More

    ಕೋವಿಡ್​ ನಿರ್ವಹಣೆಗೆ ಸಿಎಂ ಯೋಗಿ ಆದಿತ್ಯನಾಥ್​ ನೆರವು ಕೋರಿದ ಆಸ್ಟ್ರೇಲಿಯನ್​ ಸಂಸದ!

    ಲಖನೌ: ಮಾಹಾಮಾರಿ ಕರೊನಾ ವೈರಸ್​ ನಿರ್ವಹಣೆ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶಂಸಿಸಿರುವ ಆಸ್ಟ್ರೇಲಿಯನ್​ ಸಂಸದ ಕ್ರೇಗ್ ಕೆಲ್ಲಿ​, ತಮ್ಮ ದೇಶದಲ್ಲಿನ ಕೋವಿಡ್ ನಿರ್ವಹಣೆಗಾಗಿ ಯೋಗಿ ಅವರ ನೆರವು ಕೋರಿದ್ದಾರೆ.

    ಟ್ವೀಟ್​ ಮಾಡಿರುವ ಕೆಲ್ಲಿ, ಭಾರತದ ಉತ್ತರ ಪ್ರದೇಶವು ಮತ್ತು ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ತಮ್ಮ ಸಮರ್ಥ ಆಡಳಿತದೊಂದಿಗೆ ಕೋವಿಡ್​ ಸಾಂಕ್ರಮಿಕವನ್ನು ಸಮರ್ಥವಾಗಿ ಎದುರಿಸಿದೆ. ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಸೋಂಕಿತ ಜನರ ಸುರಕ್ಷಿತಾ ಕ್ರಮವಾಗಿ ಉತ್ತರ ಪ್ರದೇಶವು ‘ಐವರ್ಮೆಕ್ಟಿನ್’ ಅನ್ನು ಪರಿಚಯಿಸಿರುವುದು ಅದ್ಭುತ ಎಂದು ಕೆಲ್ಲಿ ಕೊಂಡಾಡಿದ್ದಾರೆ.

    ಮತ್ತೊಂದು ಟ್ವೀಟ್​ನಲ್ಲಿ ನಮ್ಮ ದೇಶದಲ್ಲಿ ಸೃಷ್ಟಿಯಾಗಿರುವ ಕೋವಿಡ್​ ಬಿಕ್ಕಟ್ಟು ನಿಭಾಯಿಸಲು ಯೋಗಿ ಆದಿತ್ಯನಾಥ್​ ಅವರನ್ನು ನೆರವು ಕೇಳಿದ್ದಾರೆ.

    ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಮ ಯೋಗಿ ಆದಿತ್ಯನಾಥ್​ ಅವರನ್ನು ಕೊಂಡಿದ್ದರು. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಮತ್ತು ಕಾನೂನು ನೆರವು ಇತರ ಸೇವೆಗಳನ್ನು ವಿಸ್ತರಿಸಲು ಸಹಾಯವಾಣಿ ಸೌಲಭ್ಯವನ್ನು ನೀಡಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts