ಕೊಚ್ಚಿ: ಕೇರಳದ ಪ್ರಖ್ಯಾತ ಯೂಟ್ಯೂಬರ್ ಶ್ರೀಕಾಂತ್ ವೆಟ್ಟಿಯಾರ್ ಎಂಬುವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಆರೋಪಿ ಶ್ರೀಕಾಂತ್ ಹಿಟ್ ಚಲನಚಿತ್ರಗಳ ಸ್ಪೂಫ್ ವೀಡಿಯೊಗಳನ್ನು ಮಾಡುತ್ತಿದ್ದ. ಆತನ ಫ್ಯಾನ್ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬಳು, ರಾಜಕೀಯ ಬದ್ಧತೆ ಮತ್ತು ಮಹಿಳಾ ಸಬಲೀಕರಣದ ವಿಷಯಗಳ ಮೇಲೆ ಶ್ರೀಕಾಂತ್ ಅವರು ಮಾಡಿದ್ದ ವಿಡಿಯೋಗಳಿಂದ ತುಂಬಾ ಪ್ರಭಾವಿತಳಾಗಿದ್ದೆ ಎಂದಿದ್ದಾರೆ.
ಸಂತ್ರಸ್ತೆ ಮಹಿಳೆಗೆ ಮೊದಲೇ ಮದುವೆಯಾಗಿದ್ದು, 8 ವರ್ಷದ ಮಗ ಕೂಡ ಇದ್ದಾನೆ. ಕೊಚ್ಚಿಯಲ್ಲಿ ವಾಸವಿರುವಾಗ ಶ್ರೀಕಾಂತ್ ಪರಿಚಯವಾಗಿತ್ತು. 2021ರ ಫೆಬ್ರವರಿಯಲ್ಲಿ ನನ್ನನ್ನು ಬರ್ತಡೇ ಪಾರ್ಟಿಗೆ ಆಹ್ವಾನಿಸಿದ್ದ. ಇದಾದ ಬಳಿಕ ಮದುವೆಯಾಗುವ ಭರವಸೆ ನೆಪದಲ್ಲಿ ಎರ್ನಾಕುಲಂ ಮತ್ತು ಅಲುವಾದಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಅತ್ಯಾಚಾರ ಎಸಗಿದ್ದಾನೆ ಮತ್ತು ಕೊಚ್ಚಿಯ ಹೋಟೆಲ್ ರೂಮ್ ಒಂದರಲ್ಲೂ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದೀಗ ದೂರು ಹಿಂಪಡೆಯುವಂತೆ ತನ್ನ ಸ್ನೇಹಿತರನ್ನು ಹಿಂದೆ ಬಿಟ್ಟು ಶ್ರೀಕಾಂತ್ ನನ್ನ ಮನವೊಲಿಸುತ್ತಿದ್ದಾನೆಂದು ಮಹಿಳೆ ಹೇಳಿದ್ದಾಳೆ. ಸದ್ಯ ಕೊಚ್ಚಿಯ ಠಾಣೆಯಲ್ಲಿ ಶ್ರೀಕಾಂತ್ ವಿರುದ್ಧ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶ್ರೀಕಾಂತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)
ಮದ್ವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ
ತಂದೆಯ ಚೀರಾಟ ಕೇಳಿ ಪುತ್ರ ಬಳಿಗೆ ಹೋದ; ಕೆಲವೇ ಕ್ಷಣಗಳಲ್ಲಿ ಸಾವಿಗೀಡಾದ್ರು ಅಪ್ಪ-ಮಗ..