More

    ಕಳೆದ ವರ್ಷ ತಂದೆ, ಏಪ್ರಿಲ್​ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನ ಜತೆ ಭಾವಿ ಸೊಸೆಯ ಸಾವು: MLA ಗೆ ಸಾಲು ಸಾಲು ಆಘಾತ

    ಬೆಂಗಳೂರು: ಒಂದು ವರ್ಷದ ಹಿಂದಷ್ಟೇ ತಂದೆಯ ಸಾವಿನ ನೋವಿನಲ್ಲಿದ್ದ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್​ ಅವರು ಕಳೆದ ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಜೀವನದ ಉದ್ದಕ್ಕೂ ಜತೆಯಾಗಿದ್ದ ಪತ್ನಿಯನ್ನು ಕಳೆದುಕೊಂಡಿದ್ದರು. ಇದೀಗ ಜೀವನದಲ್ಲಿ ಆಸರೆಯಾಗಿದ್ದ ಒಬ್ಬನೇ ಪುತ್ರನು ಕೂಡ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅಸುನೀಗಿದ್ದಾನೆ.

    ಕಳೆದ ವರ್ಷ ತಂದೆ, ಏಪ್ರಿಲ್​ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನ ಜತೆ ಭಾವಿ ಸೊಸೆಯ ಸಾವು: MLA ಗೆ ಸಾಲು ಸಾಲು ಆಘಾತ

    ವೈ. ಪ್ರಕಾಶ್ ಅವರಿಗೆ ಒಂದೇ ವರ್ಷದಲ್ಲಿ ಮೂರು ಆಘಾತವಾಗಿದೆ. ಕಳೆದ ವರ್ಷ ಅವರ ತಂದೆ ಯಳಪ್ಪ ತೀರಿಕೊಂಡಿದ್ದರು. ಏಪ್ರಿಲ್​ನಲ್ಲಿ ಪತ್ನಿ ಶಿವಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಿನ್ನೆ ರಾತ್ರಿ ಕರುಣಾಸಾಗರ್​ ಕೂಡ ಅಪಘಾತದಲ್ಲಿ ಮೃತ ಪಟ್ಟಿದ್ದಾನೆ. ಇದ್ದ ಒಬ್ಬ ಮಗನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಇಂಗ್ಲೆಂಡ್​ನಲ್ಲಿ ವ್ಯಾಸಾಂಗ ಮಾಡಿದ್ದ ಕರುಣಾಸಾಗರ್​ಗೆ ಪ್ಯಾಕೇಜಿಂಗ್ ಇಂಡಸ್ಟ್ರಿ ನಿರ್ಮಾಣ ಮಾಡಿಕೊಟ್ಟಿದ್ದರು. ಬ್ಯಾಳಗೊಂಡಹಳ್ಳಿಯಲ್ಲಿ ಕಂಪನಿ ನಡೆಸುತ್ತಿದ್ದ. ಕರುಣಾಸಾಗರ್​ ಹಾಗೂ ಮೃತ ಬಿಂದು ಇಬ್ಬರು ಪ್ರೀತಿ ಮಾಡ್ತಿದ್ರು. ಸದ್ಯದಲ್ಲೇ ಇಬ್ಬರಿಗೂ ಮದುವೆ ಮಾಡಲು ಕರುಣಾಸಾಗರ್ ಕುಟುಂಬಸ್ಥರು ಮುಂದಾಗಿತ್ತು. ಆದರೆ, ವಿಧಿಯಾಟದಲ್ಲಿ ವೈ. ಪ್ರಕಾಶ್​ ಅವರಿಗೆ ಪುತ್ರ ವಿಯೋಗ ಆಗಿದೆ. ಪುತ್ರನ ಜತೆಗೆ ಭಾವಿ ಸೊಸೆಯು ಕೂಡ ಕುಟುಂಬದಿಂದ ದೂರಾಗಿದ್ದು, ಎಲ್ಲರನ್ನು ಕಳೆದುಕೊಂಡಿರುವ ವೈ. ಪ್ರಕಾಶ್​ ಇಂದು ಅನಾಥರಾಗಿದ್ದಾರೆ.

    ಕಳೆದ ವರ್ಷ ತಂದೆ, ಏಪ್ರಿಲ್​ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನ ಜತೆ ಭಾವಿ ಸೊಸೆಯ ಸಾವು: MLA ಗೆ ಸಾಲು ಸಾಲು ಆಘಾತ

    ಡಿ.ಎಂ.ಕೆ. ಪಕ್ಷದಿಂದ ಗೆದ್ದಿರುವ ವೈ.ಪ್ರಕಾಶ್, ಡಿ.ಎಂ.ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೂಡ ಆಗಿದ್ದರು. ಅಪಘಾತ ಆಗಿರುವ ಕಾರು ವೈ.ಪ್ರಕಾಶ್ ಅವರದ್ದೇ. ಕಳೆದ ರಾತ್ರಿ ಬೆಂಗಳೂರಿನಿಂದ ಬಂದು ಕರುಣಾಸಾಗರ್​ ಕಾರು ತೆಗೆದುಕೊಂಡು ಹೋಗಿದ್ದ. ಹೊಸೂರು ಸಮೀಪದ ಬ್ಯಾಳಗೊಂಡಪಲ್ಲಿಗೆ ಕಾರು ತೆಗೆದುಕೊಂಡು ಹೋಗಿದ್ದ. ನಿನ್ನೆ ಕಟ್ಟಡದ ಸಾಮಾಗ್ರಿಗಳ ಖರೀದಿಗೆ ಬಂದಿದ್ದ ಕುರುಣಾಸಾಗರ್, ತನ್ನ ಪ್ರೀಯತಮೆ ಬಿಂದುಳನ್ನು ಭೇಟಿಯಾಗಿದ್ದ. ಬಳಿಕ ರಾತ್ರಿ ಸ್ನೇಹಿತರೆಲ್ಲರು ಆಡಿ ಕಾರಿನಲ್ಲಿ ಹೋಗ್ತಿದ್ರು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕರುಣಾಸಾಗರ್ ಮತ್ತು ಬಿಂದು ಹಾಗೂ ನಾಲ್ವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಕಳೆದ ವರ್ಷ ತಂದೆ, ಏಪ್ರಿಲ್​ನಲ್ಲಿ ಪತ್ನಿ, ಈಗ ಒಬ್ಬನೇ ಪುತ್ರನ ಜತೆ ಭಾವಿ ಸೊಸೆಯ ಸಾವು: MLA ಗೆ ಸಾಲು ಸಾಲು ಆಘಾತ

    ಕರುಣಾಸಾಗರ್​ ಮತ್ತು ಬಿಂದು ಹೊರತುಪಡಿಸಿದರೆ, ಉಳಿದ ಮೃತರನ್ನು ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂದು ಗುರುತಿಸಲಾಗಿದೆ. ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಹಾಗೂ ಹಿಂಬದಿಯಲ್ಲಿ ನಾಲ್ವರು ಕುಳಿತಿದ್ದರು‌. ಎಲ್ಲರೂ ಕೂಡ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತ ಅಕ್ಷಯ್ ಗೋಯಲ್ ಕೇರಳಾ ಮೂಲದವನು, ಉತ್ಸವ್ (ಹರ್ಯಾಣ), ರೋಹಿತ್ (ಹುಬ್ಬಳ್ಳಿ), ಕರುಣಾ ಸಾಗರ್ (ಹೊಸೂರು) ಹಾಗೂ ಉಳಿದವರು ಕೋರಮಂಗಲದ ಜೋಲೋ ಸ್ಟ ಪಿಜಿಯಲ್ಲಿ ವಾಸವಿದ್ರು. (ದಿಗ್ವಿಜಯ ನ್ಯೂಸ್​)

    ಅವ್ರು ದೊಡ್ಡವ್ರು ಬೇಡವ್ವ.. ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದು ಅವನೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಲು…

    ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ಮದುವೆಯಾಗೋ ಹುಡುಗಿಯ ಜತೆ ಶಾಸಕನ ಪುತ್ರನ ಭೀಕರ ಸಾವು

    ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ತಮಿಳುನಾಡು ಶಾಸಕನ ಒಬ್ಬನೇ ಪುತ್ರ ಸಾವು, ಒಟ್ಟು 7 ಮಂದಿ ದುರಂತ ಅಂತ್ಯ

    ಪ್ರಿಯಕರನಿಂದ ಚೂರಿ ಇರಿತ ಪ್ರಕರಣ: ನಿಶ್ಚಿತಾರ್ಥ ನೆರವೇರಿದ ಒಂದೇ ವಾರದಲ್ಲಿ ಯುವತಿ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts