More

    ಪರಿಚಿತ ಯುವತಿಗೆ ಸುಳ್ಳು ಹೇಳಿ ಬೆಟ್ಟದ ಕಡೆಗೆ ಕರೆದೊಯ್ದ ಯುವಕನಿಂದ ನಡೆಯಿತು ಭೀಕರ ಕೃತ್ಯ!

    ಹೈದರಾಬಾದ್​: ಬುಡುಕಟ್ಟು ಜನಾಂಗದ ಯುವತಿಯನ್ನು ಪರಿಚಿತ ಯುವಕನೊಬ್ಬ ರೇಪ್​ ಮಾಡಿರುವ ಘಟನೆ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ಮರಿಪೆದಾ ಮಂಡಲದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮೂರ್ಛೆ ಹೋದ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಈ ಘಟನೆ ಮರಿಪೆದಾ ಮಂಡಲದ ಸೀತಾರಾಮ್​ ತಾಂಡಾದಲ್ಲಿ ಶನಿವಾರ ನಡೆದಿದೆ. ಮೋಡು ಲಕಪತಿ ಮತ್ತು ವಸಂತಾ ದಂಪತಿಯ ಮಗಳಾದ ಉಷಾ (18) ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿನಿ. ತಂದೆ ಲಕಪತಿ ಮೆಹಬೂಬಬಾದ್​ ನಗರದ ಹೆದ್ದಾರಿಯಲ್ಲಿರುವ ಪೆಟ್ರೋಲ್​ ಬಂಕ್​ ಒಂದರ ಬಳಿ ಸ್ವಂತ ದಿನಸಿ ಅಂಗಡಿಯನ್ನು ಹೊಂದಿದ್ದಾನೆ.

    ಇತ್ತೀಚೆಗೆ ಲಕಪತಿ ಕಾಲು ಮುರಿದುಕೊಂಡಿದ್ದರಿಂದ ಸ್ಟೋರ್​ನಿಂದ ಕೆಲವು ದಿನಸಿ ಪದಾರ್ಥಗಳನ್ನು ತರಲು ತನ್ನ ಮಗಳು ಉಷಾಳನ್ನು ಕಳಿಸಿದ್ದ. ಇದೇ ಸಂದರ್ಭದಲ್ಲಿ ಪಕ್ಕದ ಧರ್ಮರಾಮ್​ ಗ್ರಾಮದ ಧರಮ್​ಸೊತ್​ ರಾಜೇಶ್​ ಎಂಬಾತ ಸ್ಟೋರ್​ಗೆ ಬಂದಿದ್ದ. ಇಬ್ಬರು ಪರಿಚಿತರಾಗಿದ್ದರಿಂದ ಉಷಾಗೆ ಸುಳ್ಳೊಂದನ್ನು ಹೇಳಿ ಸಮೀಪದ ಗುಡ್ಡದ ಬಳಿ ರಾಜೇಶ್​ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಉಷಾಗೆ ಮೂರ್ಛೆ ಹೋಗಿದ್ದಾಳೆ.

    ಇದಾದ ಬಳಿಕ ಏನು ಮಾಡುವುದು ಎಂದು ತಿಳಿಯದೇ ರಾಜೇಶ್​​, ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ನೀರು ಚಿಮುಕಿಸುವಂತೆ ಅವರು ಸಲಹೆ ನೀಡಿದ್ದಾರೆ. ಆದರೆ, ಏನು ಪ್ರಯೋಜನ ಆಗದಿದ್ದಾಗ ತನ್ನ ಸ್ನೇಹಿತರ ಜತೆಗೂಡಿ ಆಕೆಯನ್ನು ಮೆಹಬೂಬಬಾದ್​ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.

    ಇದರ ನಡುವೆ ಈ ವಿಚಾರ ಕುಟುಂಬ ಸದಸ್ಯರಿಗೆ ತಿಳಿದಿದೆ. ಆದರೆ, ಉಷಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಹೆಣವಾಗಿ ಬಿದ್ದಿದ್ದ ಮಗಳನ್ನು ನೋಡಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿಗೆ ರಾಜೇಶ್​ ಮತ್ತು ಆತನ ಸ್ನೇಹಿತರೇ ಕಾರಣ ಎಂದು ಉಷಾ ಪಾಲಕರು ಆರೋಪಿಸಿದ್ದಾರೆ. ಆಕೆ ಮರಣೋತ್ತರ ವರದಿಯಲ್ಲಿ ರೇಪ್​ ಆಗಿರುವುದು ದೃಢಪಟ್ಟಿದೆ.

    ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರನ್ನು ವಿಚಾರಿಸಿದ್ದಾರೆ. ಶನಿವಾರ ಉಷಾ ಮತ್ತು ರಾಜೇಶ್​ ಒಟ್ಟಿಗೆ ಬೆಟ್ಟದ ಕಡೆಗೆ ಹೋಗುವುದನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

    ಇನ್ನೊಂದೆಡೆ ತೆಲಂಗಾಣದ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಮೂರು ಬಾರಿ ಗರ್ಭಿಣಿ, ಗರ್ಭಪಾತ: ಮಾಜಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಚಾಂದಿನಿ

    ‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’

    ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts