More

    ಸಿಎಂ ಸರ್​ ನನಗೆ ಸಹಾಯ ಮಾಡಿ…ಯುವಕನ ಬೋರ್ಡ್​ ನೋಡಿ ಕಾರು ನಿಲ್ಲಿಸಿದ ಸಿಎಂ ಸ್ಟಾಲಿನ್​!

    ಚೆನ್ನೈ: ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್​ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಸಾಕಷ್ಟು ಜನಪರ ಕೆಲಸಗಳನ್ನು ಮಾಡುತ್ತಿರುವುದಲ್ಲದೆ, ನಾನು ಸಿಎಂ ಮಾತ್ರವಲ್ಲ ಕಾಮನ್​ ಮ್ಯಾನ್​ ಕೂಡ ಎಂಬುದನ್ನು ಆಗಾಗ ನಿರೂಪಿಸುತ್ತಿದ್ದಾರೆ.

    ಇತ್ತೀಚೆಗೆ ಸರ್ಕಾರಿ ಬಸ್​ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಅಲ್ಲದೆ, ಬೆಳಗ್ಗೆ ವಾಯುವಿಹಾರಕ್ಕೆ ಸಾಮಾನ್ಯ ಜನರಂತೆ ಯಾವುದೇ ಅಂಗರಕ್ಷಕರು ಇಲ್ಲದೆ ಹೊರ ಹೋಗಿ ಜನ ಸಾಮಾನ್ಯರನ್ನು ಭೇಟಿಯಾಗುವ ಮೂಲಕ ನಾನು ಕಾಮನ್​ ಮ್ಯಾನ್​ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಅದೇ ರೀತಿ ನಡೆದುಕೊಂಡಿದ್ದಾರೆ.

    ನಿನ್ನೆ (ಫೆ.03) ವಿಧಾನಸಭೆಗೆ ಹೋಗುವಾಗ ಮಾರ್ಗ ಮಧ್ಯೆ ತೆಲುಗು ಯುವಕನನ್ನು ನೋಡಿ ತಮ್ಮ ವಾಹನವನ್ನು ನಿಲ್ಲಿಸಿ ಮಾತನಾಡಿದ್ದಾರೆ. ಸಿಎಂ ಬರುವುದನ್ನು ನೋಡಿ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಸತೀಶ್ ಎಂಬ ಯುವಕ ಚೆನ್ನೈನ ಟಿಟಿಕೆ ರಸ್ತೆಯಲ್ಲಿ “ಸಿಎಂ ಸರ್​ ಹೆಲ್ಪ್​ ಮಿ”​ ಎಂಬ ಬೋರ್ಡ್​ ಹಿಡಿದು ನಿಂತಿದ್ದರು.

    ಬೋರ್ಡ್​ ಹಿಡಿದು ನಿಂತಿರುವುದನ್ನು ಕಂಡ ಸಿಎಂ ಸ್ಟಾಲಿನ್​ ಅವರು ಕಾರು ನಿಲ್ಲಿಸಿ, ಆತನನ್ನು ಹತ್ತಿರ ಕರೆದು ಏನು ನಿನ್ನ ಸಮಸ್ಯೆ ಎಂದು ಕೇಳಿದರು. ಬಳಿಕ ಯುವಕ ಸಿಎಂ ಬಳಿ ನನಗೊಂದು ಮೆಡಿಕಲ್​ ಸೀಟು ಕೊಡಿ ಎಂದು ಕೇಳಿಕೊಂಡರು. ಅಲ್ಲದೆ, ನೀಟ್ ಪರೀಕ್ಷೆಯನ್ನು ವಿರೋಧಿಸುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ಸತೀಶ್ ಶ್ಲಾಘಿಸಿದರು ಮತ್ತು ಮುಖ್ಯಮಂತ್ರಿಗೆ ಧನ್ಯವಾದವನ್ನು ಅರ್ಪಿಸಿದರು.

    12 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರೂ ನೀಟ್‌ನಿಂದ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಸತೀಶ್​ ಸಿಎಂ ಬಳಿ ಹೇಳಿಕೊಂಡರು. ನೀಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿದ್ಯಾರ್ಥಿಗೆ ವಿವರಿಸಿದರು ಮತ್ತು ಅವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅವರು ವಿದ್ಯಾರ್ಥಿಯನ್ನು ತಮ್ಮ ತವರಿಗೆ ಮರಳುವಂತೆ ವಿನಂತಿಸಿದರು ಎಂದು ತಮಿಳುನಾಡು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

    ಇದೇ ಸಂದರ್ಭದಲ್ಲಿ ಎನ್.ಸತೀಶ್ ಅವರು ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ರದ್ದುಗೊಳಿಸುವಂತೆ ಒತ್ತಾಯಿಸಿ ಸಿಎಂ ಸ್ಟಾಲಿನ್ ಅವರನ್ನು ಕೋರಿದರು. (ಏಜೆನ್ಸೀಸ್​)

    ಇಂದು ವಿಶ್ವ ಕ್ಯಾನ್ಸರ್​ ದಿನ: ಆಹಾರ, ಜೀವನಪದ್ಧತಿ ಸುಧಾರಣೆಯಿಂದ ಉತ್ತಮ ಜೀವನ

    ಉಪನ್ಯಾಸಕನ ಹುದ್ದೆ ಕೊಡಿಸ್ತೇನೆಂದು ಯುವಕನ ಬಟ್ಟೆ ಬಿಚ್ಚಿ ಯುವತಿ ಜತೆ ಮಲಗಿಸಿದರು! ಶಿರಸಿಯಲ್ಲೊಂದು ಭಯಾನಕ ಕೃತ್ಯ

    ದ್ವಿತೀಯ ಪಿಯುಸಿ ಪರೀಕ್ಷೆಗೆ ರೆಡಿಯಾಗಿ- ಇಲ್ಲಿದೆ ನೋಡಿ 42 ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts