More

    ಪೇಟಿಎಂ, ಗೂಗಲ್​ ಪೇ, ಫೋನ್​ಪೇ ಬಳಸ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿದ್ರೆ ನಿಮಗೆ ಒಳ್ಳೆಯದು

    ಇಡೀ ದೇಶ ಕ್ಯಾಶ್​ಲೆಸ್​ ವ್ಯವಹಾರದ ಕಡೆ ತಿರುಗುತ್ತಿದ್ದು, ಆನ್​ಲೈನ್​ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರಿಗೆ ಪಂಗನಾಮ ಹಾಕಲು ವಂಚಕರು ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.

    Googlepay, phonepe ಮತ್ತು paytm ಇಂದ ಹಣ ಪಾವತಿಸುವುದನ್ನು ನೋಡಿದ್ದೇವೆ. ಹಣ ಪಾವತಿ ಆಗಿದೆಯೋ? ಇಲ್ಲವೋ? ಎಂಬುದನ್ನು ಪ್ರತಿ ಪೇಮೆಂಟ್​ ವೇಳೆ ಖಾತರಿಪಡಿಸಿಕೊಳ್ಳುತ್ತೇವೆ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ ಆನ್​ಲೈನ್​ ವಂಚಕರ ಕೈಚಳಕ ನೋಡಿ ಜನರು ಶಾಕ್​ ಆಗಿದ್ದಾರೆ.

    ಹಣ ಪಾವತಿ ಆಗಿರುವಂತೆ ತೋರಿಸುವ ಫ್ರ್ಯಾಂಕ್​ ಪೇಮೆಂಟ್​ ಹೆಸರಿನ ಆ್ಯಪ್​ ಒಂದನ್ನು ಸೈಬರ್​ ವಂಚಕರು ಸೃಷ್ಟಿಸಿದ್ದಾರೆ. ಅಕೌಂಟ್​ಗೆ ಹಣ ಪಾವತಿ ಆಗಿರುವಂತೆ ತೋರಿಸುತ್ತದೆ, ಆದರೆ, ಹಣ ಅಕೌಂಟ್​ಗೆ ಜಮೆ ಆಗುವುದಿಲ್ಲ. ಅಕೌಂಟ್​ ಪರಿಶೀಲಿಸಿಕೊಳ್ಳದೇ ಹಾಗೇ ಬಿಟ್ಟು ಕಳುಹಿಸಿದ್ದಲ್ಲಿ ಪಂಗನಾಮ ಹಾಕಿಕೊಳ್ಳೋದು ಖಚಿತ. ಈ ರೀತಿ ಕೆಲಸ ಮಾಡಿ ಯುವಕನೊಬ್ಬ ಅಂಗಡಿ ಮಾಲೀಕನಿಗೆ ಸಿಕ್ಕಿಬಿದ್ದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಇಂತಹ ವಂಚಕರಿಂದ ಎಲ್ಲರೂ ಎಚ್ಚರಿದಿಂದಿರಬೇಕು.

    ಕೇವಲ 5 ರೂಪಾಯಿಗೆ 40 ಕಿ.ಮೀ! ವಿನೂತನ ಬ್ಯಾಟರಿ ಬೈಸಿಕಲ್​ಗೆ ಜನರು ಫಿದಾ

    ‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

    ತಾಲಿಬಾನ್​​ ಯಶಸ್ಸಿನಲ್ಲಿ ಪಾಕ್​ ಪಾತ್ರ ಪ್ರಮುಖ ಎನ್ನುತ್ತದೆ ಅಮೆರಿಕದ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts