More

  ಬಿಜೆಪಿಯ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

  ಗೋಣಿಕೊಪ್ಪ: ಶ್ರೀಮಂಗಲ ಕುರ್ಚಿ ಗ್ರಾಮದ ಬಿಜೆಪಿಯ 30 ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
  ಚೋಕಿರ ಕಲ್ಪನಾ ತಿಮ್ಮಯ್ಯ ನೇತೃತ್ವದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ವಲಯ ಅಧ್ಯಕ್ಷ ಪೆಲ್ವಿನ್ ಪೂಣಚ್ಚ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

  ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗ್ರಾಪಂ ಸದಸ್ಯ ಸುದಿ ಪೊನ್ನಪ್ಪ, ಪ್ರಮುಖರಾದ ಚೋಕಿರ ತಿಮ್ಮಯ್ಯ, ಪ್ರಶಾಂತ್ ಕಾಳಿಮಾಡ, ಮುಕ್ಕಾಟ್ಟಿರ ಅಯ್ಯಪ್ಪ, ಬೋಸ್ ಮಾದಪ್ಪ, ಮಚ್ಚಮಾಡ ಉದಯ ಹಾಗೂ ಹಲವಾರು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts