More

    ಗಲ್ವಾನ್​ ಘರ್ಷಣೆಯಲ್ಲಿ ಚೀನಾದ 38 ಯೋಧರ ಸಾವು: ವಿದೇಶಿ ಪತ್ರಿಕೆಯ ತನಿಖಾ ವರದಿಯಲ್ಲಿ ಚೀನಾ ಕಳ್ಳಾಟ ಬಯಲು

    ಬೆಂಗಳೂರು: 2020ರ ಜೂ.15ರ ರಾತ್ರಿ ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆಯಲ್ಲಿ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯಲ್ಲಿ ಚೀನಾ ಸೈನಿಕರು ಮೃತಪಟ್ಟಿದ್ದರು. ಇದುವರೆಗೂ ಚೀನಾ ಮೃತಪಟ್ಟವರ ಅಧಿಕೃತ ಸಂಖ್ಯೆಯನ್ನು ತಿಳಿಸಿಲ್ಲ.

    ಘರ್ಷಣೆಯಲ್ಲಿ ಚೀನಾದ ಬೆರಳೆಣಿಕೆಯ ಯೋಧರು ಮಾತ್ರ ಮೃತಪಟ್ಟರು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಗಲ್ವಾನ್​ ಘರ್ಷಣೆಯಲ್ಲಿ ಮೃತಪಟ್ಟ ನಾಲ್ವವರಿಗೆ ಚೀನಾ ಸರ್ಕಾರ 2021ರ ಫೆಬ್ರವರಿಯಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಮೊದಲ ಬಾರಿಗೆ ತಮ್ಮ ಸೈನಿಕರ ಸಾವುಗಳನ್ನು ಒಪ್ಪಿಕೊಂಡಿತ್ತು. ಆದರೆ, ಚೀನಾ ಹೇಳುವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಯೋಧರು ಮೃತಪಟ್ಟಿರುವುದಾಗಿ ತನಿಖಾ ವರದಿಯೊಂದು ಇದೀಗ ಬಹಿರಂಗವಾಗಿದೆ.

    ಆಸ್ಟ್ರೇಲಿಯಾ ಪತ್ರಿಕೆ ಕ್ಲಾಕ್ಸನ್ ತನಿಖಾ ವರದಿಯನ್ನು ಪ್ರಕಟಿಸಿದ್ದು, ಇದರ ಪ್ರಕಾರ 38 ಚೀನಾ ಯೋಧರು ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಚೀನಾ ಯೋಧರು ನದಿಯಲ್ಲಿ ಮುಳಗಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಹೆಸರಿಸದ ಸಾಮಾಜಿಕ ಮಾಧ್ಯಮ ಸಂಶೋಧಕರ ಗುಂಪು ಈ ತನಿಖೆಯನ್ನು ನಡೆಸಿದೆ. ಚೀನೀ ಬ್ಲಾಗರ್‌ಗಳು, ಘರ್ಷಣೆ ನಡೆದ ಪ್ರದೇಶದ ಚೀನೀ ನಾಗರಿಕರು ಹಾಗೂ ಸ್ಥಳೀಯ ಮಾಧ್ಯಮಗಳಿಂದ ಮಾಹಿತಿಯನ್ನು ಪಡೆಯಲಾಗಿದೆ. ಆದರೆ, ಈ ಮಾಹಿತಿಯನ್ನು ಚೀನಾ ಅಧಿಕಾರಿ ಡಿಲೀಟ್​ ಮಾಡಿರುವ ಆರೋಪವೂ ಇದೆ. ಇದೀಗ ಈ ಎಲ್ಲ ಅಂಶ ನೂತನ ತನಿಖಾ ವರದಿಯಲ್ಲಿ ಬಯಲಾಗಿದೆ.

    ಜೂನ್​ 15ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಯೋಧರ ಒತ್ತವರಿಯನ್ನು ತೆರವುಗೊಳಿಸಲು ಹೋದಾಗ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಉಂಟಾಗಿತ್ತು. ಇದು ನಾಲ್ಕು ದಶಕಗಳಲ್ಲೇ ಎರಡು ದೇಶಗಳ ನಡುವೆ ನಡೆದ ಅತ್ಯಂತ ಭೀಕರ ಗಡಿ ಘರ್ಷಣೆಯಾಗಿತ್ತು. (ಏಜೆನ್ಸೀಸ್​)

    ಮೃಗಾಲಯದ ಕರಡಿ ಆವರಣದ ಒಳಗಡೆ ಮಗುವನ್ನು ಎಸೆದ ತಾಯಿ: ಮುಂದೇನಾಯ್ತು? ಇಲ್ಲಿ ಭಯಾನಕ ವಿಡಿಯೋ

    ಪಿಎಸ್​ಐ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಕೋರಿ ಬೃಹತ್ ಪ್ರತಿಭಟನೆ

    4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts