More

    ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಖತರ್ನಾಕ್​ ಖದೀಮರ ಬಂಧನ: ಚಿಂದಿ ಗ್ಯಾಂಗ್​ ಬಗ್ಗೆ ಎಚ್ಚರಿಕೆ ಇರಲಿ

    ಬೆಂಗಳೂರು: ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಖದೀಮರಿಬ್ಬರನ್ನು ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು 25 ವರ್ಷದ ಸಮೀರ್ ಏರೋನ್ ಹಾಗೂ 22 ವರ್ಷದ ಮೊಹಮದ್‌ ಎಂದು ಗುರುತಿಸಲಾಗಿದೆ.

    ಚಿಂದಿ ಗ್ಯಾಂಗ್ ಅಂತಾನೆ ಈ ಗ್ಯಾಂಗ್ ಫೇಮಸ್ ಆಗಿತ್ತು. ಚಿಂದಿ ಐಟಂ ಕಲೆಕ್ಟ್ ಮಾಡುವ ಆಟೋದಲ್ಲಿ ಬಂದು ಸ್ಕೆಚ್ ಹಾಕಿ ದರೋಡೆ ಮಾಡುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಚಿನ್ನ ಕದ್ದು ಪರಾರಿಯಾಗುತ್ತಿದ್ದರು. ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಚಿಂದಿಗ್ಯಾಂಗ್​ನ ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿ ಇದ್ದ 450 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ರಾಡ್, ಆಟೋ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

    ಬಾಗಲಗುಂಟೆ ಠಾಣಾ ವ್ಯಾಪ್ತಿಯ ಒಂದು ಪ್ರತಿಷ್ಠಿತ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ಕಳ್ಳತನ ನಡೆದಿತ್ತು. ಏಪ್ರಿಲ್ 9ರಂದು ಈ ಬಡಾವಣೆಯಲ್ಲಿ ವಾಸವಿದ್ದ ಖಾಸಗಿ ಕಂಪನಿಯ ಡೈರೆಕ್ಟರ್ ವಿಶ್ವನಾಥ್ ಎಂಬುವರು ಕೆಲಸದ ನಿಮಿತ್ತ ಫ್ಯಾಮಿಲಿ ಸಮೇತ ದೆಹಲಿಗೆ ತೆರಳಿದ್ದರು. ದೆಹಲಿ ಹೋಗುತ್ತಿದ್ದಂತೆ ಸಕ್ರೀಯರಾಗಿದ್ದ ಗ್ಯಾಂಗ್ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದರು.

    ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಖತರ್ನಾಕ್​ ಖದೀಮರ ಬಂಧನ: ಚಿಂದಿ ಗ್ಯಾಂಗ್​ ಬಗ್ಗೆ ಎಚ್ಚರಿಕೆ ಇರಲಿ

    ಡೈರೆಕ್ಟರ್ ವಿಶ್ವನಾಥ್ ಬೆಂಗಳೂರಿಗೆ ವಾಪಸ್ ಬಂದ ಮೇಲೆ ಘಟನೆ ಬೆಳಕಿಗೆ ಬಂದಿತ್ತು. ದರೋಡೆ ಮಾಡಿದ್ದ ಗ್ಯಾಂಗ್ ಒಂದು ಸಣ್ಣ ಸುಳಿವನ್ನು ಸಹ ಬಿಡದಂತೆ ಸಖತ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸಮೀರ್ ಏರೋನ್ ಹಾಗೂ ಮೊಹಮದ್‌ನನ್ನು ಬಂಧಿಸಿದ್ದಾರೆ.

    ಇನ್ನು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಭಾರಿ ತಲೆ ನೋವಾಗಿತ್ತು. ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಆರೋಪಿಗಳ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ. ಆದ್ರೆ ಮನೆ ಕಳ್ಳತನ ಮಾಡಿದ ದಿನ ಆ ಏರಿಯಾದಲ್ಲಿ ಓಡಾಡಿದ್ದ ಒಂದು ಚಿಂದಿ ಆಯುವ ಆಟೋ ಮತ್ತು ಆ ಗ್ಯಾಂಗ್ ಕುರುಹು ಮಾತ್ರ ಸಿಕ್ಕಿತ್ತು. ಸಿಸಿಟಿವಿಯಲ್ಲಿ ಇವರ ಚಲನವಲನ ಬಿಟ್ರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪೊಲೀಸರು ಆಟೋವನ್ನು ಹುಡುಕುವಷ್ಟರಲ್ಲಿ ಆರೋಪಿಗಳು ಆ ಆಟೋವನ್ನು ಕೂಡ 60 ಸಾವಿರಕ್ಕೆ ಮಾರಾಟ ಮಾಡಿದ್ದರು.

    ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಖತರ್ನಾಕ್​ ಖದೀಮರ ಬಂಧನ: ಚಿಂದಿ ಗ್ಯಾಂಗ್​ ಬಗ್ಗೆ ಎಚ್ಚರಿಕೆ ಇರಲಿ

    ಓರ್ವ ಆರೋಪಿ ದೆಹಲಿಗೆ ಪರಾರಿಯಾಗಿದ್ರೆ ಮತ್ತೋರ್ವ ಬೆಂಗಳೂರಿನಲ್ಲಿ ಬಾಂಗ್ಲಾ ಗ್ಯಾಂಗ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಆದ್ರೆ ಮಾರಿದ ಅಟೋದವನ ಬಳಿ ಆರೋಪಿಯ ನಂಬರ್ ಇತ್ತು. ನಂಬರ್ ಟ್ರೇಸ್ ಮಾಡಿದಾಗ ಓರ್ವ ಬಾಂಗ್ಲಾ ಟೀಮ್​ನಲ್ಲಿ ಪತ್ತೆಯಾಗಿದ್ದ. ದೆಹಲಿಗೆ‌ ತೆರಳಿದ್ದವನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ದಾವೋಸ್ ಪ್ರವಾಸ ಯಶಸ್ವಿ, ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಸಚಿವ ಮುರುಗೇಶ್ ನಿರಾಣಿ

    ಜಂಟಿಯಾಗಿದ್ದ ರಶ್ಮಿಕಾ-ವಿಜಯ್​ ಇದೀಗ ಒಂಟೊಂಟಿ: ಅನುಮಾನವನ್ನು ನಿಜ ಮಾಡಿದ ರಶ್ಮಿಕಾ ಮಂದಣ್ಣ!

    ಜ್ಯೋತಿಷ್ಯ ಕೇಳಿ ಹೊರ ಬಂದ ತಕ್ಷಣವೇ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts