More

    ಶಿವರಾತ್ರಿ ಹಬ್ಬದಂದೇ ಗ್ರಾಹಕರಿಗೆ LPG ದರ ಏರಿಕೆ ಬಿಸಿ: ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ ಭಾರೀ ಏರಿಕೆ

    ನವದೆಹಲಿ: ಶಿವರಾತ್ರಿ ಹಬ್ಬದ ದಿನದಂದೇ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಇಂದು ಬೆಳಗ್ಗೆ (ಮಾ.1) ರಾಷ್ಟ್ರದ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು ಎಲ್​ಪಿಜಿ ಸಿಲಿಂಡರ್​ ಬೆಲೆಯ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ.

    ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಬರೋಬ್ಬರಿ 105 ಏರಿಕೆ ಕಂಡಿದ್ದು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿದೆ. 5 ಕೆಜಿ ಸಿಲಿಂಡರಿನ ಬೆಲೆಯಲ್ಲಿ 27 ರೂಪಾಯಿ ಏರಿಕೆ ಕಂಡಿದ್ದು, 569 ರೂ. ಮುಟ್ಟಿದೆ.

    ಫೆ. 1ರಂದು ಕೇಂದ್ರ ಬಜೆಟ್​ ಮಂಡನೆಗೆ ಒಂದು ಗಂಟೆ ಬಾಕಿ ಇರುವಾಗಲೇ ವಾಣಿಜ್ಯ ಬಳಕೆಯ ಎಲ್​​ಪಿಸಿ ಸಿಲಿಂಡರಿನ ಬೆಲೆಯಲ್ಲಿ 19.5 ರೂಪಾಯಿ ಇಳಿಕೆಯಾಗಿದ್ದು, ಇದೀಗ 105 ರೂಪಾಯಿ ಏರಿಕೆಯಾಗಿದ್ದು, ಹೋಟೆಲ್​ ಉದ್ಯಮ ಮೇಲೆ ಪರಿಣಾಮ ಬೀರಲಿದ್ದು, ಗ್ರಾಹಕರ ಜೇಬಿಗೂ ಇದರ ಬಿಸಿ ತಟ್ಟಲಿದೆ.

    ಇನ್ನು ಖುಷಿಯ ವಿಚಾರವೇನೆಂದರೆ 14 ಕೆಜಿಯ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಾಗಲೇ ಗೃಹಬಳಕೆಯ ಎಲ್​ಪಿಜಿ ದರ ಗಗನಮುಖಿಯಾಗಿದ್ದು, ಮತ್ತೆ ಏರಿಕೆಯಾದರೆ ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸದ್ಯ ಬೆಲೆಯಲ್ಲಿ ಸ್ಥಿರತೆ ಇರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. (ಏಜೆನ್ಸೀಸ್​)

    ಮಾನವನ ದೇಹಗಳೇ ಆವಿಯಾಗುತ್ತಿದೆ… ಯೂಕ್ರೇನ್​ ವಿರುದ್ಧ ರಷ್ಯಾ ಇಂಥಾ ಕೀಳುಮಟ್ಟಕ್ಕೆ ಇಳಿಯಿತಾ!?

    ಅದೃಷ್ಟದ ಬೆನ್ನಲ್ಲೇ ಕಚ್ಚಾ ಬಾದಾಮ್​ ಗಾಯಕನಿಗೆ ದುರಾದೃಷ್ಟ: ಕಾರು ಖರೀದಿಸಿದವನಿಗೆ ಕಾದಿತ್ತು ಶಾಕ್!​​​

    ಮೀನುಗಾರರ ಬಲೆಗೆ ಬಿದ್ದ 800 ಕೆಜಿ ತೂಕದ ಈ ದೈತ್ಯ ಮೀನಿನ ಬೆಲೆ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts