ರೈತರ ಕೆಲಸಗಳು ವಿಳಂಬವಾಗದಿರಲಿ

blank

ಸಾಲಿಗ್ರಾಮ: ಹುಣಸೂರು ಉಪ ವಿಭಾಗಾಧಿಕಾರಿ ಮಹಮದ್ ಹಾರೀಸ್ ಸುಮೇರ್, ಸಾಲಿಗ್ರಾಮ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ತಹಸಿಲ್ದಾರ್ ನರಗುಂದ ಮತ್ತು ಆಡಳಿತ ಅಧಿಕಾರಿಗಳ ಸಭೆ ನಡೆಸಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಎಸಿ, ಅರ್ಜಿಗಳನ್ನು ಪರಿಶೀಲಿಸಿ ಸಭೆಯಲ್ಲಿ ಚರ್ಚಿಸಿದರು. ಸಾಲಿಗ್ರಾಮ ಹೊಸ ತಾಲೂಕಾಗಿ 3 ವರ್ಷ ಕಳೆದರೂ ರೈತರಿಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ದೂರಿನ ಮೇರೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮತ್ತು ರೈತರಿಗೆ ತುರ್ತಾಗಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕೆಲಸ ವಿಳಂಬವಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಜನರು ಪದೇ ಪದೆ ಕಚೇರಿಗೆ ಅಲೆದಾಡಬಾರದು. ಒಮ್ಮೆ ಬಂದರೆ ಅವರ ಕೆಲಸ ಆಗಬೇಕು ಎಂದು ಸೂಚಿಸಿದರು.

ಪ್ರತಿದಿನ ಸಭೆಯ ನೆಪ ಹೇಳಿ ಅಧಿಕಾರಿಗಳು ಜನರ ಕೈಗೆ ಸಿಗದಿದ್ದರೆ ಸಾರ್ವಜನಿಕರು ಮತ್ತು ರೈತರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತ ಬರುತ್ತದೆ. ಆಗ ತರಾತುರಿಯಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಬಂದ ಅರ್ಜಿಗಳನ್ನು ಕೂಡಲೇ ಬಗೆಹರಿಸುವಂತಹ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದರು.

ಭೂಮಿಗೆ ಸಂಬಂಧಪಟ್ಟಂತೆ ತಹಸೀಲ್ದಾರ್ ಬೆರಳಚ್ಚು ನೀಡಬೇಕಾಗಿದೆ. ಆದರೆ ಸಾಲಿಗ್ರಾಮ ತಾಲೂಕು ಕಚೇರಿಯಲ್ಲಿ ಬೆರಳಚ್ಚು ನೀಡುವ ವ್ಯವಸ್ಥೆ ಇಲ್ಲದೆ, ಕೆ.ಆರ್.ನಗರಕ್ಕೆ ಹೋಗಬೇಕಾಗಿದೆ. ಹಾಗಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿ ಗಮನಕ್ಕೆ ತಂದು 10 ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಶ್ರಮ ವಹಿಸುತ್ತೇನೆ. ಹೊಸ ತಾಲೂಕು ಆಗಿರುವುದರಿಂದ ತಡವಾಗಿರಬಹುದು. ಜತೆಗೆ ಇನ್ನೂ ಕೆಲವು ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಸಂಬಂಧಪಟ್ಟವರು ಅದನ್ನು ಸರಿಪಡಿಸಿಕೊಳ್ಳಿ ಎಂದರು.

ಹೊಸ ತಾಲೂಕು ಕೇಂದ್ರವಾಗಿರುವ ಸಾಲಿಗ್ರಾಮ ಕಚೇರಿಗೆ ಹಂತ ಹಂತವಾಗಿ ಎಲ್ಲ ಸಭೆಗಳನ್ನು ಕಲ್ಪಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. ಸಾರ್ವಜನಿಕರು ಮತ್ತು ರೈತರು ಪದೇ ಪದೆ ತಾಲೂಕು ಕಚೇರಿಗೆ ಅಲೆದಾಡಬಾರದು. ಜತೆಗೆ ಹುಣಸೂರು ಉಪವಿಭಾಗ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ದೂರುಗಳು ಹೋಗಬಾರದು ಎಂದರು.

ತಹಸೀಲ್ದಾರ್ ನರಗುಂದ, ಕಚೇರಿ ಸಿಬ್ಬಂದಿ ಇದ್ದರು.

Share This Article

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

Health Tips: ಊಟ, ತಿಂಡಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ!

Health Tips: ಸಾಮಾನ್ಯವಾಗಿ ಊಟ ಮಾಡುವಾಗ ತಿಂಡಿ ತಿಂದು ತಿಳಿಯದೆ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತೇವೆ.  ಊಟವಾದ…