More

    ಓಟದಲ್ಲಿ ಎಸ್.ಸ್ನೇಹಾಗೆ ಚಿನ್ನದ ಪದಕ

    ಕೊಪ್ಪ: ಚಂಡೀಗಢದಲ್ಲಿ ಇತ್ತೀಚೆಗೆ ನಡೆದ 200ಮೀ ಓಟದಲ್ಲಿ ಶಾನುವಳ್ಳಿ ಎಸ್.ಸ್ನೇಹಾ ಹೊಸ ದಾಖಲೆ ನಿರ್ಮಿಸಿದ್ದಾರೆ.

    200 ಮೀಟರ್ ಓಟವನ್ನು 11.63 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 100 ಮೀಟರ್ ಓಟದಲ್ಲಿಯೂ ಚಿನ್ನವನ್ನು ಗೆಲ್ಲುವ ಮೂಲಕ ಅತ್ಯುತ್ತಮ ಅಥ್ಲೀಟ್ ಟ್ರೋಫಿ ಪಡೆದುಕೊಂಡರು. ಇದೇ ವರ್ಷ ಒಡಿಶಾದ ಭುವನೇಶ್ವರದಲ್ಲಿ ನಡೆದ 27ನೇ ಸೀನಿಯರ್ ಫೆಡರೇಷನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಕೊಂಡಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಆದಾಯ ತೆರಿಗೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಶಾನುವಳ್ಳಿ ಸತ್ಯನಾರಾಯಣ ಹಾಗೂ ಶಾಲಿನಿ ದಂಪತಿ ಪುತ್ರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts