More

    ಸೇನಾ ಹೆಲಿಕಾಪ್ಟರ್​ ಪತನಕ್ಕೆ ಕಾರಣವೇನು? ಪತ್ತೆಯಾದ ಬ್ಲಾಕ್​ಬಾಕ್ಸ್​ ಮೇಲೆ ಎಲ್ಲರ ಕಣ್ಣು!

    ಚೆನ್ನೈ: ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಸುರಕ್ಷಿತವಾಗಿದ್ದ ರಷ್ಯಾ ನಿರ್ಮಿತ ಎಂಐ-17 ಚಾಪರ್ ಪತನವಾಗಿದ್ದು ಹೇಗೆ ಎಂಬ ನಿಗೂಢ ಪ್ರಶ್ನೆಯೊಂದು ಹಾಗೇ ಉಳಿದಿದೆ.

    ಘಟನೆ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಪತನಕ್ಕೆ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ ಸೇನೆಗೆ ಬ್ಲಾಕ್​ ಬಾಕ್ಸ್​ ಸಿಕ್ಕಿದೆ. ಬ್ಲಾಕ್​ಬಾಕ್ಸ್​ನಿಂದ ಹೆಲಿಕಾಪ್ಟರ್​ನ ಅಂತಿಮ ಹಂತದ ಪರಿಸ್ಥಿತಿ ಬಗೆಗಿನ ಡಾಟಾ ಮತ್ತು ಕಾಕ್​ಪಿಟ್​ನಲ್ಲಿ ನಡೆದ ಸಂಭಾಷಣೆಗಳ ವಿವರ ಲಭ್ಯವಾಗಲಿದೆ.

    ಬ್ಲಾಕ್​ಬಾಕ್ಸ್​ ಡೇಟಾವು ಹೆಲಿಕಾಪ್ಟರ್​ ಪತನಕ್ಕೆ ಕಾರಣವಾದ ಅಂಶವನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ. ಹೀಗಾಗಿ ಬ್ಲಾಕ್​ಬಾಕ್ಸ್​ನಲ್ಲಿ ಏನಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಕ್ಷಣಾರ್ಧದಲ್ಲಿ ಘಟಿಸಿದ ಘೋರ ದುರಂತದ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಇಡೀ ದೇಶವೇ ಎದುರು ನೋಡುತ್ತಿದ್ದು, ಬ್ಲಾಕ್​ಬಾಕ್ಸ್​ ಡಾಟಾ ಮೇಲೆ ಕುತೂಹಲ ನೆಟ್ಟಿದೆ.

    ನಿನ್ನೆ ನಡೆದಿದ್ದೇನು?
    ನಿನ್ನೆ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

    ಸೇನಾ ಹೆಲಿಕಾಪ್ಟರ್​ ಪತನ: ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​ ಪತನಕ್ಕೂ ಮುನ್ನ ಕೊನೇ ದೃಶ್ಯ ಲಭ್ಯ

    ಹೆಲಿಕಾಪ್ಟರ್​​ ಪತನದ ವೈರಲ್​ ವಿಡಿಯೋಗೂ ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​​ ಪತನಕ್ಕೂ ಸಂಬಂಧವಿಲ್ಲ: ನಿಜಾಂಶ ಇಲ್ಲಿದೆ!

    2015ರಲ್ಲಿ ರಾವತ್‌ ಬಳಿ ಸುಳಿದುಹೋಗಿದ್ದ ಜವರಾಯ! ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಜನರಲ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts