More

    ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತಿಹಾಸ ರಚಿಸಲು ಆರ್​. ಅಶ್ವಿನ್​ ಸಜ್ಜು; ಏನದು?

    ರಾಜ್​ಕೋಟ್​: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಅಕಾಡೆಮಿಯಲ್ಲಿ ಫೆಬ್ರವರಿ 15ರಿಂದ ಆರಂಭವಾಗಲಿರುವ ಅತಿಥೇಯ ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯ ಈಗ ದಾಖಲೆಯೊಂದಕ್ಕೆ ಸಾಕ್ಷಿಯಾಗಲು ಸಜ್ಜಾಗಿದ್ದು, ಎಲ್ಲರ ಚಿತ್ತ ಈ ಪಂದ್ಯದತ್ತ ಬಿದ್ದಿದೆ.

    ಈ ಪಂದ್ಯದ ಮೂಲಕ ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ಆರ್​. ಅಶ್ವಿನ್​ ಈ ಪಂದ್ಯದ ಮೂಲಕ ಹೊಸ ದಾಖಲೆ ಒಂದನ್ನು ಬರೆಯಲು ಸಜ್ಜಾಗಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್​ಕೋಟ್​ ಮೈದಾನ ಸಜ್ಜಾಗಿದೆ.

    ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಒಂದು ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

    ಇದನ್ನೂ ಓದಿ: ಶ್ವಾನಕ್ಕೆ ಮನಸೋಇಚ್ಛೆ ಥಳಿತ; ಇಬ್ಬರು ಅರೆಸ್ಟ್​

    500 ವಿಕೆಟ್​ಗಳ ಸಾಧನೆ ಮಾಡಲು ಅಶ್ವಿನ್​ಗೆ ಬೇಕಿರುವುದು ಕೇವಲ ಒಂದು ವಿಕೆಟ್ ಮಾತ್ರ. ಅಂದರೆ ಟೀಮ್ ಇಂಡಿಯಾ ಪರ ಈಗಾಗಲೇ 97 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 499 ವಿಕೆಟ್​ಗಳನ್ನು ಕಬಳಿಸಿದ್ದಾರೆ. ರಾಜ್​ಕೋಟ್​ ಟೆಸ್ಟ್​ನಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್ ಪಡೆದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಈಗಾಗಲೇ ಶ್ರೀಲಂಕಾದ ಮುರಳೀಧರನ್ (800), ಶೇನ್ ವಾರ್ನ್ (708), ಜೇಮ್ಸ್ ಆಂಡರ್ಸನ್ (695*), ಅನಿಲ್ ಕುಂಬ್ಳೆ (619), ಸ್ಟುವರ್ಟ್ ಬ್ರಾಡ್ (604), ಗ್ಲೆನ್ ಮೆಕ್‌ಗ್ರಾತ್ (563), ಕರ್ಟ್ನಿ ವಾಲ್ಷ್ (519) 500 ವಿಕೆಟ್​ ಪಡೆದ ಸಾಧನೆ ಮಾಡಿದ್ದು, ಅಶ್ವಿನ್​ ಈ ಸಾಧನೆ ಮಾಡಿದ 09ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts