ದೀಸ್ಪುರ್: ಎದುರಿಗೆ ಯಾವುದೇ ಒಂದು ಕಾಡು ಪ್ರಾಣಿ ಬಂದರೆ ಪ್ರತಿಯೊಬ್ಬರ ಹೃದಯ ಬಡಿತ ಒಂದು ಕ್ಷಣ ಏರುಪೇರಾಗುತ್ತದೆ. ಅಂತಹುದರಲ್ಲಿ ಕಾಡುಪ್ರಾಣಿಯ ಜತೆ ಒಂದೇ ಬೋನಿನಲ್ಲಿದ್ದರೆ ಅವರ ಪರಿಸ್ಥಿತಿ ಏನಾಗಬಹುದು ಒಮ್ಮೆ ಊಹಿಸಿ. ಆದರೆ, ನಿಮ್ಮ ಊಹೆಗೂ ಮೀರಿದ ಘಟನೆ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಬೊರ್ಡುಬಿಗಾಂವ್ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಫೆಬ್ರವರಿ 14 ರ ಬೆಳಗ್ಗೆ ಆಕಸ್ಮಿಕವಾಗಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತು. ಅದನ್ನು ನೋಡಲು ಇಡೀ ಗ್ರಾಮದ ಜನರು ಮುಗಿಬಿದ್ದಿದ್ದರು. ಆದರೆ, ಚಿರತೆ ಮಾತ್ರ ಗ್ರಾಮದ ಸುತ್ತ ಓಡಾಡಿಕೊಂಡಿತ್ತು. ಇನ್ನೊಂದೆಡೆ 15 ವರ್ಷದ ರೇಣು ಮಾಹಿ ಎಂಬ ಬಾಲಕಿ ಬೆಳಗ್ಗೆ 10 ಗಂಟೆಗೆ ಫ್ರೆಂಡ್ಸ್ ಮನೆಗೆ ತೆರಳಿದ್ದಳು. ಇದೇ ಸಂದರ್ಭದಲ್ಲಿ ಚಿರತೆ ಅವರ ಸಮೀಪವೇ ಇತ್ತು. ಚಿರತೆಯನ್ನು ಹತ್ತಿರದಲ್ಲೇ ನೋಡಿದ ಜನರು ತುಂಬಾ ಆಘಾತಕ್ಕೆ ಒಳಗಾಗಿ ಕೂಗುತ್ತಾ ತಮ್ಮ ತಮ್ಮ ಮನೆಗೆ ಹೋಗಿ ಬಾಗಿಲು ಮುಚ್ಚಿಕೊಂಡರು.
ಇತ್ತ ಚಿರತೆಯನ್ನು ನೋಡಿದ ರೇಣು ಮತ್ತು ಫ್ರೆಂಡ್ಸ್ ಮನೆಯಲ್ಲಿದ್ದ ಮೂರು ಕೋಣೆಯಲ್ಲಿ ಒಂದು ಕೋಣೆಯೊಳಗೆ ಓಡುತ್ತಾರೆ. ಆ ಒಂದು ಚಿಕ್ಕ ಕೋಣೆಯಲ್ಲಿ ನಾವು ಏಳು ಮಂದಿ ಇದ್ದೆವು. ಇದ್ದಕ್ಕಿದ್ದಂತೆ ಚಿರತೆ ನಮ್ಮ ಕೋಣೆಯ ಒಳಗೆ ನುಗ್ಗಿತು. ಎಲ್ಲರೂ ಹೇಗೋ ಕೋಣೆಯಿಂದ ಹೊರಹೋದರು ಅದರಲ್ಲಿ ಒಬ್ಬರು ಹೊರಗಿನಿಂದ ಕೊಠಡಿಯ ಬಾಗಿಲು ಮುಚ್ಚಿದರು ಎಂದು ರೇಣು ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.
ಎಲ್ಲರು ಓಡಿ ಹೋದರು ಆದರೆ, ಕೊನೆಯಲ್ಲಿ ನಾನೊಬ್ಬಳೆ ಅಲ್ಲಿ ಸಿಕ್ಕಿಹಾಕಿಕೊಂಡೆ. ಅಷ್ಟರಲ್ಲಿ ಕೊಠಡಿಯ ಬಾಗಿಲು ಸಹ ಮುಚ್ಚಿತ್ತು. ಚಿರತೆ ಮತ್ತು ನಾನು ಒಳಗಡೆಯೇ ಇದ್ದೆವು. ಸಹಾಯಕ್ಕಾಗಿ ಜನರನ್ನು ಕೂಗಿಕೊಳ್ಳೋಣ ಅಂತಾ ಅನಿಸಿದರೂ ಕೂಡ ಅದು ಮೂರ್ಖತನ ಎಂದು ಮನವರಿಕೆಯಾಯಿತು. ಅಲ್ಮೇರಾ ಪಕ್ಕದಲ್ಲಿ ಇದ್ದ ಸೂಟ್ಕೇಸ್ ಒಂದರ ಹಿಂದೆ ನಾನು ಬಚ್ಚಿಟ್ಟುಕೊಂಡೆ. ಚಿರತೆ ಬೆಡ್ ಮೇಲೆ ಕುಳಿತಿತ್ತು. ನಾನು ಹೊರಡೆ ಇದ್ದೇನೆ ಎಂದು ಫ್ರೆಂಡ್ಸ್ ಬಾವಿಸಿದ್ದರು. ನನ್ನ ಬಳಿ ಮೊಬೈಲ್ ಇದ್ದಿದ್ದರು ಕೂಡ ನಾನು ಯಾರಿಗೂ ಫೋನ್ ಮಾಡಲು ಆಗುತ್ತಿರಲಿಲ್ಲ. ತುಂಬಾ ಭಯಭೀತಳಾಗಿದ್ದೆ. ನಾನು ಬೆವರುತ್ತಿದೆ. ಪ್ರತಿ ಕ್ಷಣವೂ ಯುಗಗಳಂತೆ ತೋರುತ್ತಿತ್ತು ಮತ್ತು ನಾನು ನಿರುತ್ಸಾಹದಲ್ಲಿದ್ದೆ ಎಂದು ರೇಣು ಆ ಕ್ಷಣವನ್ನು ವಿವರಿಸಿದ್ದಾಳೆ.
ಬಾಯಾರುತ್ತಿತ್ತು. ನನ್ನ ತುಟಿ ಒಣಗಿತ್ತು. ಒಂದು ಇಂಚು ಅಲುಗಾಡಿದರು ಕಷ್ಟ ಎಂದು ಗೊತ್ತಿತ್ತು. ನಾನು ಕಣ್ಣು ಮಿಟುಕಿಸದೇ ಚಿರತೆಯನ್ನೇ ನೋಡುತ್ತಿದ್ದೆ. ಆದರೆ, ನಾನು ಒಳಗಡೆ ಇರುವುದು ಚಿರತೆ ತಿಳಿಯಲೇ ಇಲ್ಲ. ಇದೇ ಸಂದರ್ಭದಲ್ಲಿ ಸಿನಿಮಾಗಳಲ್ಲಿ ಹುಲಿ ಮತ್ತು ಚಿರತೆ ಮನುಷ್ಯರನ್ನು ತಿನ್ನುವ ದೃಶ್ಯವೇ ನನ್ನ ಕಣ್ಣ ಮುಂದೆ ಬರುತ್ತಿತ್ತು. ಇತ್ತ ಹೊರಗಡೆಯಿಂದ ಮನೆ ಒಳಗೆ ಯಾರಾದರೂ ಇದ್ದೀರಾ ಎಂದು ಕೂಗಿ ಕೊಳ್ಳುತ್ತಿದ್ದರು. ಆದರೆ, ಯಾರಿಗೂ ಹೇಳುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಇದೇ ಸಂದರ್ಭದಲ್ಲಿ ನನ್ನ ಸ್ನೇಹಿತೆಯೊಬ್ಬಳು ನನಗೆ ಕರೆ ಮಾಡಿದಳು. ನಾನು ಚಿರತೆಯೊಂದಿಗೆ ಲಾಕ್ ಆಗಿದ್ದೇನೆ ಎಂದು ಪಿಸುಮಾತಿನಲ್ಲೇ ಹೇಳಿದೆ ಮತ್ತು ಗ್ರಾಮಸ್ಥರಿಗೆ ತುರ್ತಾಗಿ ತಿಳಿಸುವಂತೆ ಕೇಳಿದೆ. ಇದು ನನ್ನ SOS ಕಾಲ್ ಆಗಿತ್ತು.
ಸ್ವಲ್ಪ ಸಮಯದ ನಂತರ ಜನರು ಕೋಣೆಯ ಮೇಲ್ಛಾವಣಿಯನ್ನು ತೆಗೆದು ನನ್ನ ಕಡೆಗೆ ಏಣಿಯಿಂದ ಇಳಿಯುವುದನ್ನು ನಾನು ನೋಡಿದೆ. ಏಣಿ ಹಿಡಿದುಕೊಳ್ಳುವಂತೆ ನನಗೆ ಸೂಚಿಸುತ್ತಿದ್ದರು, ಆದರೆ ನಾನು ಚಲಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ. ಆದರೂ ಇಲ್ಲಿಯೇ ಇರಲು ಸಾಧ್ಯವೇ ಎಂದರಿತು ಶಕ್ತಿ ಮತ್ತು ಧೈರ್ಯವನ್ನು ಒಟ್ಟುಗೂಡಿಸಿ ಏಣಿಯ ಮೇಲೆ ಹಾರಿದೆ. ಆ ಕ್ಷಣದಲ್ಲಿ ಚಿರತೆ ನನ್ನನ್ನು ದಿಟ್ಟಿಸಿ ನೋಡಿತು ಮತ್ತು ನಾನು ಅದರತ್ತ ತಿರುಗಿ ನೋಡತೊಡಗಿದೆ. ಕೊನೆಗೆ ನಾನು ರಕ್ಷಿಸಲ್ಪಟ್ಟೆ ಎಂದು ರೇಣು ವಿವರಿಸಿದರು.
ಮಧ್ಯರಾತ್ರಿಯವರೆಗೂ ಕೋಣೆಯೊಳಗಿದ್ದ ಚಿರತೆಯನ್ನು ಸಮಾಧಾನಪಡಿಸಲು ಅರಣ್ಯ ಇಲಾಖೆ ತುಂಬಾ ಪ್ರಯಾಸ ಪಡಬೇಕಾಯಿತು. ಹಲವಾರು ಅರವಳಿಕೆ ನಂತರ, ಚಿರತೆಯನ್ನು ಬಾಗಿಲಿನ ಮುಂಭಾಗದಲ್ಲಿ ಇರಿಸಲಾದ ಬೋನಿನೊಳಗೆ ಸ್ಥಳಾಂತರಿಸಲಾಯಿತು ಎಂದು ರೇಣು ಹೇಳಿದ್ದಾರೆ. (ಏಜೆನ್ಸೀಸ್)
ಮಧ್ಯರಾತ್ರಿ ಟ್ರಕ್ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ
ಆಮ್ಲೆಟ್ ಮಾಡಿಕೊಡದಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಫ್ಯಾನಿಗೆ ನೇತುಹಾಕಿದ ಪತಿ
ಒಂದು ಮೊಬೈಲ್‌ಗಾಗಿ ಸಾವಿನ ಹಾದಿ ಹಿಡಿದ ವಿದ್ಯಾರ್ಥಿ: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಂಚಿಕೊಂಡ!