More

    ಕೇಸ್‌ನಿಂದ ಮುಕ್ತ ಮಾಡಲು 50 ಸಾವಿರ ಲಂಚ ಸ್ವೀಕಾರ: ಎಸ್‌ಐ, ಗುತ್ತಿಗೆ ನೌಕರನಿಗೆ ಜೈಲು ಶಿಕ್ಷೆ

    ಬೆಂಗಳೂರು: ಬಿಎಂಟಿಎಫ್​ನಲ್ಲಿ ದಾಖಲಾಗಿದ್ದ ಪ್ರಕರಣದಿಂದ ಕೈಬಿಡಲು ಆರೋಪಿ ಬಳಿ ಲಂಚ ಪಡೆದಿದ್ದ ಸಬ್ ಇನ್‌ಸ್ಪೆಕ್ಟರ್ ಮತ್ತು ಗುತ್ತಿಗೆ ನೌಕರನಿಗೆ 3 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಿ 23ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

    ಪ್ರಸ್ತುತ ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ವಿ. ಶಿವಕುಮಾರ್ ಮತ್ತು ಕಿಯೋನಿಕ್ಸ್ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ ಬಿಎಂಟಿಎ್ನಲ್ಲಿ ನೇಮಕಗೊಂಡಿದ್ದ ಕ್ಲರ್ಕ್ ಕೆ.ಎನ್. ಚೇತನ್ ಶಿಕ್ಷೆಗೆ ಗುರಿಯಾದವರು.

    2018ರಲ್ಲಿ ಬಿಎಂಟಿಎ್ ಠಾಣೆಯಲ್ಲಿ ಉತ್ತರಹಳ್ಳಿಯ ನಿವಾಸಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪ ಮುಕ್ತ ಮಾಡಲು ಆರೋಪಿಗೆ ಅಂದಿನ ಎಸ್‌ಐ ಶಿವಕುಮಾರ್, 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದ. ಈ ಬಗ್ಗೆ ಎಸಿಬಿಗೆ ನೊಂದ ವ್ಯಕ್ತಿ ದೂರು ನೀಡಿದ್ದರು.

    ಈ ಕುರಿತು ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಬಲೆಬೀಸಿದ್ದರು. ಕ್ಲರ್ಕ್ ಚೇತನ್ ಮತ್ತು ಶಿವಕುಮಾರ್, ದೂರುದಾರನಿಂದ 50 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿಗೆ ಟ್ರ್ಯಾಪ್ ಆಗಿದ್ದರು. ಆರೋಪಿಗಳ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, 2021ರ ಮಾರ್ಚ್‌ನಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

    ತ್ವರಿತವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ. ಲಕ್ಷ್ಮೀನಾರಾಯಣ ಭಟ್, ಎಸ್‌ಐ ಮತ್ತು ಕ್ಲರ್ಕ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳು ಎಂದು ಪರಿಗಣಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಸಿ.ಕೆ. ಸರೋಜಾ, ವಾದ ಮಂಡಿಸಿದ್ದರು.

    ಕೇಸ್ ವಿರುದ್ಧ ಸಾಕ್ಷಿ ನುಡಿದ ದೂರುದಾರ :
    ಅಭಿಯೋಜನೆಯ ವಿರುದ್ಧವಾಗಿ ದೂರುದಾರ ಸಾಕ್ಷಿ ನುಡಿದಿದ್ದಾನೆ. ಸಾಂಧರ್ಬಿಕ ಸಾಕ್ಷ್ಯಾಧಾರಗಳ ಪರಿಗಣಿಸಿದ ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಪ್ರಕರಣದ ವಿರುದ್ಧ ಸಾಕ್ಷಿ ನುಡಿದ ದೂರುದಾರನಿಗೆ ಕಾರಣ ಕೇಳಿ ಕೋರ್ಟ್ ಶೋಕಾಸ್ ನೋಟಿಸ್ ಹೊರಡಿಸಿದೆ. ಮಾರ್ಚ್ 30ಕ್ಕೆ ಪ್ರಕರಣದ ವಿಚಾರಣೆಗೆ ಬರಲಿದೆ.

    ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

    ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಸಂಪತ್ತು: 18 ಸರ್ಕಾರಿ ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಎಸಿಬಿ

    ಐಪಿಎಲ್ ತಂಡಗಳಿಗೆ ಫಿಟ್ನೆಸ್ ತಲೆನೋವು; ಸಿಎಸ್‌ಕೆ, ಡೆಲ್ಲಿ, ಮುಂಬೈಗೆ ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts