More

    ಬಿಕಿನಿ ಅಥವಾ ಜೀನ್ಸ್​ ಆಗಿರಲಿ ಇಷ್ಟವಾದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕು: ಪ್ರಿಯಾಂಕಾ ಗಾಂಧಿ

    ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ಇಷ್ಟವಾದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕು ಎಂದಿದ್ದಾರೆ.

    ಉಡುಪಿಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್​ ಧರಿಸಿದ್ದ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲಿಲ್ಲ ಎಂಬ ಆರೋಪದ ನಂತರ ಆ ಆರು ವಿದ್ಯಾರ್ಥಿನಿಯರು ಕೋರ್ಟ್​ ಮೆಟ್ಟಿಲೇರಿದ ಬಳಿಕ ಆರಂಭವಾದ ಹಿಜಾಬ್​ ವಿವಾದವು ಇದೀಗ ರಾಜ್ಯಾದ್ಯಂತ ವ್ಯಾಪಿಸಿದೆ. ಅಲ್ಲದೆ, ಪುದಚೇರಿ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ವಿವಾದ ಕೇಳಿಬರುತ್ತಿದೆ.

    ಇದೀಗ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಅದು ಬಿಕಿನಿಯೇ ಆಗಿರಲಿ, ಘೂಂಘಾಟ್ ಆಗಿರಲಿ, ಜೀನ್ಸ್​ ಆಗಿರಲಿ ಅಥವಾ ಹಿಜಾಬ್​ ಆಗಿರಲಿ ಯಾವ ಬಟ್ಟೆಯನ್ನು ಧರಿಸಬೇಕು ಎಂದು ನಿರ್ಧರಿಸುವುದು ಹೆಣ್ಣು ಮಕ್ಕಳ ಹಕ್ಕು. ಇದನ್ನು ಭಾರತೀಯ ಸಂವಿಧಾನವೇ ಖಚಿತಪಡಿಸಿದೆ. ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್​ ಮಾಡಿದ್ದಾರೆ.

    ಪ್ರಿಯಾಂಕಾ ಟ್ವೀಟ್​ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ಬಿಕಿನಿ ಪದದ ಹ್ಯಾಶ್​ಟ್ಯಾಗ್​ ವೈರಲ್​​ ಆಗಿದ್ದು, ಪರ-ವಿರೋಧ ಚರ್ಚೆ ಆರಂಭವಾಗಿದೆ.

    ಇನ್ನೊಂದೆಡೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್​ ಅವಿರತ ಪ್ರಯತ್ನ ಮಾಡುತ್ತಿದ್ದು, ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣವನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಈ ಬಾರಿ ಹೆಚ್ಚು ಮಹಿಳೆಯರಿಗೆ ಕಾಂಗ್ರೆಸ್​ ಸೀಟ್​ ಅನ್ನು ನೀಡಲಾಗಿದೆ. (ಏಜೆನ್ಸೀಸ್​)

    ಯಮುನೆಗೆ ಬಂದ ಪ್ರಿಯಾಂಕಾ: ವಿಶ್ರಮ್​ ಘಾಟ್​​ನಲ್ಲಿ ಮೊಳಗಿತು ವೇದ ಮಂತ್ರ, ನೆರವೇರಿತು ವಿಶೇಷ ಪೂಜೆ

    ಸ್ಟಾರ್​ ನಟ ರವಿತೇಜ ಜತೆ ಲಿಪ್​ಲಾಕ್​: ಬೋಲ್ಡ್​ ಹೇಳಿಕೆ ನೀಡಿದ ನಟಿ ಮೀನಾಕ್ಷಿ ಚೌಧರಿ!

    ಮಂಡ್ಯದಲ್ಲಿ ಭೀಕರ ಹತ್ಯೆ ಪ್ರಕರಣ: ತಂಗಿ ಗಂಡನ ಮೇಲಿನ ವ್ಯಾಮೋಹಕ್ಕೆ ನಡುರಾತ್ರಿ ನೆತ್ತರು ಹರಿಸಿದ ಹಂತಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts