More

    ಬೆಳಗಾವಿಯಲ್ಲಿ MES ಪುಂಡರ ಪುಂಡಾಟ ಸಮರ್ಥಿಸಿಕೊಂಡ ಸಿಎಂ ಉದ್ಧವ್​ ಠಾಕ್ರೆ: ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ

    ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಎಂದೇ ಹೆಸರಾಗಿರುವ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಯ ಪುಡಾರಿಗಳು ನಡೆಸುತ್ತಿರುವ ಪುಂಡಾಟವನ್ನು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಸಮರ್ಥಿಸಿಕೊಂಡಿದ್ದಾರೆ.

    ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಉದ್ಧವ್​ ಠಾಕ್ರೆ ಟ್ವೀಟ್​ ಮಾಡಿದ್ದು, ಪ್ರಧಾನಿ ಮೋದಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಉದ್ಧವ್​ ಪ್ರಕಾರ ಕರ್ನಾಟಕದಲ್ಲಿ ಮರಾಠಿಗರ ಮೇಲೆ ಕನ್ನಡಿಗರು ದೌರ್ಜನ್ಯ ಮಾಡ್ತಿದ್ದಾರಂತೆ. ಪ್ರಧಾನಿ ಮಧ್ಯಪ್ರವೇಶಿಸಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯ ಮಾಡುವ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧಟತನದ ಟ್ವೀಟ್ ಮಾಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಬಗ್ಗೆ ಮಹಾರಾಷ್ಟ್ರ ಸಿಎಂ ಮೌನ ವಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಕನ್ನಡಿಗರ ಹೋಟೆಲ್‌ಗಳು, ವಾಹನಗಳ ಮೇಲೆ ದಾಳಿ ಮಾಡ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿಂತು ಕನ್ನಡಿಗರ ವಾಹನಗಳಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ಇದೀಗ ಶಿವಸೇನೆ ಪುಂಡರ ಪುಂಡಾಟಿಕೆ ಮರೆತು ಸಿಎಂ ಉದ್ಧವ್​ ಠಾಕ್ರೆ ಕನ್ನಡಿಗರ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

    ಇನ್ನು ಮಹಾರಾಷ್ಟ್ರದ ರಾಜಕಾರಣಿಗಳೇನೂ ಕಡಿಮೆ ಇಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ನಾಡದ್ರೋಹಿ ಎಂಇಎಸ್, ಶಿವಸೇನ ಪುಂಡರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಗಲಾಟೆ, ಗಲಭೆ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುವ ಬದಲು ಕಾನೂನು ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಮಹಾರಾಷ್ಟ್ರ ಆರೋಗ್ಯ ಸಚಿವ ಏಕನಾಥ ಸಿಂಧೆ ಕ್ಯಾತೆ ತೆಗೆದಿದ್ದಾರೆ. ಶಿವಸೇನಿಕರು ಸಮಾಜದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಸಿದ್ಧರಿದ್ದಾರೆ. ಕಾನೂನು ಕೈಗೆತ್ತಿಕೊಂಡು ಅಹಿತಕರ ಘಟನೆ ನಡೆದರೆ ಕರ್ನಾಟಕ ಸರ್ಕಾರವೇ ಹೊಣೆ ಎನ್ನುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಿಡಿಗೇಡಿತನಕ್ಕೆ ಆಕ್ರೋಶ: ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟ, ಕನ್ನಡ ಸಂಘಟನೆಗಳ ಖಂಡನೆ; ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ದುಷ್ಕೃತ್ಯ

    ಅಪಘಾತದ ಸಂತ್ರಸ್ತರಿಗೆ ಮೊದಲ 48 ಗಂಟೆಗಳ ಗೋಲ್ಡನ್​ ಅವರ್​ನಲ್ಲಿ ಉಚಿತ ಚಿಕಿತ್ಸೆ: ಸಿಎಂ ಸ್ಟಾಲಿನ್​ ಘೋಷಣೆ

    ಸ್ನೇಹಿತನ ಫ್ಲ್ಯಾಟ್​ಗೆ ರಾತ್ರಿ ಯುವತಿಯರ ಭೇಟಿ: ಮೋಜು ಮಸ್ತಿ ಬೆನ್ನಲ್ಲೇ ಮಧ್ಯರಾತ್ರಿ ನಡೆಯಿತು ಮಹಾ ದುರಂತ

    ರೈತ ಮಕ್ಕಳ ವಿದ್ಯಾನಿಧಿಗೆ ಪಹಣಿ ತೊಡಕು; ತಂದೆ-ತಾಯಿ ಹೆಸರಲ್ಲಿ ಪಹಣಿ ಇರಬೇಕು ಎಂಬ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts