More

    ಜೆಡಿಎಸ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ವಿಜೇತಾ!

    ಬೆಂಗಳೂರು: ಜೆಡಿಎಸ್​ ಪಕ್ಷದ ಬಗ್ಗೆ ಕೇಂದ್ರದ ಮಾಜಿ ಸಚಿವ ದಿವಗಂತ ಅನಂತಕುಮಾರ್​ ಅವರ ಪುತ್ರಿ ವಿಜೇತಾ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ್ದ ಒಂದೇ ಒಂದು ಟ್ವೀಟ್​ನಿಂದ​ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿತ್ತು. ವಿಜೇತಾ ಜೆಡಿಎಸ್​ ಸೇರುತ್ತಾರಾ ಎಂಬ ಬಿಸಿಬಿಸಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ವಿಜೇತಾ ಅವರು ಮತ್ತೊಂದು ಟ್ವೀಟ್​ ಮಾಡಿ ತನ್ನ ಹಿಂದಿನ ಟ್ವೀಟ್​ ಬಗ್ಗೆ ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

    ನನ್ನ ಇತ್ತೀಚಿನ ಟ್ವೀಟ್​ನಲ್ಲಿನ ಹೇಳಿಕೆ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ಈ ನನ್ನ ಟ್ವೀಟ್ ಎಲ್ಲ ಗೊಂದಲಗಳಿಗೆ ತೆರೆ ಎಳೆದು​ ಈ ಚರ್ಚೆಗಳಿಗೆ ಪೂರ್ಣ ವಿರಾಮ ಇಡುತ್ತದೆ ಎಂಬ ಭರವಸೆ ಇದೆ. ಮುಂದೆಯು ಕೂಡ ನಾನು ನಿಮ್ಮೊಂದಿಗೆ ಸಂವಾದವನ್ನು ಮುಂದುವರಿಸುತ್ತೇನೆ ಎಂದು ವಿಜೇತಾ ಟ್ವೀಟ್​ ಮಾಡಿದ್ದು, ಅದರೊಂದಿಗೆ ಸುದೀರ್ಘ ಸಂದೇಶವೊಂದನ್ನು ಲಗತ್ತಿಸಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.

    ರಾಜಕೀಯದಲ್ಲಿ ಸಿದ್ಧಾಂತ, ವಿಶ್ಲೇಷಣೆ ಮತ್ತು ಅವಲೋಕನಗಳು ಇರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಒಂದೇ ಎಂದು ಗೊಂದಲಕ್ಕೊಳಗಾಗುತ್ತವೆ. ಜೆಡಿಎಸ್​ ಕುರಿತ ಹೇಳಿಕೆಯು ನನ್ನ ಅವಲೋಕನವಷ್ಟೇ. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬ ಸದಸ್ಯರ ಜತೆ ತಳುಕು ಹಾಕುವುದು ಸರಿಯಲ್ಲ ಎಂದು ವಿಜೇತಾ ಹೇಳಿದ್ದಾರೆ.

    ನನ್ನ ತಂದೆ ಸುಮಾರು 35 ವರ್ಷಗಳ ವರೆಗೆ ಲಕ್ಷಾಂತರ ಕಾರ್ಯಕರ್ತರ ಜತೆ ಸೇರಿ ಒಂದೊಂದೆ ಇಟ್ಟಿಗೆ ಇಟ್ಟು ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ನಿರ್ಮಿಸಿದ್ದಾರೆ. ನನ್ನ ಅಮ್ಮ ಹಸಿವು, ಪೌಷ್ಠಿಕಾಂಶ, ಪರಿಸರ ಸೇರಿದಂತೆ ಪಕ್ಷಕ್ಕಾಗಿ ಹಾಗೂ ಸಮಾಜಕ್ಕಾಗಿ ಅತ್ಯಂತ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರೂ ಶತ್ರುಗಳಲ್ಲ ಮತ್ತು ಪರಸ್ಪರ ಗೌರವವು ಮೂಲಭೂತವಾದುದು ಎಂದು ನನ್ನ ತಂದೆ ನನಗೆ ಕಲಿಸಿದ್ದಾರೆಂದು ವಿಜೇತಾ ತಿಳಿಸಿದ್ದಾರೆ.

    ನಾನು ಯಾವುದೇ ಪಕ್ಷಕ್ಕೆ ಸೇರುತ್ತೇನೆಂದು ನನ್ನ ಗೌರವದ ಅಭಿವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ನಾನು ಮುಂದೆ ಒಂದು ಸುದೀರ್ಘ ಪ್ರಯಾಣವನ್ನು ಹೊಂದಿದ್ದೇನೆ ಮತ್ತು ನನ್ನ ಮಾತೃಭೂಮಿಯ ಸೇವೆಗಾಗಿ ನನ್ನ ಕಲಿಕೆಯನ್ನು ಹೆಚ್ಚಿಸಲು ಬಯಸುತ್ತೇನೆ ಎಂದಿರುವ ವಿಜೇತಾ, ಕೊನೆಯಲ್ಲಿ ದೇಶವೇ ಮೊದಲೂ ಎಂದು ಹೇಳುವ ಮೂಲಕ ಟ್ವೀಟ್​ ಕೊನೆ ಮಾಡಿದ್ದಾರೆ.

    ಹಿಂದಿನ ಟ್ವೀಟ್​ನಲ್ಲಿ ಏನಿತ್ತು?
    ‘ಕರ್ನಾಟಕ ರಾಜಕೀಯ ನಿಜಕ್ಕೂ ಆಸಕ್ತಿದಾಯಕ ಏಕೆ? ಜೆಡಿಎಸ್​ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗುತ್ತಿದೆ..’ ಎಂದು ವಿಜೇತಾ ಟ್ವೀಟ್​ ಮಾಡಿಕೊಂಡಿದ್ದರು. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಅನಂತಕುಮಾರ್​ರ ಮಗಳು ಜೆಡಿಎಸ್​ ಪರ ಬ್ಯಾಟಿಂಗ್​ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಜೆಡಿಎಸ್​ ಸೇರುತ್ತಿದ್ದಾರಾ ಎಂಬ ಚರ್ಚೆ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಂದು ಟ್ವೀಟ್​ ಮಾಡಿ ವಿಜೇತಾ ಸ್ಪಷ್ಟನೆ ನೀಡಿದ್ದಾರೆ.

    ಜೆಡಿಎಸ್​ ಪರ ಅನಂತಕುಮಾರ್ ಪುತ್ರಿ ಬ್ಯಾಟಿಂಗ್​: ರಾಜ್ಯ ರಾಜಕೀಯದಲ್ಲಿ ಸಂಚಲನ

    ಪಾಸಾದರೂ ಪರೀಕ್ಷೆ ಬರೆಯಲು ಮುಂದಾದ 965 ವಿದ್ಯಾರ್ಥಿಗಳು; ಫಲಿತಾಂಶಕ್ಕೆ ಅತೃಪ್ತರಾದವರಿಗೆ ಪುನಃ ಎಕ್ಸಾಮ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts