More

    ಹಿಂದು ಎಂಬ ಕಾರಣಕ್ಕೆ ಅಫ್ರಿದಿ ಕೊಟ್ಟ ಕಿರುಕುಳದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪಾಕ್​ ಮಾಜಿ ಆಟಗಾರ ಕನೇರಿಯಾ!

    ಇಸ್ಲಮಾಬಾದ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಮಾಜಿ ನಾಯಕ ಶಾಹೀದ್​ ಅಫ್ರಿದಿ ವಿರುದ್ಧ ತುಂಬಾ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ನಾನೊಬ್ಬ ಹಿಂದು ಎಂಬ ಕಾರಣಕ್ಕೆ ಆಟದ ಅಥವಾ ಪಂದ್ಯದ ದಿನಗಳಲ್ಲಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ದೂರಿದ್ದಾರೆ. ಇದಲ್ಲದೆ, ಅಫ್ರಿದಿ ಓರ್ವ ಸುಳ್ಳುಗಾರ, ಕುತಂತ್ರಿ ಹಾಗೂ ಚಾರಿತ್ರ್ಯಹೀನ ವ್ಯಕ್ತಿ ಎಂದು ಕನೇರಿಯಾ ಜರಿದಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಕನೇರಿಯಾ, ಸಾರ್ವಜನಿಕವಾಗಿ ನನ್ನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಮೊದಲ ವ್ಯಕ್ತಿಯೆಂದರೆ ಅದು ಶೋಯೆಬ್​ ಅಖ್ತರ್​. ಹಿಂದು ಎಂಬ ಕಾರಣಕ್ಕೆ ತಂಡದಲ್ಲಿ ನನ್ನನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತಿಳಿಸಿದ ಅಖ್ತರ್​ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ, ನಂತರದ ದಿನಗಳಲ್ಲಿ ಅಧಿಕಾರಿಗಳು ಅಖ್ತರ್​ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ನನ್ನ ಬಗ್ಗೆ ಮಾತನಾಡುವುದನ್ನು ಅವರು ನಿಲ್ಲಿಸಿದರು. ಆದರೆ, ನನ್ನ ವೃತ್ತಿ ಜೀವನದಲ್ಲಿ ಅದು ನಡೆದಿರುವುದು ಸತ್ಯ. ನಾನು ಯಾವಾಗಲೂ ಅಫ್ರಿದಿಯಿಂದ ನಿಂದನೆಗೆ ಒಳಗಾಗಿದ್ದೇನೆ. ನಾವು ಒಂದೇ ವಿಭಾಗದಲ್ಲಿ ಒಟ್ಟಿಗೆ ಆಡುತ್ತಿದ್ದೆವು. ಆದರೆ, ಅವರು ನನ್ನನ್ನು ಬೆಂಚ್‌ ಕಾಯುವಂತೆ ಮಾಡಿ, ಏಕದಿನ ಪಂದ್ಯಾವಳಿಯನ್ನು ಆಡಲು ಬಿಡಲಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.

    ನಾನು ತಂಡದಲ್ಲಿ ಇರಲು ಅಫ್ರಿದಿಗೆ ಒಂದು ಸ್ವಲ್ಪವೂ ಇಷ್ಟವಿರಲಿಲ್ಲ. ಆತನೊಬ್ಬ ಸುಳ್ಳುಗಾರ, ಕುತಂತ್ರಿ ಏಕೆಂದರೆ, ಆತನದ್ದು ಚಾರಿತ್ರ್ಯಹೀನ ವ್ಯಕ್ತಿತ್ವ. ಆದಗ್ಯೂ ಎಲ್ಲವನ್ನು ಸಹಿಸಿಕೊಂಡು ಆಟದತ್ತ ಮಾತ್ರ ನಾನು ಗಮನ ಹರಿಸುತ್ತಿದೆ ಮತ್ತು ನನ್ನ ಮೇಲಿನ ಎಲ್ಲ ಕುತಂತ್ರಗಳನ್ನು ನಾನು ಕಡೆಗಣಿಸುತ್ತಿದೆ. ಆದರೂ ಶಾಹಿದ್ ಅಫ್ರಿದಿ ಮಾತ್ರ ಇತರ ಆಟಗಾರರ ಬಳಿ ಹೋಗಿ ನನ್ನ ವಿರುದ್ಧ ಇಲ್ಲಸಲ್ಲದ್ದನ್ನು ಹೇಳಿ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದರು. ನಾನು ಅದ್ಭುತ ಪ್ರದರ್ಶನ ನೀಡುತ್ತಿದೆ. ಇದರಿಂದ ಆತನಿಗೆ ನನ್ನ ಮೇಲೆ ಹೊಟ್ಟೆ ಕಿಚ್ಚು ಇತ್ತು. ನಾನು ಪಾಕಿಸ್ತಾನದ ಪರ ಆಡಿದ್ದಕ್ಕೆ ಹೆಮ್ಮೆ ಇದೆ. ನಾನು ಕೃತಜ್ಞನಾಗಿರುತ್ತೇನೆ ಎಂದು ಕನೇರಿಯಾ ತಿಳಿಸಿದರು.

    2009 ರಲ್ಲಿ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಪ್ರೊ-ಲೀಗ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಿ, ಕನೇರಿಯಾ ಅವರನ್ನು 2012 ರಲ್ಲಿ ಇಸಿಬಿಯಿಂದ ನಿಷೇಧಿಸಲಾಯಿತು. ಈ ಬಗ್ಗೆಯೂ ಮಾತನಾಡಿರುವ ಕನೇರಿಯಾ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಮತ್ತು ನಾನು ಯಾವುದೇ ರೀತಿಯ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಎಂದಿಗೂ ಭಾಗಿಯಾಗಿಲ್ಲ. ನನ್ನ ವಿರುದ್ಧ ಸಂಚು ರೂಪಿಸಿ, ನನ್ನನ್ನು ಅದರಲ್ಲಿ ಸಿಲುಕಿಸಿದರು. ಸ್ಪಾಟ್​ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಆರೋಪಿಯ ಹೆಸರಿನ ಜತೆ ನನ್ನ ಹೆಸರನ್ನು ಸೇರಿಸಿದರು. ಆರೋಪಿಯು ನನಗೆ ಮಾತ್ರವಲ್ಲ ಅಫ್ರಿದಿ ಸೇರಿದಂತೆ ತಂಡದ ಇತರೆ ಆಟಗಾರರಿಗೆ ಸ್ನೇಹಿತನಾಗಿದ್ದ. ಆದರೆ, ನನ್ನನ್ನೇ ಏಕೆ ಟಾರ್ಗೆಟ್​ ಮಾಡಿದರು ಎಂಬುದು ನನಗೆ ತಿಳಿಯಲಿಲ್ಲ. ಹೀಗಾಗಿ ನಾನು ನನ್ನ ಕೆಲಸವನ್ನು ಮಾಡುವುದಕ್ಕಾಗಿ ನನ್ನ ಮೇಲೆ ಹೇರಿರುವ ನಿಷೇಧವನ್ನು ತೆಗೆದುಹಾಕಲು ಪಿಸಿಬಿಗೆ ವಿನಂತಿಸಲು ಬಯಸುತ್ತೇನೆ ಎಂದಿದ್ದಾರೆ.

    ನಿಷೇಧದಿಂದ ಹೊರಬಂದಂತಹ ಹಲವಾರು ಮ್ಯಾಚ್​ ಫಿಕ್ಸರ್‌ಗಳಿದ್ದಾರೆ. ಆದರೆ, ನನಗೆ ಮಾತ್ರ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ನಾನು ನನ್ನ ದೇಶಕ್ಕಾಗಿ ಆಡಿದ್ದೇನೆ ಮತ್ತು ಇತರರಂತೆ ನನಗೂ ಅವಕಾಶ ನೀಡಬೇಕು. ನಾನೀಗ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್ ಆಡಲಾಗುತ್ತಿಲ್ಲ. ನಾನು ಯಾವುದೇ ಉದ್ಯೋಗಕ್ಕಾಗಿ ಪಿಸಿಬಿಯನ್ನು ಕೇಳುತ್ತಿಲ್ಲ, ಆದರೆ ದಯವಿಟ್ಟು ಈ ನಿಷೇಧವನ್ನು ತೆಗೆದುಹಾಕಿ, ಇದರಿಂದ ನಾನು ಶಾಂತಿಯುತವಾಗಿ ಬದುಕುತ್ತೇನೆ ಮತ್ತು ನನ್ನ ಕೆಲಸವನ್ನು ಗೌರವದಿಂದ ಮಾಡುತ್ತೇನೆಂದು ಕನೇರಿಯಾ ಮನವಿ ಮಾಡಿಕೊಂಡಿದ್ದಾರೆ.

    ಅಂದಹಾಗೆ ಬಲಗೈ ಬೌಲರ್​ ಆಗಿರುವ ದಿನೇಶ್​ ಕನೇರಿಯಾ ಈವರೆಗೂ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ವಿಕೆಟ್​ಗಳನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ನನ್ನ ಕೊನೆಯ ಉಸಿರು ಇರೋವರೆಗೂ ನಾನು ಮುಸ್ಲಿಮರಿಗೆ ದ್ರೋಹ ಮಾಡಲ್ಲ: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ

    9ನೇ ಪಂದ್ಯದಲ್ಲಾದರೂ ಗೆದ್ದೀತೇ ಮುಂಬೈ? ಇಂದು ರಾಜಸ್ಥಾನ ರಾಯಲ್ಸ್ ಎದುರಾಳಿ

    ಇನ್​ಸ್ಟಾಗ್ರಾಂ ಪ್ರಭಾವಿಗಳ ಪಟ್ಟಿಯಲ್ಲಿ ಆಲಿಯಾ; ರಶ್ಮಿಕಾ ಮಂದಣ್ಣಗೆ 19ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts