More

    ಬಿಬಿಎಂಪಿ ಲಾರಿಗೆ ದಂಪತಿ ಬಲಿ: ಇಬ್ಬರು ಹೆಣ್ಣು ಮಕ್ಕಳ ನೆರವಿಗೆ ನಿಂತ ಟ್ರಾಫಿಕ್ ಪೊಲೀಸರು

    ಬೆಂಗಳೂರು: ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ನೋವಿನ ಜತೆಗೆ ಚಿಕಿತ್ಸೆಗೆ ತಗುಲಿದ್ದ 5.72 ಲಕ್ಷ ರೂ. ಆಸ್ಪತ್ರೆ ಪಾವತಿಸಲೂ ಆಗದೆ ಕಂಗಾಲಾಗಿದ್ದ ಇಬ್ಬರು ಹೆಣ್ಣು ಮಕ್ಕಳ ನೆರವಿಗೆ ಧಾವಿಸುವ ಮೂಲಕ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

    ಜು.9ರಂದು ನಾಗರಬಾವಿ ರಿಂಗ್ ರಸ್ತೆ ಸಮೀಪದ ಸರ್ವೀಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಮಾನಸ ನಗರ ಬಸ್ ನಿಲ್ದಾಣ ಕಡೆಯಿಂದ ಚಂದ್ರಾಲೇಔಟ್ ಕಡೆಗೆ ತೆರಳುತ್ತಿದ್ದ ಬಿಬಿಎಂಪಿ ಕಸದ ಲಾರಿ, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಮರಿಯಪ್ಪನಪಾಳ್ಯದ ವಿಜಯಕಲಾ (37) ಅದೇ ದಿನ ಚಿಕಿತ್ಸೆ ಲಿಸದೆ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪತಿ ಯೋಗೇಂದ್ರ (41) ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಗುರುವಾರ ಅಸುನೀಗಿದ್ದಾರೆ.

    ಯೋಗೇಂದ್ರ ಮತ್ತು ವಿಜಯಕಲಾ ದಂಪತಿಯ 2 ಮತ್ತು 5ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳು, ತಂದೆ-ತಾಯಿ ಚಿಕಿತ್ಸೆಗೆ ತಗುಲಿದ್ದ ಆಸ್ಪತ್ರೆ ಬಿಲ್ 5.72 ಲಕ್ಷ ರೂ. ಪಾವತಿ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದರು. ಅಪಘಾತ ನಡೆದ ದಿನವೇ ದಂಪತಿ ಚಿಕಿತ್ಸೆಗೆ ಬ್ಯಾಟರಾಯನಪುರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರೂಪಾ ಹಡಗಲಿ, ಆಸ್ಪತ್ರೆಗೆ 40 ಸಾವಿರ ರೂ. ಪಾವತಿಸಿದ್ದರು. ಗುರುವಾರ ಯೋಗೇಂದ್ರ ಮೃತಪಟ್ಟಿರುವ ವಿಷಯವನ್ನು ಪಶ್ಚಿಮ ವಿಭಾಗ ಡಿಸಿಪಿ ಕುಲದೀಪ್ ಜೈನ್ ಗಮನಕ್ಕೆ ತಂದಿದ್ದರು. ಇನ್‌ಸ್ಪೆಕ್ಟರ್ ಮತ್ತು ಡಿಸಿಪಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಡಳಿತ ಮಂಡಳಿ ಮತ್ತು ವೈದ್ಯರ ಮನವೊಲಿಸಿ ಅಷ್ಟೂ ಹಣವನ್ನು ಮನ್ನಾ ಮಾಡಿಸಿದ್ದಾರೆ. ಇದಕ್ಕೆ ನಾಗರಬಾವಿ ಜಿ.ಎಂ. ಆಸ್ಪತ್ರೆ ಅಧಿಕಾರಿ, ವೈದ್ಯರು ಸಹಕಾರ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ ನೆರವಾಗಿದ್ದಾರೆ.

    ಭಾರತೀಯ ಕಂಪನಿಗಳಿಂದ ಅಮೆರಿಕದಲ್ಲಿ 2 ಲಕ್ಷ ಉದ್ಯೋಗ  

    ಕಾರುಗಳ ಕಳ್ಳಸಂಚಾರ; ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಿ ಅಕ್ರಮ

    ಬಿಬಿಎಂಪಿ ವಾರ್ಡ್ ಒಂದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು: ರಾಜ್ಯಪತ್ರದಲ್ಲಿ ಉಲ್ಲೇಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts