More

    VIDEO| ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ ಅಮಾನತಾಗಿದ್ದ ಮಹಿಳಾ ಕಾನ್ಸ್​​ಟೇಬಲ್​ ರಾಜೀನಾಮೆ..!

    ಆಗ್ರಾ: ಕರ್ತವ್ಯದ ವೇಳೆ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್​ ಹಿಡಿದು ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಅಮಾನತಾಗಿದ್ದ ಮಹಿಳಾ ಕಾನ್ಸ್​ಟೇಬಲ್​ ಇದೀಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅದು ಅಂಗೀಕಾರವಾಗಿದೆ.

    ಲೇಡಿ ಕಾನ್ಸ್​ಟೇಬಲ್​ ಪ್ರಿಯಾಂಕಾ ಮಿಶ್ರಾ ರಿವಾಲ್ವರ್​ ಹಿಡಿದು ರಂಗ್​ಬಾಜಿ ಚಿತ್ರದ ಡೈಲಾಗ್​ಗೆ ಲಿಪ್​ ಸಿಂಕ್​ ಮಾಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ವಿಡಿಯೋದಲ್ಲಿ ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್​ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದರು. ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ ಎಂದು ಡೈಲಾಗ್​ ಹೊಡೆದಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಪೊಲೀಸ್​ ಆಗಿದ್ದುಕೊಂಡು ರೌಡಿಸಂ ಬಗ್ಗೆ ಡೈಲಾಗ್​ ಹೊಡೆಯುವುದು ಎಷ್ಟು ಸರಿ? ಅದು ಯೂನಿಫಾರ್ಮ್​ ಮತ್ತು ರಿವಾಲ್ವರ್​ ಹಿಡಿದುಕೊಂಡು ರೌಡಿಸಂ ವೈಭವೀಕರಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಪ್ರಿಯಾಂಕಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಆಕೆಯ ನಡೆ ಯುಪಿ ಪೊಲೀಸ್​ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಲ್ಲದೆ, ಅವರನ್ನು ಅಮಾನತಿನಲ್ಲಿಡಲಾಗಿತ್ತು.

    ಪ್ರಿಯಾಂಕಾಗೆ ಸೇವಾ ರಿವಾಲ್ವರ್​ ನೀಡಲಾಗಿಲ್ಲ. ಠಾಣೆಯ ಸ್ಟೋರ್​ ರೂಮ್​ನಲ್ಲಿ ಇಡಲಾಗಿದ್ದ ರಿವಾಲ್ವರ್​ ಅನ್ನು ವಿಡಿಯೋ ಚಿತ್ರೀಕರಣ ಮಾಡಲು ಬಳಸಿಕೊಂಡಿದ್ದಾರೆ ಎಂದು ಎಸ್​ಎಸ್​ಪಿ ಈ ಹಿಂದೆಯೇ ಹೇಳಿದ್ದರು.

    ಅಮಾನತಿನಲ್ಲಿದ್ದ ಪ್ರಿಯಾಂಕಾ ಮಿಶ್ರಾ ಇದೀಗ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದು, ರಾಜೀನಾಮೆ ಅಂಗೀಕಾರವಾಗಿದೆ. (ಏಜೆನ್ಸೀಸ್​)

    ತಂಗಿಯನ್ನೇ ಮದ್ವೆಯಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಬೈಕ್ ರೇಸರ್​ ವಿರುದ್ಧ ಮತ್ತೊಮ್ಮೆ ನೆಟ್ಟಿಗರ ಆಕ್ರೋಶ!

    ರಸ್ತೆ ರಿಪೇರಿಯಾಗುವವರೆಗೆ ಮದ್ವೆಯಾಗಲ್ಲ: ದಾವಣಗೆರೆ ಶಿಕ್ಷಕಿಗೆ ಸಿಕ್ತು ಸರ್ಕಾರದ ಸ್ಪಂದನೆ

    ನೀನೇಕೆ ಬಿಳಿಕೂದಲು ಮರೆಮಾಚುವುದಿಲ್ಲ? ತಂದೆಯ ಪ್ರಶ್ನೆಗೆ ಸಮೀರಾ ರೆಡ್ಡಿ ಕೊಟ್ಟ ಉತ್ತರಕ್ಕೆ ಎಲ್ಲರೂ ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts