬಡಾಣೆಯಲ್ಲಿರುವ ಕಾಲೇಜಿನಲ್ಲಿ ಆರಂಭದಲ್ಲಿ 4 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ತಪಾಸಣೆ ಒಳಪಡಿಸಲಾಗಿತ್ತು.

    ಇದೀಗ ವರದಿ ಬಂದಿದ್ದು, 66 ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದೆ. ಸೋಂಕಿತರನ್ನು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ 200 ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.

    ಕರೊನಾ ಸ್ಫೋಟ ಆಗುತ್ತಿದ್ದಂತೆ ಮೆಡಿಕಲ್‌ ಕಾಲೇಜಿಗೆ ಧಾರವಾಡ ಡಿಸಿ ನಿತೇಶ್​ ಪಾಟೀಲ್ ಭೇಟಿ ನೀಡಿದ್ದಾರೆ. ಡಿಸಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಎಲ್ಲವನ್ನು ಪರಿಶೀಲನೆ ನಡೆಸಿರುವ ಡಿಸಿ ಎಲ್ಲ ವಿದ್ಯಾರ್ಥಿಗಳಿಗೆ ಕೊವಿಡ್ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದವರಿಗೂ ಪರೀಕ್ಷೆ ಸೂಚಿಸಿದ್ದಾರೆ.

    ಇನ್ನು ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ನಡೆಯಲಿರುವ ಮದುವೆಗಳಲ್ಲಿ ಭಾಗಿಯಾಗಲಿರುವ ಶೇ. 76 ರಷ್ಟು ಮಂದಿ ಕರೊನಾ ಸೋಂಕಿನಿಂದ ಯಾವುದೇ ತೊಂದರೆ ಇಲ್ಲ ಎಂದು ನಂಬಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಆದರೆ, ಜನರು ಸಮಾರಂಭಗಳಲ್ಲಿ ಮುಕ್ತವಾಗಿ ಓಡಾಡಿಕೊಂಡು ಇರುವುದು ಅಪಾಯಕ್ಕೆ ಆಹ್ವಾನ ನೀಡುವುದಂತೂ ಗ್ಯಾರೆಂಟಿ ಎಂದು ಸರ್ವೆ ತಿಳಿಸಿದೆ.

    ಲೋಕಲ್​ಸರ್ಕಲ್​ ಸಂಸ್ಥೆ ಭಾರತದ 319 ಜಿಲ್ಲೆಗಳಲ್ಲಿ ಸರ್ವೆ ಮಾಡಲಾಗಿದ್ದು, 17 ಸಾವಿರಕ್ಕೂ ಹೆಚ್ಚು ನಾಗರಿಕರು ಸರ್ವೆಗೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಶೇ. 62 ರಷ್ಟು ಪುರುಷರು ಮತ್ತು ಶೇ. 38ರಷ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದಾರೆ. ಲೋಕಲ್​ಸರ್ಕಲ್​ ವರದಿಯ ಪ್ರಕಾರ ಅನೇಕ ರಾಜ್ಯಗಳು ಮದುವೆಯಲ್ಲಿ ಸೀಮಿತ ಜನರು ಪಾಲ್ಗೊಳ್ಳಬೇಕೆಂಬ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಶೇ. 100 ರಷ್ಟು ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.

    ಸಾಂಕ್ರಮಿಕಗೂ ಮೊದಲು ಬುಕ್​ ಆಗಿದ್ದಷ್ಟೇ ಕಲ್ಯಾಣ ಮಂಟಪಗಳು ಈಗಲೂ ಬುಕ್​ ಆಗಿವೆ ಎಂದು ವರದಿಯಲ್ಲಿ ತಿಳಿಸಿದೆ. ನವೆಂಬರ್​ 14 ರಿಂದ ಡಿಸೆಂಬರ್​ 13ರವರೆಗೆ ದೆಹಲಿ ಒಂದರಲ್ಲೇ 1.5 ಲಕ್ಷ ಮದುವೆ ನಡೆಯಲಿದ್ದು, ದೇಶಾದ್ಯಂತ ಬರೋಬ್ಬರಿ 25 ಲಕ್ಷ ಕ್ಕೂ ಹೆಚ್ಚು ವಿವಾಹ ಸಮಾರಂಭಗಳು ನಡೆಯಲಿವೆ. ತಲಾ ಹತ್ತು ಮಂದಿಯಲ್ಲಿ 6 ಮಂದಿ ನಿಶ್ಚಿತಾರ್ಥ ಮತ್ತು ಮದುವೆ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂಬುದು ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ, ಕರೊನಾ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಆಗಿರುವುದರಿಂದ ನವೆಂಬರ್​-ಡಿಸೆಂಬರ್​ನಲ್ಲಿ ಮದುವೆ ಹಾಗೂ ನಿಶ್ಚಿತಾರ್ಥಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ ಮದುವೆಗಳಲ್ಲಿ ಭಾಗವಹಿಸುವುದರಿಂದ ಕರೊನಾ ಹರಡಬಹುದು ಎಂದು ಕಳೆದ ಬಾರಿ ಶೇ. 57ರಷ್ಟು ಮಂದಿ ನಂಬಿದ್ದರು. ಆದರೆ, ಈ ಬಾರಿ ಶೇ. 60 ರಷ್ಟು ಮಂದಿ ಏನು ಸಮಸ್ಯೆಯಿಲ್ಲ ಎಂದು ನಂಬಿದ್ದಾರೆ.

    ದೇಶಾದ್ಯಂತ ಮಾಸ್ಕ್​ ಮರೆಯಾಗಿದೆ. ಸಾಮಾಜಿಕ ಅಂತರ ಕಾಣೆಯಾಗಿದ್ದು, ಕರೊನಾ ಲಸಿಕೆಯಿಂದ ಪಡೆದ ಪ್ರತಿಕಾಯಗಳು ಕ್ಷಿಣಿಸುವ ಸಾಧ್ಯತೆ ಇದ್ದು, ನಿಶ್ಚಿತಾರ್ಥ ಮತ್ತು ಮದುವೆಗಳಲ್ಲಿ ಗುಂಪು ಗುಂಪಾಗಿ ಜನ ಭಾಗವಹಿಸುತ್ತಿರುವುದು ಕೋವಿಡ್​ ಅಪಾಯ ಹೆಚ್ಚಿಸುವ ಮತ್ತು ಮೂರನೇ ಅಲೆಯ ಆತಂಕವನ್ನು ಸೃಷ್ಟಿಸಿದೆ ಎಂದು ಸರ್ವೇ ತಿಳಿಸಿದೆ.

    ದುಬಾರಿ ಟೊಮ್ಯಾಟೊಗೆ ಗೌರಿಬಿದನೂರಲ್ಲಿ ಇಬ್ಬರು ಬಲಿ! ತೋಟದಲ್ಲೇ ನಡೀತು ಘೋರ ಕೃತ್ಯ, ಇಲ್ಲಿ ಯಾರದ್ದು ತಪ್ಪು?

    VIDEO| ಬರ್ತ್​ಡೇ ಪಾರ್ಟಿಗೆ ಟ್ರ್ಯಾಕ್ಟರ್​ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪೋರಿ!

    ಟೆಕ್ಕಿ ಜತೆ ರಿಸೆಪ್ಷನ್​ ಮಾಡ್ಕೊಂಡ ಚನ್ನಪಟ್ಟಣ ವಧು: ಮಧ್ಯರಾತ್ರಿ ಆಕೆ ಮಾಡಿದ ಕೆಲ್ಸಕ್ಕೆ ಮದ್ವೆಯೇ ಮುರಿದು ಬಿತ್ತು

    ಉಗ್ರರಿಗೆ ಗುಟ್ಟಾಗಿ ಹಣ ನೀಡ್ತಿದ್ದ ಮಂಗಳೂರು ದಂಪತಿಗೆ 10 ವರ್ಷ ಶಿಕ್ಷೆ- ಸಭ್ಯಳಂತಿದ್ದ ಪತ್ನಿ ಮಾಡುತ್ತಿದ್ದುದು ಭಯಾನಕ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts