More

    ವಿದೇಶದಲ್ಲಿರುವ ಕನ್ನಡಿಗರು ನಾಡಿನ ರಾಯಭಾರಿಗಳು: ಸಿಎಂ ಬಸವರಾಜ ಬೊಮ್ಮಾಯಿ‌ ಸಲಹೆ

    ಬೆಂಗಳೂರು: ಉನ್ನತ ವ್ಯಾಸಂಗ, ಹುದ್ದೆ, ವೃತ್ತಿ ಅರಸಿಕೊಂಡು ಹೋಗಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ನಾಡಿನ ರಾಯಭಾರಿಗಳ ರೀತಿಯಲ್ಲಿ ಕಾರ್ಯನಿರ್ವಹಿಸಿ ತಾಯ್ನೆಲ, ತಾಯ್ನಾಡಿನ ಜನರ ಏಳಿಗೆಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಲಹೆ ನೀಡಿದರು.

    ಅಮರಿಕ ಕನ್ನಡಿಗರ ಒಕ್ಕೂಟಗಳ ಆಗರ ( ಅಕ್ಕ)ದ ಆಶ್ರಯದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ವರ್ಚುವಲ್ ವೇದಿಕೆ ಮೂಲಕ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿರುವ ಬಗ್ಗೆ ಬಿಂಬಿಸಿ ಆಕರ್ಷಿಸಲು ಶ್ರಮಿಸಬೇಕು. ಇದಕ್ಕಾಗಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಿದೆ ಎಂದು ಹೇಳಿದರು.

    ಕರ್ನಾಟಕ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು, ಜನೋತ್ಸವ ಆಗಬೇಕು ಎಂದು ಈ ಬಾರಿಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಸರ್ಕಾರ ಕಟಿಬದ್ಧವಾಗಿದೆ. ಆರ್ಥಿಕವಾಗಿ ಸಬಲರಾದರೆ ಏನೆಲ್ಲ ಸಾಧಿಸಬಹುದು ಎಂದು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ತಿಳಿದಿದೆ. ನಾಡಿನ ಕಡುಬಡವ ಕನ್ನಡಿಗನೂ ಆರ್ಥಿಕತೆ ದೃಷ್ಟಿಯಿಂದ ಸದೃಢರಾಗುವ ದಿಸೆಯಲ್ಲಿ ಶಿಕ್ಷಣ, ಕೌಶಲ, ಉನ್ನತ ಶಿಕ್ಷಣ, ‌ಉದ್ಯೋಗದಲ್ಲಿ ಆದ್ಯತೆ ಮುಂತಾದ ಉಪಕ್ರಮಗಳ ಕೈಗೊಂಡಿದ್ದು, ಅಕ್ಕ ಸಂಸ್ಥೆಯು ತವರಿನ ಕನ್ನಡಿಗರಿಗೆ ಪ್ರೇರಣೆ ನೀಡುವಂತಾಗಬೇಕು ಎಂದರು.

    ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ಮಧ್ಯೆ ಅಂತಃಕರಣ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಅಕ್ಕ ಸಂಸ್ಥೆಯು ಕನ್ನಡಿಗರು, ಕನ್ನಡತನದ ಬಗ್ಗೆ ತೋರಿಸುತ್ತಿರುವ ಅಂತಃಕರಣ, ಪ್ರೀತಿ, ವಿಶ್ವಾಸ ಪ್ರಶಂಸಾರ್ಹ. ಅಮೆರಿಕ ಸರ್ಕಾರದಲ್ಲೂ ಕನ್ನಡಿಗರು ಪ್ರಮುಖ ಸ್ಥಾನ ಪಡೆದು, ಅಲ್ಲಿರುವ ಕನ್ನಡ ಸಮುದಾಯದ ಆಶಯಗಳಿಗೆ ಒತ್ತಾಸೆಯಾಗಿ ನಿಲ್ಲಲಿ ಎಂದು ಸಿಎಂ ಬೊಮ್ಮಾಯಿ‌ ಆಶಿಸಿದರು.

    ವರ್ಚುವಲ್ ವೇದಿಕೆಯಲ್ಲಿ ಪುತ್ತಿಗೆ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿ.ಸುನಿಲ್ ಕುಮಾರ್, ಅಕ್ಕ ಸಂಸ್ಥೆ ಅಧ್ಯಕ್ಷ ದಯಾನಂದ, ಉಪಾಧ್ಯಕ್ಷೆ ಅನುರಾಧ ತಾವರಕೆರೆ ಇದ್ದರು.

    ಚಂದ್ರಬಾಬು ನಾಯ್ಡು ಕಣ್ಣೀರು: ಬ್ಲೂ ಫಿಲ್ಮ್​ ಸಿಡಿ ನೆನಪಿಸಿ ಬೈ ಬೈ ಬಾಬು ಎಂದ ಶಾಸಕಿ ರೋಜಾ!

    ಜಾಲತಾಣದಲ್ಲಿ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್​: ಬೆದರಿಕೆ ಕರೆಗಳು ಬರುತ್ತಿವೆ ಎಂದ ನಾಯಕಿ

    ಚಿತ್ರರಂಗದಲ್ಲಿ ನನಗೆ ತುಂಬಾ ಟಾರ್ಚರ್‌ ಆಗ್ತಿದೆ: ವೇದಿಕೆ ಮೇಲೆ ಗಳಗಳನೆ ಅತ್ತ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts