More

    ಚಂದ್ರ-ಮಂಗಳ ಗ್ರಹಕ್ಕೆ ಬುಲೆಟ್​ ಟ್ರೈನ್? ಅಂತರ್​ಗ್ರಹ ಸಾರಿಗೆ ವ್ಯವಸ್ಥೆಗೆ ಜಪಾನ್​ ಪ್ಲಾನ್​ ಹೀಗಿದೆ ನೋಡಿ…​

    ಟೋಕಿಯೊ: ಸೈನ್ಸ್​ ಫಿಕ್ಸನ್​​ ಸಿನಿಮಾಗಳಲ್ಲಿ ನಾವು-ನೀವು ನೋಡಿರುವುದನ್ನು ವಾಸ್ತವ ರೂಪಕ್ಕೆ ತರಲು ಜಪಾನ್​ ಮುಂದಾಗಿದೆ. ಭವಿಷ್ಯದಲ್ಲಿ ಮಾನವ ವಿವಿಧ ಗ್ರಹಗಳಿಗೆ ಪ್ರಯಾಣ ಬೆಳೆಸಬಹುದು! ಹೌದು, ನೀವು ಓದುತ್ತಿರುವುದು ಕಲ್ಪನೆಯಲ್ಲಿ ವಾಸ್ತವ. ಇಂಥದ್ದೊಂದು ಪ್ರಯತ್ನಕ್ಕೆ ಜಪಾನ್​ ಸರ್ಕಾರ ಕೈಹಾಕಿದೆ. ತಮ್ಮ ತಂತ್ರಜ್ಞಾನದ ಮೂಲಕ ಮಾನವರನ್ನು ಬುಲೆಟ್​ ಟ್ರೈನ್​ ಮೂಲಕ ಮಂಗಳ ಮತ್ತು ಚಂದ್ರ ಗ್ರಹಕ್ಕೆ ಕಳುಹಿಸಲು ಜಪಾನ್​​ ಅಂತರ್​ಗ್ರಹ ಪ್ರಯಾಣದ ಯೋಜನೆಯನ್ನು ರೂಪಿಸುತ್ತಿದೆ ಎಂದು ವೆದರ್​ ಚಾನೆಲ್​ ಇಂಡಿಯಾ ವರದಿ ಮಾಡಿದೆ.

    ಈ ಯೋಜನೆಗಾಗಿ ಜಪಾನ್​ ಗಾಜಿನ ಆವಾಸಸ್ಥಾನದ ರಚನೆಯನ್ನು ನಿರ್ಮಿಸಲು ಪ್ಲಾನ್​ ಮಾಡಿದೆ. ಈ ರಚನೆಯು ಭೂಮಿಯ ಗುರುತ್ವಾಕರ್ಷಣೆ, ವಾತಾವರಣ ಮತ್ತು ಟೊಪೊಗ್ರಫಿ (ಒಂದು ಪ್ರದೇಶದ ನೈಸರ್ಗಿಕ ಮತ್ತು ಕೃತಕ ಭೌತಿಕ ಲಕ್ಷಣಗಳ ವ್ಯವಸ್ಥೆ)ಯನ್ನು ನಕಲು ಮಾಡಲಿದ್ದು, ನಾವು ನಮ್ಮ ಮನೆಯಂತೆ ಭಾವಿಸುವಂತೆ ಮಾಡುತ್ತದೆ.

    ಕಾಜಿಮಾ ಕನ್‌ಸ್ಟ್ರಕ್ಷನ್‌ನ ಸಹಯೋಗದೊಂದಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದು, ಇಡೀ ಬಾಹ್ಯಾಕಾಶ ಪ್ರಯಾಣದ ಸ್ವರೂಪವನ್ನೇ ಇದು ಬದಲಾಯಿಸಬಹುದು ಎಂದು ವೆದರ್​ ಚಾನೆಲ್​ ವರದಿ ಮಾಡಿದೆ. ಈ ಯೋಜನೆಯನ್ನು ಕಳೆದ ವಾರದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಶೋಧಕರು ಘೋಷಣೆ ಮಾಡಿರುವುದಾಗಿ ಯುರೋ ಏಷ್ಯನ್ ಟೈಮ್ಸ್ ವರದಿ ಮಾಡಿದೆ.

    ಭೂಮಿಯಿಂದ ಚಂದ್ರ ಮತ್ತು ಮಂಗಳಕ್ಕೆ ಕ್ಯಾಪ್ಸುಲ್​ ಸಂಪರ್ಕ
    ಜಪಾನಿನ ಸಂಶೋಧಕರು ಅಂತರ್​ಗ್ರಹ ಸಾರಿಗೆ ವ್ಯವಸ್ಥೆಯನ್ನು ‘ಹೆಕ್ಸಾಟ್ರಾಕ್’ ಎಂದು ಕರೆದಿದ್ದಾರೆ. ಈ ಹೆಕ್ಸಾಟ್ರ್ಯಾಕ್ ಕಡಿಮೆ ಗುರುತ್ವಾಕರ್ಷಣೆಗೆ ವಿಸ್ತೃತ ಒಡ್ಡುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡಲು ದೂರದ ಪ್ರಯಾಣದ ಸಮಯದಲ್ಲಿ 1ಜಿ ಗುರುತ್ವಾಕರ್ಷಣೆಯನ್ನು ನಿರ್ವಹಿಸುತ್ತದೆ. ಈ ಟ್ರೈನ್ ಹೆಕ್ಸಾಕ್ಯಾಪ್ಸುಲ್ಸ್​ ಎಂದು ಕರೆಯಲ್ಪಡುವ​ ಷಡ್ಭುಜಾಕೃತಿ ಆಕಾರದ ಕ್ಯಾಪ್ಸುಲ್ (ಕೋಶ)​ಗಳನ್ನು ಮಧ್ಯದಲ್ಲಿರುವ ಚಲಿಸುವ ಸಾಧನದದೊಂದಿಗೆ ಹೊಂದಿರುತ್ತದೆ.

    ಜಪಾನಿನ ಸಂಶೋಧಕರ ಪ್ರಸ್ತಾಪದ ಪ್ರಕಾರ, 15 ಮೀಟರ್​ ರೇಡಿಯಸ್​ ಹೊಂದಿರುವ ಮಿನಿ ಕ್ಯಾಪ್ಸುಲ್​ ಭೂಮಿ ಮತ್ತು ಚಂದ್ರ ಗ್ರಹಕ್ಕೆ ಸಂಪರ್ಕ ಕಲ್ಪಿಸಲಿದೆ. ಚಂದ್ರನಿಂದ ಮಂಗಳ ಗ್ರಹಕ್ಕೆ ಸಂಪರ್ಕ ಕಲ್ಪಿಸಬೇಕಾದರೆ, 30 ಮೀಟರ್​ ರೇಡಿಯಸ್​ ಕ್ಯಾಪ್ಸುಲ್​ ಅವಶ್ಯಕತೆ ಇದೆ ಎಂದಿದ್ದಾರೆ. ಈ ಕ್ಯಾಪ್ಸುಲ್, ಪ್ರಸ್ತುತ ಜರ್ಮನಿ ಮತ್ತು ಚೀನಾದಲ್ಲಿರುವ ಮ್ಯಾಗ್ಲೆವ್ ರೈಲುಗಳು ಬಳಸುವ ರೀತಿಯ ವಿದ್ಯುತ್ಕಾಂತೀಯ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

    ಚಂದ್ರನ ಮೇಲಿನ ನಿಲ್ದಾಣಕ್ಕಾಗಿ ಗೇಟ್‌ವೇ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಚಂದ್ರನ ನಿಲ್ದಾಣ ಎಂದು ಕರೆಯಲಾಗುತ್ತದೆ. ಅದೇ ರೀತಿ ಮಂಗಳನಲ್ಲಿರುವ ನಿಲ್ದಾಣವನ್ನು ಮಂಗಳ ರೈಲು ನಿಲ್ದಾಣ ಎಂದು ಕರೆಯಲಾಗುವುದು. ಈ ನಿಲ್ದಾಣ ಮಂಗಳದ ಉಪಗ್ರಹ ಫೋಬೋಸ್‌ನಲ್ಲಿ ನೆಲೆಸಲಿದೆ.

    ಮಾನವ ಬಾಹ್ಯಾಕಾಶ ಶಾಸ್ತ್ರ ಕೇಂದ್ರದ ಪ್ರಕಾರ, ಭೂಮಿಯ ನಿಲ್ದಾಣವನ್ನು ಟೆರ್ರಾ ಸ್ಟೇಷನ್ ಎಂದು ಕರೆಯಲಾಗುತ್ತದೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಉತ್ತರಾಧಿಕಾರಿಯ ಬಾಹ್ಯಾಕಾಶ ನಿಲ್ದಾಣವಾಗಿದೆ. ಸ್ಪೇಸ್ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಬಾಹ್ಯಾಕಾಶ ರೈಲು, ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮ್ಯಾಶಬಲ್ ಇಂಡಿಯಾ ವರದಿ ಮಾಡಿದೆ.

    ಹೆಚ್ಚಿನ ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಯು ಭೂಮಿಯ ನೈಸರ್ಗಿಕ ಮೂಲದ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತದೆ. ಆದಾಗ್ಯೂ, ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಭೂಮಿಯ ಮೇಲಿನ ಸೌಲಭ್ಯಗಳನ್ನು ಮರುಸೃಷ್ಟಿಸುವ ಆವಾಸಸ್ಥಾನವನ್ನು ನಿರ್ಮಿಸಲು ಯೋಜಿಸಿದ್ದಾರೆ. ಕೃತಕ ಗುರುತ್ವಾಕರ್ಷಣೆ, ಹಸಿರು ಪ್ರದೇಶಗಳು ಮತ್ತು ಜಲಮೂಲಗಳೊಂದಿಗೆ ಶಾಂಪೇನ್ ಕೊಳಲಿನ ಆಕಾರದಲ್ಲಿ ಕಿರಿದಾದ ಜೀವ ರಚನೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಈ ರಚನೆಯನ್ನು ‘ದಿ ಗ್ಲಾಸ್’ ಎಂದು ಕರೆಯಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ.

    ಬಾಹ್ಯಾಕಾಶ ಪ್ರಯಾಣದ ವೇಳೆ ಕಡಿಮೆ ಗುರುತ್ವಾಕರ್ಷಣೆಯು ಒಂದು ಪ್ರಮುಖ ಕಾಳಜಿಯಾಗಿದೆ. ಏಕೆಂದರೆ ಇದು ಭೂ ವ್ಯವಸ್ಥೆಯ ಮರುಸೃಷ್ಟಿಯ ಮೇಲೆ ಪರಿಣಾಮ ಬೀರಬಹುದು. ವಿಶ್ವವಿದ್ಯಾನಿಲಯದ ಸಂಶೋಧಕರು ಇದನ್ನು ನಿಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. ಈ ಗ್ಲಾಸ್​ ರಚನೆಯು ಬಾಹ್ಯಾಕಾಶದಲ್ಲಿ ಚಂದ್ರ ಮತ್ತು ಮಂಗಳದ ತಿರುಗುವಿಕೆಯಿಂದ ಉಂಟಾಗುವ ಬಲವನ್ನು ಬಳಸಿಕೊಂಡು ಭೂಮಿಯ ಪರಿಸರಕ್ಕೆ ಸಮಾನವಾದ ಗುರುತ್ವಾಕರ್ಷಣೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಕೃತಕ ಗುರುತ್ವಾಕರ್ಷಣೆಯನ್ನು ರಚಿಸುತ್ತದೆ.

    ಜಪಾನ್‌ನ ದಿ ಅಸಾಹಿ ಶಿಂಬುನ್ ಮಾಧ್ಯಮದ ಪ್ರಕಾರ, ಈ ಯೋಜನೆಯು ಕಾರ್ಯರೂಪಕ್ಕೆ ಬರಲು ಒಂದು ಶತಮಾನ ತೆಗೆದುಕೊಳ್ಳಬಹುದು. ಆದಾಗ್ಯೂ, ಸಂಶೋಧಕರು 2050 ರ ವೇಳೆಗೆ ಮಾರ್ಸ್‌(ಮಂಗಳ)ಗ್ಲಾಸ್ ಮತ್ತು ಲುನಾ(ಚಂದ್ರ)ಗ್ಲಾಸ್‌ನ ಸರಳೀಕೃತ ಮೂಲಮಾದರಿಯ ಆವೃತ್ತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. (ಏಜೆನ್ಸೀಸ್​)

    ಪುಷ್ಪ ಚಿತ್ರದ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್​!

    ಶಾರ್ಜಾದಿಂದ ಹೈದರಾಬಾದ್​ಗೆ ಬರುತ್ತಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ!

    VIDEO| ತುಂಡುಡುಗೆ ತೊಟ್ಟು ಮುಜುಗರಕ್ಕೀಡಾದ ರಶ್ಮಿಕಾಗೆ ಏನಮ್ಮಾ ನಿನ್ನ ಫಜೀತಿ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts