More

    ಸರ್ಕಾರಿ ಕೆಲ್ಸಕ್ಕೆ ಗುಡ್​ ಬೈ ಹೇಳಿ ಬಣ್ಣದ ಜಗತ್ತಿಗೆ ಮಾರುಹೋದ ಲೇಡಿ ಪೇದೆಗೆ ಬಿಗ್​ ಶಾಕ್​!

    ಆಗ್ರಾ: ಕರ್ತವ್ಯದ ವೇಳೆ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್​ ಹಿಡಿದು ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ, ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿ, ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅಮಾನತಾಗಿದ್ದ ಮಹಿಳಾ ಕಾನ್ಸ್​ಟೇಬಲ್​ ಇದೀಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕಾರಕ್ಕೂ ಮುನ್ನ ಮಹಿಳಾ ಕಾನ್ಸ್​ಟೇಬಲ್​ಗೆ ಪೊಲೀಸ್​ ಇಲಾಖೆ ಶಾಕ್​ ನೀಡಿದೆ.

    ಲೇಡಿ ಕಾನ್ಸ್​ಟೇಬಲ್​ ಪ್ರಿಯಾಂಕಾ ಮಿಶ್ರಾ ರಿವಾಲ್ವರ್​ ಹಿಡಿದು ರಂಗ್​ಬಾಜಿ ಚಿತ್ರದ ಡೈಲಾಗ್​ಗೆ ಲಿಪ್​ ಸಿಂಕ್​ ಮಾಡಿರುವ ವಿಡಿಯೋವನ್ನು ಕೆಲ ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ವಿಡಿಯೋದಲ್ಲಿ ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್​ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದರು. “ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ” ಎಂದು ಪ್ರಿಯಾಂಕಾ ಡೈಲಾಗ್​ ಹೊಡೆದಿದ್ದರು.

     
     
     
     
     
    View this post on Instagram
     
     
     
     
     
     
     
     
     
     
     

    A post shared by priyankamishra@kajal (@mishra123priyanka)

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಪೊಲೀಸ್​ ಆಗಿದ್ದುಕೊಂಡು ರೌಡಿಸಂ ಬಗ್ಗೆ ಡೈಲಾಗ್​ ಹೊಡೆಯುವುದು ಎಷ್ಟು ಸರಿ? ಅದು ಯೂನಿಫಾರ್ಮ್​ ಮತ್ತು ರಿವಾಲ್ವರ್​ ಹಿಡಿದುಕೊಂಡು ರೌಡಿಸಂ ವೈಭವೀಕರಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಪ್ರಿಯಾಂಕಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಆಕೆಯ ನಡೆ ಯುಪಿ ಪೊಲೀಸ್​ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಲ್ಲದೆ, ಅವರನ್ನು ಅಮಾನತಿನಲ್ಲಿಡಲಾಗಿತ್ತು. ಅಮಾನತಿನಲ್ಲಿದ್ದ ಪ್ರಿಯಾಂಕಾ ಮಿಶ್ರಾ ಇದೀಗ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು. ರಾಜೀನಾಮೆ ಅಂಗೀಕಾರವಾಗಿದ್ದರೂ ಪೊಲೀಸ್​ ಇಲಾಖೆ ಪ್ರಿಯಾಂಕರಿಗೆ ಶಾಕ್​ ಒಂದನ್ನು ನೀಡಿದೆ.

    ಪ್ರಿಯಾಂಕಾ ಇದೀಗ ಪೊಲೀಸ್​ ಇಲಾಖೆಗೆ 1.52 ಲಕ್ಷ ರೂಪಾಯಿಯನ್ನು ಡೆಪಾಸಿಟ್​ ಮಾಡಬೇಕಿದೆ. ಈ ಸಂಬಂಧ ಆಗ್ರಾ ಎಸ್​ಎಸ್​ಪಿ ಮುನಿರಾಜ್​, ಪ್ರಿಯಾಂಕಾಗೆ ನೋಟಿಸ್​ ನೀಡಿದ್ದಾರೆ. ತರಬೇತಿ ವೇಳೆ ಖರ್ಚು ಮಾಡಲಾದ ಹಣ ಮತ್ತು ಇಲಾಖೆ ವತಿಯಿಂದ ನೀಡಲಾದ ಕಿಟ್​ ಮತ್ತು ಗುರುತಿನ ಚೀಟಿಯನ್ನು ಮರಳಿಸುವಂತೆ ನೋಟಿಸ್​ನಲ್ಲಿ ಸೂಚನೆ ನೀಡಲಾಗಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by priyankamishra@kajal (@mishra123priyanka)

    ಅಂದಹಾಗೆ ಪ್ರಿಯಾಂಕಾ ಮಿಶ್ರಾ ಆಗ್ರಾ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​​ ಆಗಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿ ಬಯಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ನಿಯಮದ ಪ್ರಕಾರ ಪ್ರಿಯಾಂಕಾ ಸ್ವಯಂ ನಿವೃತ್ತಿಯ ಅರ್ಹತೆ ಹೊಂದಿಲ್ಲ. ಸರ್ಕಾರಿ ನೌಕರ 45 ವರ್ಷ ವಯಸ್ಸಾಗಿರಬೇಕು ಅಥವಾ 20 ವರ್ಷ ಸೇವೆಯನ್ನು ಪೂರೈಸಿರಬೇಕು. ಅಲ್ಲದೆ, ಸ್ವಯಂ ನಿವೃತ್ತಿ ಕೇಳಿ ಮೂರು ತಿಂಗಳ ಮುಂಚೆಯೇ ಅರ್ಜಿಯನ್ನು ಸಲ್ಲಿಸಬೇಕು. ಸ್ವಯಂ ನಿವೃತ್ತಿಯ ಅರ್ಜಿಯನ್ನು ಇಲಾಖೆಗೆ ಗೆಜೆಟೆಡ್​ ಅಧಿಕಾರಿಯ ಮುಂದೆ ಸಲ್ಲಿಸಬೇಕು. ಬಳಿಕ ಕುಟುಂಬದವರ ಸಮ್ಮತಿ ಪಡೆದ ಬಳಿಕ ರಾಜೀನಾಮೆ ಅಂಗೀಕರಿಸಿ, ಸ್ವಂಯ ನಿವೃತ್ತಿಗೆ ಬಗ್ಗೆ ಉನ್ನತ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.

    ಆದರೆ, ಪ್ರಿಯಾಂಕಾ 2020ರ ಅಕ್ಟೋಬರ್​ 10ರಂದು ಪೊಲೀಸ್​ ಕಾನ್ಸ್​ಟೇಬಲ್​ ಆಗಿ ನೇಮಕವಾಗಿದ್ದಾರೆ. ಹೀಗಾಗಿ ಅವರು ಸ್ವಯಂ ನಿವೃತ್ತಿಗೆ ಅರ್ಹಳಾಗಿಲ್ಲ. ಇನ್ನು ಪ್ರಿಯಾಂಕಾಗೆ 225 ದಿನ ತರಬೇತಿ ನೀಡಿಲಾಗಿದೆ. ಒಂದು ದಿನಕ್ಕೆ 676 ರೂಪಾಯಿ ಅವರ ತರಬೇತಿಗಾಗಿ ಖರ್ಚು ಮಾಡಲಾಗಿದೆ. ಅಂದರೆ, ತಿಂಗಳಿಗೆ 20280 ರೂಪಾಯಿ. ಹೀಗಾಗಿ ಅವರ ತರಬೇತಿಯ ಅವಧಿಯಲ್ಲಿ ಖರ್ಚು ಮಾಡಲಾದ 1.52 ಲಕ್ಷ ರೂಪಾಯಿಯನ್ನು ಇಲಾಖೆವೆ ವಾಪಸ್ಸು ಮಾಡಬೇಕಿದೆ. ಈಗಾಗಲೇ ಬಹುತೇಕ ಹಣವನ್ನು ಡೆಪಾಸಿಟ್​ ಮಾಡಿರುವ ಪ್ರಿಯಾಂಕಾ ಇನ್ನು 28 ಸಾವಿರ ರೂ. ಮತ್ತು ಕಿಟ್​ ಅನ್ನು ಮರಳಿಸಬೇಕಿದೆ. ಇದಾದ ಬಳಿಕವೇ ಅವರಿಗೆ ಸೇವೆಯಿಂದ ಸಂಪೂರ್ಣ ಹೊರಬರಲಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by priyankamishra@kajal (@mishra123priyanka)

    ಇನ್ನು ಪ್ರಿಯಾಂಕಾ ಅವರ ವಿಡಿಯೋ ವೈರಲ್​ ಆಗಿ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಆಫರ್​ಗಳು ಪ್ರಿಯಾಂಕರನ್ನು ಹುಡುಕಿಕೊಂಡು ಬರುತ್ತಿದ್ದು, ಈ ಬಗ್ಗೆ ಮಾಧ್ಯವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಮಾಡೆಲಿಂಗ್​ ಅಥವಾ ನಟನೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಆ ಕ್ಷೇತ್ರಕ್ಕೆ ಪ್ರವೇಶ ನೀಡುತ್ತೇನೆ. ಸದ್ಯ ನನಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಿಂದ ಆಫರ್​ ಬಂದಿದೆ. ಆದರೆ, ಅದನ್ನು ನಾನಿನ್ನು ಸ್ವೀಕರಿಸಿಲ್ಲ. ನಾನೇನೇ ನಿರ್ಧಾರ ತೆಗೆದುಕೊಂಡರು ಮೊದಲು ಯೋಚಿಸಿ ಆನಂತರ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಆಫರ್​ ಬಂದಿರುವ ವೆಬ್​ ಸೀರಿಸ್​ ಹೆಸರೇಳಲು ಪ್ರಿಯಾಂಕಾ ನಿರಾಕರಿಸಿದರು. (ಏಜೆನ್ಸೀಸ್​)

    ತನ್ನ ವಿಡಿಯೋದಿಂದ ಸಸ್ಪೆಂಡ್​ ಆಗಿ, ಸರ್ಕಾರಿ ಕೆಲ್ಸಕ್ಕೆ ಗುಡ್​ ಬೈ ಹೇಳಿದ ಲೇಡಿ ಪೇದೆಗೆ ಬಂತು ಬಂಪರ್​ ಆಫರ್​!​

    VIDEO| ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ ಅಮಾನತಾಗಿದ್ದ ಮಹಿಳಾ ಕಾನ್ಸ್​​ಟೇಬಲ್​ ರಾಜೀನಾಮೆ..!

    VIDEO| ಯೂನಿಫಾರ್ಮ್​ ಧರಿಸಿ, ರಿವಾಲ್ವರ್​ ಹಿಡಿದು ಡೈಲಾಗ್​ ಹೊಡೆದ ಮಹಿಳಾ ಕಾನ್ಸ್​ಟೇಬಲ್​ಗೆ ಸಂಕಷ್ಟ!​​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts