More

    ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್​ ಬಚ್ಚನ್​ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!

    ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ಭಾರತೀಯ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು ಎಂಬುದು ಎಲ್ಲರಿಗು ತಿಳಿದಿದೆ. ಭಾರೀ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. ಮುಂಬೈ ಒಂದರಲ್ಲೇ 6 ಐಷಾರಾಮಿ ಮನೆಯನ್ನು ಹೊಂದಿದ್ದು, ಜನಕ್​, ಜಲ್ಸಾ, ಪ್ರತೀಕ್ಷ, ವಿಸ್ತಾ ಮತ್ತು ಅಮ್ಮ ಎಂಬ ಹೆಸರು ಸಹ ಇವೆ.

    ಮುಂಬೈನ ಜುಹು ಪ್ರದೇಶದಲ್ಲಿ ಐದು ಐಷಾರಾಮಿ ಬಂಗಲೆಗಳಿದ್ದರೂ ಕಳೆದ ವರ್ಷ ಅಂಧೇರಿಯಲ್ಲಿ 31 ಕೋಟಿ ರೂ. ಮೌಲ್ಯದ ಡುಪ್ಲೆಕ್ಸ್​ ಮನೆಯನ್ನು ಖರೀದಿಸಿದ್ದಾರೆ. ಅಮಿತಾಭ್​ ಬಳಿ ಅಷ್ಟೊಂದು ಮನೆಗಳಿದ್ದರೂ ಅವರಿಗೆ ಅವರ ಮೊದಲ ಮನೆಯೇ ತುಂಬಾ ವಿಶೇಷವಾದದ್ದು. ಆದರೆ, ಆ ಬಂಗಲೆ ಮುಂಬೈನಲ್ಲಿಲ್ಲ. ಅದು ದೆಹಲಿಯಲ್ಲಿದೆ. ದಕ್ಷಿಣ ದೆಹಲಿಯಲ್ಲಿರುವ ದುಬಾರಿ ಮೌಲ್ಯದ ಬಂಗಲೆಯನ್ನು ಸೊಪಾನ್​ ಎಂದು ಕರೆಯಲಾಗುತ್ತದೆ.

    ಸೊಪಾನ್​ ಮನೆಯಲ್ಲಿ ಅಮಿತಾಭ್​ ತಂದೆ ರಾಯ್​ ಬಚ್ಚನ್​ ಮತ್ತು ತೇಜಿ ಬಚ್ಚನ್​ ವಾಸವಿದ್ದರು. ನಟನಾಗುವ ಮುನ್ನ ಅಮಿತಾಭ್​ ಕೂಡ ಅದೇ ಮನೆಯಲ್ಲಿ ವಾಸವಿದ್ದರು. ಇದು ಬಚ್ಚನ್​ ಕುಟುಂಬದ ಮೊದಲ ಆಸ್ತಿಯಾಗಿದೆ. ಇತ್ತೀಚೆಗಷ್ಟೇ ಅದನ್ನು ಅಮಿತಾಭ್​ ಮಾರಾಟ ಮಾಡಿದ್ದಾರೆ.

    ಅಮಿತಾಭ್​ ತಾಯಿ ತೇಜಿ ಹೆಸರಿನಲ್ಲಿರುವ ಸೊಪಾನ್​ ಬಂಗಲೆಯನ್ನು ಬರೋಬ್ಬರಿ 23 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆಂದು ತಿಳಿದುಬಂದಿದೆ. ನಾಜೊನ್​ ಗ್ರೂಪ್​ ಆಫ್​ ಕಂಪನಿಯ ಸಿಇಒ ಅವನಿ ಬೇಡರ್ ಎಂಬುವರಿಗೆ ಅಮಿತಾಭ್​ ಮಾರಾಟ ಮಾಡಿದ್ದಾರೆಂದು ತಿಳಿದುಬಂದಿದೆ. ಅವನಿ ಬೇಡರ್​ ಮತ್ತು ಅಮಿತಾಭ್​ ಸುಮಾರು 35 ವರ್ಷಗಳಿಂದ ಪರಿಚಿತರು ಎಂದು ತಿಳಿದುಬಂದಿದೆ.

    ಸದ್ಯ ಬಂಗಲೆಯನ್ನು ಖರೀದಿ ಮಾಡಿರುವ ಅವನಿ ಅವರು ಅದನ್ನು ಹೊಡೆದು ಹಾಕಿ ತಮಗೆ ಬೇಕಾದ ರೀತಿಯಲ್ಲಿ ಮರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹಳೆಯ ಕಾಲದ ಬಂಗಲೆಯಾಗಿರುವುದರಿಂದ ಅದನ್ನು ಆಧುನಿಕ ಶೈಲಿಗೆ ಬದಲಾಯಿಸಲು ನಿರ್ಧರಿಸಿದ್ದಾರೆ.

    ನಾವು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಹೆಚ್ಚುವರಿ ಆಸ್ತಿಗಾಗಿ ಹುಡುಕುತ್ತಿದ್ದೆವು. ಈ ಆಫರ್ ಬಂದಾಗ, ನಾವು ತಕ್ಷಣ ಹೌದು ಎಂದು ಹೇಳಿದೆವು ಮತ್ತು ಆಸ್ತಿಯನ್ನು ಖರೀದಿಸಿದ್ದೇವೆ ಎಂದು ಅವನಿ ಹೇಳಿದರು.

    ಐಷಾರಾಮಿ ರಿಯಲ್ ಎಸ್ಟೇಟ್ ಡೀಲರ್ ಪ್ರದೀಪ್ ಪ್ರಜಾಪತಿ ಪ್ರಕಾರ, ಅಮಿತಾಭ್ ಅವರ ಪಾಲಕರು ಮುಂಬೈನ ಜಲ್ಸಾಕ್ಕೆ ತೆರಳಿದ ನಂತರ ಮನೆ ಖಾಲಿಯಾಗಿದೆ, ಅಲ್ಲಿ ಅವರು ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಾಸಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿಎಂ ಸರ್​ ನನಗೆ ಸಹಾಯ ಮಾಡಿ…ಯುವಕನ ಬೋರ್ಡ್​ ನೋಡಿ ಕಾರು ನಿಲ್ಲಿಸಿದ ಸಿಎಂ ಸ್ಟಾಲಿನ್​!

    ನಾ ಮುಂದು ತಾ ಮುಂದು: ಬಿಡುಗಡೆಗೆ ಬಿಗ್​ ಚಿತ್ರಗಳ ಸ್ಪರ್ಧೆ

    ಆಗಸ್ಟ್​ನಲ್ಲಿ ಚಂದ್ರಯಾನ-3: ಸಕಲ ಸಕಲ ಸಿದ್ಧತೆ ನಡೆಸಿದ ಇಸ್ರೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts