More

    ಚನ್ನಹಳ್ಳಿ ಸುತ್ತಮುತ್ತ ಚಿರತೆ ಸಂಚಾರ

    ಶಿಕಾರಿಪುರ: ತಾಲೂಕಿನ ಚನ್ನಹಳ್ಳಿ ಸುತ್ತಮುತ್ತ ಚಿರತೆ ಸಂಚಾರದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಕೊಟ್ಟಿಗೆ ಮನೆಯಲ್ಲಿದ್ದ ಸಾಕು ನಾಯಿಯೊಂದು ನಾಪತ್ತೆಯಾಗಿದ್ದು ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.

    ಚಿರತೆ ಸಂಚಾರಕ್ಕೆ ಪುಷ್ಟಿ ನೀಡುವಂತೆ ಚನ್ನಳ್ಳಿ ದೇವೇಂದ್ರಪ್ಪ ಅವರ ಜಮೀನು ಬಳಿ ಹೆಜ್ಜೆ ಗುರುತುಗಳಿವೆ. ಇದು ಸಹಜವಾಗಿ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
    ಚಿರತೆ ಓಡಾಟದ ಮಾಹಿತಿಯನ್ನು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಎಸಿಎಫ್ ಸುರೇಶ್ ಮಾರ್ಗದರ್ಶನದಂತೆ ಆರ್‌ಎಫ್‌ಒ, ಅಧಿಕಾರಿಗಳು, ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಓಡಾಡಿರುವುದನ್ನು ಮತ್ತು ಅದರ ಹೆಜ್ಜೆ ಗುರುತುಗಳನ್ನು ಖಾತ್ರಿ ಪಡಿಸಿದ್ದಾರೆ. ಚಿರತೆಯನ್ನು ಶೀಘ್ರ ಸೆರೆ ಹಿಡಿಯುವ ಭರವಸೆ ನೀಡಿ, ಸಂಜೆಯಾದ ನಂತರ ಒಬ್ಬೊಬ್ಬರೇ ಹೊಲ-ಗದ್ದೆ, ಕಾಡಿನ ಕಡೆಗೆ ಹೋಗಬೇಡಿ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
    ತಾಲೂಕಿನ ಗಂಗವ್ವನಸರ ಫಾರೆಸ್ಟ್ ಸೇರಿ ಹಲವು ಕಡೆಗಳಲ್ಲಿ ಚಿರತೆಗಳಿವೆ. ಬರಗಾಲದ ಕಾರಣ ಆಹಾರ ಮತ್ತು ನೀರಿಗಾಗಿ ಅವುಗಳು ಊರಿಗೆ ಬಂದಿರುತ್ತವೆ. ಚನ್ನಳ್ಳಿ ಬಳಿ ಓಡಾಡಿರುವ ಚಿರತೆ ವಯಸ್ಸು ಅಂದಾಜು ಒಂದೂವರೆ ವರ್ಷ ಇರಬಹುದು. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಆರ್‌ಎಫ್‌ಒ ರೇವಣಸಿದ್ದಯ್ಯ ಹಿರೇಮಠ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts