More

    ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

    ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡುವುದು ಇಂದು ಸಾಮಾನ್ಯ. ಸಾವಿಗೆ ಕಾರಣ ಏನೆಂಬುದನ್ನು ತಿಳಿಯಲು ಮೃತದೇಹದ ಪರೀಕ್ಷೆಯನ್ನು ಮಾಡಲಾಗುತ್ತದೆ. ವ್ಯಕ್ತಿ ಮೃತಪಟ್ಟ ೧೦ ಗಂಟೆಯ ಒಳಗೆ ಶವಪರೀಕ್ಷೆಯ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮೃತದೇಹದ ಪರೀಕ್ಷೆಗೂ ಮುನ್ನ ಮೃತನ ಪಾಲಕರು ಅನುಮತಿಯನ್ನು ಪಡೆಯಲಾಗುತ್ತದೆ.

    ವೈದ್ಯರು ಪೋಸ್ಟ್‌ ಮಾರ್ಟಂ ಅನ್ನು ರಾತ್ರಿ ಸಮಯ ಮಾಡದಿರುವುದನ್ನು ಬಹುತೇಕ ಸಮಯದಲ್ಲಿ ನೀವು ನೋಡಿರುತ್ತೀರಿ. ಒಂದು ವೇಳೆ ವ್ಯಕ್ತಿಯೊಬ್ಬ ಸಂಜೆ ಅಥವಾ ರಾತ್ರಿ ಸಾವಿಗೀಡಾದರೆ ಮಾರನೆ ದಿನ ಬೆಳಗ್ಗೆ ಶವಪರೀಕ್ಷೆ ನಡೆಸಲಾಗುತ್ತದೆ. ಹಾಗದರೆ ರಾತ್ರಿ ಸಮಯ ಶವಪರೀಕ್ಷೆ ಏಕೆ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿಲ್ಲ ಎನ್ನುವುದಾದರೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ…

    ವೈದ್ಯರು ರಾತ್ರಿ ಏಕೆ ಪೋಸ್ಟ್‌ ಮಾರ್ಟಂ ಮಾಡುವುದಿಲ್ಲ ಎಂಬುದನ್ನು ತಿಳಿದರೆ ನಿಮಗೆ ನಿಜಕ್ಕೂ ಶಾಕ್‌ ಆಗುತ್ತದೆ. ರಾತ್ರಿಯ ವೇಳೆ ಗಾಯದ ರಕ್ತದ ಕಲೆಯು ಟ್ಯೂಬ್‌ಲೈಟ್‌ ಮತ್ತು ಎಲ್‌ಇಡಿ ಲೈಟ್‌ಗೆ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಸೂರ್ಯನ ಬೆಳಕಿನಲ್ಲಿ ಮಾತ್ರ ಗಾಯದ ರಕ್ತದ ಕಲೆಯೂ ಕೆಂಪು ಬಣ್ಣದಲ್ಲಿ ಕಾಣುತ್ತದೆ. ಹೀಗಾಗಿ ಫೋರೆನ್ಸಿಕ್ ವಿಜ್ಞಾನದಲ್ಲಿ ಈ ಗಾಯದ ಕಲೆಯನ್ನು ಉಲ್ಲೇಖಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಾವಿಗೆ ಕಾರಣ ಏನೆಂದು ತಿಳಿಯಲು ಸಹ ಸಾಧ್ಯವಾಗುವುದಿಲ್ಲ.

    ಇದನ್ನು ಹೊರತುಪಡಿಸಿದರೆ ನಮ್ಮ ಧರ್ಮದಲ್ಲಿ ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ನಿಯಮವಿಲ್ಲ. ಹೀಗಾಗಿ ವೈದ್ಯರು ರಾತ್ರಿ ವೇಳೆಯ ಶವಪರೀಕ್ಷೆಯನ್ನು ನಿರಾಕರಿಸುತ್ತಾರೆ. ರಾತ್ರಿ ಸಮಯ ಜಜ್ಜಿದ ಗಾಯದ ಕಲೆಗಳು ಟ್ಯೂಬ್‌ಲೈಟ್‌ ಮತ್ತು ಎಲ್‌ಇಡಿ ಲೈಟ್‌ಗೆ ಕೆಂಪು ಬಣ್ಣದ ಬದಲು ಬೇರೆ ಬಣ್ಣದಲ್ಲಿ ಕಾಣಿಸುತ್ತದೆ. ಆದ್ದರಿಂದಾಗಿ ನ್ಯಾಯಾಲಯವೂ ಕೂಡ ರಾತ್ರಿ ಸಮಯದ ಶವಪರೀಕ್ಷೆಯನ್ನು ನಿರಾಕರಿಸುತ್ತಾರೆ. ಈ ಎಲ್ಲ ಕಾರಣಾಂತರಗಳಿಂದ ರಾತ್ರಿ ಸಮಯ ಪೋಸ್ಟ್‌ ಮಾರ್ಟಂ ಮಾಡುವುದಿಲ್ಲ. (ಏಜೆನ್ಸೀಸ್​)

    ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!

    ಸಮಂತಾರಿಂದ ಡಿವೋರ್ಸ್‌ ಬೆನ್ನಲ್ಲೇ ಟ್ವೀಟರ್‌ನಲ್ಲಿ ಕಾಣಿಸಿಕೊಂಡ ನಾಗಚೈತನ್ಯ: ಅಭಿಮಾನಿಗಳಿಗೆ ನಿರಾಸೆ

    ‘ಕೋಟಿಗೊಬ್ಬ’ನ ಕಾಣದೇ ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು- ಆತ್ಮಹತ್ಯೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts