More

    ಭಾರತದ ಪರ ಮತ್ತೊಂದು ಇತಿಹಾಸ ರಚಿಸಿದ ಆರ್​. ಅಶ್ವಿನ್

    ರಾಂಚಿ: ಇಲ್ಲಿನ ಜೆಎಸ್​ಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಟೀಂ ಇಂಡಿಯಾದ ಸ್ಪಿನ್ನರ್​ ಆರ್​. ಅಶ್ವಿನ್​ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಟೀಂ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಆಂಗ್ಲರ ವಿರುದ್ಧದ ಟೆಸ್ಟ್​ನಲ್ಲಿ 100 ವಿಕೆಟ್ ಕಿತ್ತ ಇತಿಹಾಸದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ಓವರ್‌ನಲ್ಲಿ ಜಾನಿ ಬೇರ್​ಸ್ಟೋ ವಿಕೆಟ್​ ಪಡೆಯುವ ಮೂಲಕ ಅಶ್ವಿನ್​ ಈ ಸಾಧನೆ ಮಾಡಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿಗಳಲ್ಲಿ 37 ವರ್ಷದ ಜೇಮ್ಸ್ ಆ್ಯಂಡರ್ಸನ್ ನಂತರ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಅಶ್ವಿನ್​ ಅವರಾಗಿದ್ದಾರೆ. ಈ ಮೂಲಕ ಆರ್​. ಅಶ್ವಿನ್ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿಯಲ್ಲಿ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಒಂದೇ ಓವರ್​ನಲ್ಲಿ ಸತತ ಆರು ಸಿಕ್ಸರ್; ದೇಶೀಯ ಕ್ರಿಕೆಟ್​ನಲ್ಲಿ ಹೊಸ ಸಾಧನೆ ಮಾಡಿದ ಯುವ ಬ್ಯಾಟ್ಸ್​ಮನ್

    ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪ್ರವಾಸಿ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳಿಗೆ ಡಗ್​ಔಟ್​ ದಾರಿ ತೋರಿಸಿದ್ದಾರೆ. ಟೀಂ ಇಂಡಿಯಾ ವೇಗಿ ಆಕಾಶ್ ದೀಪ್ ಪದರ್ಪಣೆ ಪಂದ್ಯದಲ್ಲೇ ತಮ್ಮ ಕೈಚಳಕ ತೋರಿದ್ದು, ಎದುರಾಳಿ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ.

    ಭೋಜನ ವಿರಾಮದ ಬಳಿಕ 137 ರನ್​​ ಗಳಿಸಿರುವ ಇಂಗ್ಲೆಂಡ್​ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಭಾರತದ ಪರ ಆಕಾಶ್ ದೀಪ್ 3, ಜಡೇಜಾ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts