More

    ನಿನ್ನ ಜತೆ ಮಾತನಾಡಬೇಕಿದೆ ಬಾ…! ಪ್ರಿಯಕರನನ್ನು ನಂಬಿ ಹೋದ ಪ್ರೇಯಸಿಯ ದುರಂತ ಸಾವು

    ಚೆನ್ನೈ: ಮದ್ರಾಸ್​ ಕ್ರಿಶ್ಚಿಯನ್​ ಕಾಲೇಜು ವಿದ್ಯಾರ್ಥಿನಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ 1.45ರ ಸುಮಾರಿಗೆ ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ಶ್ವೇತಾ (20) ಎಂದು ಗುರುತಿಸಲಾಗಿದೆ. ಆರೋಪಿ ರಾಮಂಚಂದ್ರನ್​ (25) ಗುರುವಾರ ಮಧ್ಯಾಹ್ನ ಶ್ವೇತಾ ಜತೆ ವಾಗ್ವಾದಕ್ಕೆ ಇಳಿದಿದ್ದ. ರೈಲು ನಿಲ್ದಾಣದ ಎದುರು ಇರುವ ಕಾಲೇಜು ನಡುವಿನ ರಸ್ತೆಯಲ್ಲಿ ಇಬ್ಬರ ನಡುವೆ ಜೋರು ವಾಗ್ವಾದ ನಡೆಯುತ್ತಿದ್ದ ವೇಳೆ ಚಾಕು ತೆಗೆದ ರಾಮಚಂದ್ರನ್​ ತನ್ನ ಗಂಟಲು ಹಿಡಿದು ತಾನೇ ಕುಯ್ದುಕೊಂಡು ಸಾಯುವುದಾಗಿ ಆಕೆಯನ್ನು ಬೆದರಿಸಿದ್ದಾನೆ. ಆದರೆ, ವಿದ್ಯಾರ್ಥಿನಿ ಆತನಿಂದ ಅಂತರ ಕಾಯ್ದುಕೊಂಡು ರೈಲು ನಿಲ್ದಾಣದ ಕಡೆ ಹೋಗುವಾಗ ತಕ್ಷಣ ಆಕೆಯನ್ನು ಹಿಂಬಾಲಿಸಿ ಹೋಗಿ ಆಕೆಯ ಕುತ್ತಿಗೆ ಕುಯ್ದು, 6 ಬಾರಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ದಾರಿಹೋಕರು ಬರ್ಬರ ಹತ್ಯೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ಶ್ವೇತಾ ಕೊಲೆಯಾಗಿದ್ದನ್ನು ಕಣ್ಣಾರೆ ನೋಡಿ ಆಕೆಯ ಗೆಳತಿಯೊಬ್ಬಳು ಜೋರಾಗಿ ಅಳಲು ಶುರು ಮಾಡಿದ್ದಾಳೆ. ಇತ್ತ ಆರೋಪಿ ರಾಮಚಂದ್ರನ್​ ತನ್ನನ್ನು ತಾನು ಕೊಂದುಕೊಳ್ಳಲು ಮುಂದಾದಾಗ ದಾರಿಹೋಕರು ಅದನ್ನು ತಡೆದು ಆತನನ್ನು ಸಮೀಪದ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

    ಇಬ್ಬರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ರೈಲಿನಲ್ಲಿ ನಾಗಪತ್ತಿನಂಗೆ ಹೋಗುವಾಗ ಒಂದೆಡೆರಡು ಬಾರಿ ಇಬ್ಬರು ಭೇಟಿಯಾಗಿದ್ದಾರೆ. ಅದೇ ಭೇಟಿ ಪರಿಚಯವಾಗಿ 3 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಆದರೆ, ಒಂದು ತಿಂಗಳಿಂದ ಶ್ವೇತಾ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಇದು ರಾಮಚಂದ್ರನ ಆಕ್ರೋಶಕ್ಕೆ ಕಾರಣವಾಯಿತು. ರಾಮಚಂದ್ರ ಫೋನ್​ ಮಾಡಿದಾಗಲೆಲ್ಲ ಆಕೆಯ ಫೋನ್​ ಬಿಜಿ ಬರುತ್ತಿತ್ತು. ಕೋವಿಡ್​ ಲಾಕ್​ಡೌನ್​ ಆದಾಗಿನಿಂದ ಇಬ್ಬರು ಫೋನ್​ ಮೂಲಕವೇ ಸಂಪರ್ಕದಲ್ಲಿದ್ದರು.

    ಗುರುವಾರ ಇಬ್ಬರು ಪರಸ್ಪರ ಭೇಟಿ ಆಗಲು ನಿರ್ಧರಿಸಿದರು. ಶ್ವೇತಾ ಕಾಲೇಜಿಗೆ ಬಂದದಿದ್ದಳು. ಅಲ್ಲಿಗೆ ರಾಮಚಂದ್ರನು ಬಂದಿದ್ದನು. ಈ ವೇಳೆ ಶ್ವೇತಾ ಬ್ರೇಕ್​ ಅಪ್​ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ರಾಮಚಂದ್ರನ್, ತನ್ನ ಸಿಟ್ಟನ್ನು ನಿಯಂತ್ರಿಸಲಾಗದೇ ತಾಳ್ಮೆ ಕಳೆದುಕೊಂಡು ಅತೀವ ಕೋಪದಲ್ಲಿ ಶ್ವೇತಾಳನ್ನು​ ಕೊಲೆ ಮಾಡಿದ್ದಾನೆ.

    ಅಂದಹಾಗೆ ಶ್ವೇತಾ ಚೆನ್ನೈನ ಕ್ರೋಮಪೇಟ್​ ನಿವಾಸಿ. ಡಿಪ್ಲೊಮೋ ಇನ್​ ಮೆಡಿಕಲ್​ ಲ್ಯಾಬೋರೇಟರಿ ಟೆಕ್ನಾಲಜಿ ಕೋರ್ಸ್​ನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಆಗಿದ್ದಳು. ರಾಮಚಂದ್ರನ್​ ಕೂಡ ಇಂಜಿನಿಯರ್​ ಪದವೀಧರನಾಗಿದ್ದು, ನಾಗಪತ್ತಿನಂ ಜಿಲ್ಲೆಯ ಥಿರುಕ್ಕುವಲೈ ನಿವಾಸಿ. ಈತ ಚೆಂಗಲ್ಪಟ್ಟುವಿನಲ್ಲಿರುವ ಕಾರು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಮರೈಮಲೈ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ.

    ಪ್ರತ್ಯಕ್ಷದರ್ಶಿಯ ಪ್ರಕಾರ ಇಬ್ಬರು ಮಾತನಾಡುತ್ತಾ ರೈಲು ನಿಲ್ದಾಣದ ಕಡೆ ಹೋಗುತ್ತಿದ್ದರು. ತಾಂಬರಂ ರೈಲ್ವೆ ಕ್ವಾಟ್ರಸ್ ಬಳಿ ಗುರುವಾರ 1.45 ಸುಮಾರಿಗೆ ನಡೆದು ಹೋದರು. ಇದೇ ವೇಳೆ ರಾಮಚಂದ್ರನ್​ ಆಕೆಯ ಮೇಲೆ ದಾಳಿ ಮಾಡಿದ್ದಾನೆಂದು ಹೇಳಿದ್ದಾರೆ. ಪ್ರಿಯಕರ ದಾಳಿಗೆ ಒಳಗಾದ ಶ್ವೇತಾ ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಲೈಯುರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಂಪಾದಕೀಯ: ಮರು ಆರಂಭದ ಪರ್ವ- ಸಹಜ ಸ್ಥಿತಿಗೆ ಮರಳುವ ಸಮಾಧಾನ

    ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!

    ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts