More

    ನೋಡಲಾಗದ ಸಂದೇಶಗಳು! ನಟಿಯರು ಎದುರಿಸೋ ದಿನನಿತ್ಯದ ಸಮಸ್ಯೆ ಬಿಚ್ಚಿಟ್ಟ ಗಾಯಕಿ ಚಿನ್ಮಯಿ

    ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ವಿರುದ್ಧ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಮುಕ್ತವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಚಿನ್ಮಯಿ ಅವರು ಈ ಹಿಂದೆ ಗಾಯಕ ರಘು ದೀಕ್ಷಿತ್​ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿ ಆಗಿದ್ದರು. ಅನ್ಯಾಯ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣಗಳ ವರದಿ ಆದಾಗಲೆಲ್ಲ ಚಿನ್ಮಯಿ ಜಾಲತಾಣದಲ್ಲಿ ತಮ್ಮ ಧ್ವನಿಗೂಡಿಸುತ್ತಾರೆ.

    ಇದೀಗ ಲಖನೌದಲ್ಲಿ ನಡೆದ ಪ್ರಕರಣಕ್ಕೆ ಚಿನ್ಮಯಿ ಧ್ವನಿಗೂಡಿಸಿದ್ದರು. ಅಷ್ಟಕ್ಕೂ ಲಖನೌದಲ್ಲಿ ನಡೆದಿದ್ದೇನೆಂದರೆ ಟ್ರಾಫಿಕ್​ ಸಿಗ್ನಲ್​ ಬಳಿ ಕ್ಯಾಬ್​ ಡ್ರೈವರ್​ಗೆ ಪ್ರಿಯದರ್ಶಿನಿ ಎಂಬ ಯುವತಿ ಹಿಗ್ಗಾಮುಗ್ಗ ಥಳಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ, ಡ್ರೈವರ್​ ಮೇಲೆ ಕೈ ಮಾಡಿದ ಯುವತಿಯನ್ನು ಬಂಧಿಸುವಂತೆ #ArrestLucknowGirl ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು.

    ಇದಾದ ಬಳಿಕ ಸಮರ್ಥನೆ ಮಾಡಿಕೊಂಡಿದ್ದ ಪ್ರಿಯದರ್ಶಿನಿ, ರೆಡ್​ ಲೈಟ್​ ಸಿಗ್ನಲ್​ ಇದ್ದರು ಕಾರು ನನ್ನನ್ನು ಟಚ್​ ಮಾಡಿಕೊಂಡು ಹೋಯಿತು. ಹೀಗಾಗಿ ನಾನು ಆತನನ್ನು ಹಿಡಿದು ಥಳಿಸಿ, ಫೋನ್​ ಒಡೆದು ಹಾಕಿದೆ. ಸ್ಥಳದಲ್ಲಿ ಪೊಲೀಸರು ಮತ್ತು ಜನರಿದ್ದರು ಸುಮ್ಮನೇ ನೋಡುತ್ತಾ ನಿಂತಿದ್ದರು. ಓರ್ವ ಹುಡುಗಿಯಾಗಿ ನನ್ನನ್ನು ನಾನು ರಕ್ಷಿಸಿಕೊಳ್ಳಬಾರದೇ ಎಂದು ಪ್ರಿಯದರ್ಶಿನಿ ಪ್ರಶ್ನೆ ಮಾಡಿದ್ದರು. ಅಲ್ಲದೆ, ಒಂದು ವರ್ಷದಿಂದ ನನಗೆ ಕಿರುಕುಳ ನೀಡಲಾಗುತ್ತದೆ. ಈ ಬಗ್ಗೆ ದೂರು ನೀಡಿದರು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಈ ಘಟನೆಯಲ್ಲಿ ಅನೇಕರು ಕ್ಯಾಬ್​ ಡ್ರೈವರ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಇದೀಗ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿನ್ಮಯಿ, ಆ ಯುವತಿ ಆ ರೀತಿ ವರ್ತಿಸಬಾರದಿತ್ತು. ಈ ರೀತಿ ಯಾರೇ ಮಾಡಿದರೂ ತಪ್ಪು ಎಂದಿದ್ದಾರೆ. ಈ ರೀತಿ ಚಿನ್ಮಯಿ ಮಾತನಾಡಿದ್ದೇ ತಡ ಕೆಲವರು ಅವರನ್ನು ಕೆಟ್ಟದಾಗಿ ಟ್ರೋಲ್​ ಮಾಡಲು ಆರಂಭಿಸಿದ್ದಾರೆ. ಚಿನ್ಮಯಿ ಅವರು ಏನೇ ಹೇಳಿಕೆ ನೀಡಿದರೂ ಕೆಲವರು ಅವರನ್ನು ಗುರಿಯಾರಿಸಿಕೊಂಡು ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

    ಕೆಟ್ಟ ಸಂದೇಶಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಚಿನ್ಮಯಿ, ಸಾವಿರಾರು ಮಹಿಳೆಯರಿಗೆ ಈ ರೀತಿಯ ಕೆಟ್ಟ ಸಂದೇಶಗಳನ್ನು ಕೆಲ ಪುರುಷರು ಕಳುಹಿಸುತ್ತಾರೆ. ಸಾವಿರಾರು ನಟಿಯರು ಕೂಡ ದಿನನಿತ್ಯ ಇಂಥದ್ದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮರ್ಮಾಂಗ ಮತ್ತು ಹಸ್ತಮೈಥುನದ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಅವುಗಳನ್ನು ನೋಡಿ ಯಾರೊಬ್ಬರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇವರುಗಳ ಮಧ್ಯೆ ಕೆಲವರು ಒಳ್ಳೆಯ ರೀತಿಯಲ್ಲಿ ಕಾಮೆಂಟ್​ ಮಾಡುತ್ತಾರೆಂದು ಹೇಳಿದ್ದಾರೆ. (ಏಜೆನ್ಸೀಸ್​​)

    ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!

    ‘ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಯಾಕೆ ಬೇಕು?’ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಶ್ನೆ

    40 ಚಪಾತಿ ತಿಂದು ದೃಷ್ಟಿ ಕಳೆದುಕೊಂಡ 12 ವರ್ಷದ ಬಾಲಕ! ತಲೆಯಲ್ಲಿ ಕೀವು: ವೈದ್ಯರೇ ಶಾಕ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts