More

    ಬಿಗ್​ಬಾಸ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಚಕ್ರವರ್ತಿ ಚಂದ್ರಚೂಡ್; ಆದ್ರೂ ವೀಕ್ಷಕರಿಗಿಲ್ಲ ಸಮಾಧಾನ​!

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ “ಬಿಗ್​ಬಾಸ್​” ತನ್ನ 8ನೇ ಆವೃತ್ತಿಯ ಅಂತಿಮ ಘಟಕ್ಕೆ ಬಂದಿದೆ. ಈ ವಾರವೇ (ಆಗಸ್ಟ್​ 8) ಫೈನಲ್​ ಎಪಿಸೋಡ್​ ನಡೆಯಲಿದ್ದು, ವಿನ್ನರ್​ ಯಾರಾಗಲಿದ್ದಾರೆ ಎಂಬ ಕುತೂಹಲ ಮತ್ತು ಲೆಕ್ಕಾಚಾರ ಆರಂಭವಾಗಿದೆ. ಇದರ ನಡುವೆ ನಿರ್ಗಮಿತ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಭಾರಿ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಬಿಗ್​ಬಾಸ್​ ಮನೆಯಲ್ಲಿನ ಅವರ ದಾಖಲೆ.

    ಚಕ್ರವರ್ತಿ ಚಂದ್ರೂಚೂಡ್​ ಈಗಾಗಲೇ ಮನೆಯಿಂದ ನಿರ್ಗಮಿಸಿದ್ದಾರೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಬಿಗ್​ ಮನೆಗೆ ಎಂಟ್ರಿ ಕೊಟ್ಟ ಚಂದ್ರಚೂಡ್​ ಆರಂಭದಿಂದಲೂ ಅಬ್ಬರಿಸಿ ಬೊಬ್ಬಿರಿದರು. ಸಾಮಾನ್ಯ ವಿಚಾರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. ಅದರಲ್ಲೂ ಸಹ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್​ ಅವರಿಗೆ ಮಧ್ಯದ ಬೆರಳು ತೋರಿಸಿದ್ದು ಚಂದ್ರಚೂಡ್​ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದವು.

    ಚಂದ್ರಚೂಡ್​ ಕೂಡ ಬಿಗ್​ಬಾಸ್​ ಮೂಲಕ ತಮ್ಮದೇ ಅಭಿಮಾನಿಗಳ ಬಳಗವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದಾರೆ. ಅವರು ಮನೆಯಿಂದ ನಿರ್ಗಮಿಸಿದರ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಚಂದ್ರಚೂಡ್​ ಅವರದ್ದೂ ನೇರ ನಡೆಯ ವ್ಯಕ್ತಿತ್ವ ಅಂತಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಾದಗಳೂ ಏನೇ ಇರಲಿ, ಚಂದ್ರಚೂಡ್​ ಮಾತ್ರ ಬಿಗ್​ಬಾಸ್​ ಮನೆಯಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

    ಸುದೀಪ್​ ಅವರ ಒಂದು ಎಪಿಸೋಡ್​ ಅನ್ನು ಇಲ್ಲಿ ನೆನಪು ಮಾಡುವುದಾದರೆ ಚಂದ್ರಚೂಡ್​ ಬಗ್ಗೆ ಅವರು ಒಂದು ಮಾತನ್ನು ಹೇಳಿದ್ದಾರೆ. ಇದುವರೆಗಿನ ಸೀಸನ್​ನಲ್ಲಿ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದು ಅತಿ ಹೆಚ್ಚು ದಿನ ಮನೆಯಲ್ಲಿ ಉಳಿದ ಏಕೈಕ ಸ್ಪರ್ಧಿಯೆಂದರೆ ಅದು ಚಂದ್ರಚೂಡ್​. ಆದರೂ ಸುದೀಪ ಅವರ ಮೆಚ್ಚುಗೆಯನ್ನು ಕೆಲವರು ಒಪ್ಪಿಕೊಂಡಿಲ್ಲ. ದರ್ಬಲ ಸ್ಪರ್ಧಿಯನ್ನು ಶೋ ನಿರ್ಮಾಪಕರು ಬೇಕಂತಲೇ ಉಳಿಸಿಕೊಂಡಿದ್ದರು. ಕಳಪೆ ಪ್ರದರ್ಶನದಿಂದ ಪ್ರತಿಬಾರಿ ನಾಮಿನೇಟ್​ ಆದಾಗ ಬೇಕಂತಲೇ ಅವರನ್ನು ಉಳಿಸಿಕೊಳ್ಳಲಾಯಿತು ಎಂದಿದ್ದಾರೆ.

    ಸಾಮಾನ್ಯವಾಗಿ ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡುವ ಸ್ಪರ್ಧಿಗಳು ಹೆಚ್ಚೆಂದರೆ ಎರಡ್ಮೂರು ವಾರ ಇರಬಹುದು. ಆದರೆ, ಇದೇ ಮೊದಲ ಬಾರಿಗೆ ಚಂದ್ರಚೂಡ್​ ಅವರು ಹೆಚ್ಚಿನ ವಾರಗಳು ಮನೆಯಲ್ಲೇ ಇದ್ದರು. ಕರೊನಾದಿಂದ 75 ದಿನಗಳಿಗೆ ಶೋ ಮೊಟಕುಗೊಂಡಾಗಲೂ ಚಂದ್ರಚೂಡ್​ ಇದ್ದರು. ಇದಾದ ಬಳಿಕ ಲಾಕ್​ಡೌನ್​ ಬಳಿ ಎರಡನೇ ಇನ್ನಿಂಗ್ಸ್​ ಆರ್ಂಭವಾದಗಲೂ ಎರಡ್ಮೂರು ವಾರಗಳವರೆಗೆ ಚಂದ್ರಚೂಡ್​ ಮನೆಯಲ್ಲಿದ್ದರು. ಈ ಮೂಲಕ ಬಿಗ್​ಬಾಸ್​ ಇತಿಹಾಸದಲ್ಲಿ ಚಂದ್ರಚೂಡ್​ ವಿನೂತನ ದಾಖಲೆಯನ್ನು ಬರೆದಿದ್ದಾರೆ. (ಏಜೆನ್ಸೀಸ್​)

    200 ಯುವತಿಯರು, 100 ವಿವಾಹಿತೆಯರು: 23 ವರ್ಷದ ಯುವಕನ ಮೊಬೈಲ್​ನಲ್ಲಿತ್ತು ಸ್ಫೋಟಕ ರಹಸ್ಯ!

    ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಶ್ರೀರಾಮಚಂದ್ರನ ಬೆಡಗಿ: ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ!

    ಜೆಡಿಎಸ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ವಿಜೇತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts