More

    ಕಾಂಗ್ರೆಸ್​ ಶಾಸಕ ತುಕಾರಾಂ ಆರೋಪದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್ ರಶ್ಮಿ ಎತ್ತಂಗಡಿ

    ಬಳ್ಳಾರಿ: ನಿನ್ನೆ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಒತ್ತಾಯ ಮಾಡಿದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್​​ರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ತಹಸೀಲ್ದಾರ್ ರಶ್ಮಿ ಅವರನ್ನು ಎತ್ತಂಗಡಿ ಮಾಡಿ, ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ. ಕಚೇರಿಗೆ ಹೋದರೆ ತಮಗೆ ಗೌರವ ಕೊಡಲ್ಲ ಎಂದು ಸಂಡೂರು ಕಾಂಗ್ರೆಸ್​ ಶಾಸಕ ತುಕಾರಾಂ ಅವರು ಆರೋಪ ಮಾಡಿ, ರಶ್ಮಿ ವಿರುದ್ಧ ಅಧಿವೇಶನದಲ್ಲಿ ಹಕ್ಕುಚುತಿ ಮಂಡಿಸಿದ್ದರು. ಅಲ್ಲದೆ, ತಹಶೀಲ್ದಾರ್ ರಶ್ಮಿಯವರನ್ನು ಅಮಾನತ್ತು ಮಾಡುವಂತೆ ಕಾಂಗ್ರೆಸ್​ ಕೂಡ ಅಧಿವೇಶನದಲ್ಲಿ ಒತ್ತಾಯಿಸಿತ್ತು.

    ಸದನದ ಗದ್ದಲದ ಬೆನ್ನಲ್ಲೇ ಸರ್ಕಾರ ರಶ್ಮಿಯವರನ್ನು ವರ್ಗಾವಣೆ ಮಾಡಿದೆ. ನಿನ್ನೆಯೇ ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ಬಳಿಕ ಸ್ಥಳ ನಿಯೋಜನೆ ಮಾಡದೇ ಕಂದಾಯ ಇಲಾಖೆಯ ಬಹುಮಹಡಿ ಕಟ್ಟಡ, ಬೆಂಗಳುರಿನಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ರಶ್ಮಿ ಸ್ಥಾನಕ್ಕೆ ಪ್ರಭಾರಿ ತಹಶಿಲ್ದಾರ್ ಆಗಿ ವಿಶ್ವಜೀತ್ ಮೆಹತಾ ಅವರ ನೇಮಕ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಾಂಗ್ರೆಸ್​ ಶಾಸಕ ತುಕಾರಾಂ ಆರೋಪದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್ ರಶ್ಮಿ ಎತ್ತಂಗಡಿ

    ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಗೆ ಎಚ್ಚರಿಕೆ ಸಂದೇಶ ರವಾನಿಸಿದ ಕ್ರೀಡಾ ಸಚಿವ ಅನುರಾಗ್​ ಠಾಕೂರ್​

    ಮೊಬೈಲ್​ ಅನ್​ಲಾಕ್​ ಮಾಡಲು ಮಲಗಿದ್ದ ಗರ್ಲ್​ಫ್ರೆಂಡ್ ಕಣ್ತೆರೆದ ಪ್ರಿಯಕರನಿಗೆ ಕಾದಿತ್ತು ಬಿಗ್​ ಶಾಕ್​!

    20 ವರ್ಷದಿಂದ ಭರ್ತಿಯಾಗದ ಬ್ಯಾಕ್​ಲಾಗ್ ಹುದ್ದೆ; 2,505ಕ್ಕೂ ಹೆಚ್ಚು ಖಾಲಿ, ಆಕಾಂಕ್ಷಿಗಳು ಅತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts