More

    ಒಂದೇ ಒಂದು ಮೆಸೇಜ್​ನಿಂದ ಹಣ, ಗೌರವ ಎಲ್ಲವನ್ನು ಕಳ್ಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಕಣ್ಣೀರಿಟ್ಟ ನಟಿ!

    ಚೆನ್ನೈ: ಆನ್​ಲೈನ್​ ಫಿಶಿಂಗ್​ (ಇಂಟರ್ನೆಟ್ ಮೂಲಕ ವ್ಯಕ್ತಿಯ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕದಿಯುವ ವಿಧಾನ) ಮಸೇಜ್​ ದಾಳಕ್ಕೆ ಸಿಲುಕಿ ಹಣ ಮತ್ತು ಗೌರವವನ್ನು ಕಳೆದುಕೊಂಡೆ ಎಂದು ನಟಿ ಲಕ್ಷ್ಮೀ ವಾಸುದೇವನ್​ ಫೇಸ್​ಬುಕ್​ ಲೈವ್​​ನಲ್ಲಿ ಕಣ್ಣೀರಿಟ್ಟಿದ್ದಾರೆ.

    ಆನ್​ಲೈನ್​ ಮೋಸವನ್ನು ವಿವರಿಸಿರುವ ಲಕ್ಷ್ಮೀ, ಸೈಬರ್​ ಖದೀಮರು ಕಳುಹಿಸಿದ ಫಿಶಿಂಗ್​ ಮಸೇಜ್​ ಅನ್ನು ಕ್ಲಿಕ್​ ಮಾಡಿದ ಬಳಿಕ ನನ್ನ ಮೊಬೈಲ್​ ಫೋನ್​ ಹ್ಯಾಕ್​ ಆಯಿತು. ಆನಂತರ ಅನೇಕ ಬೆದರಿಕೆ ಕರೆಗಳು ಬರಲು ಆರಂಭವಾಯಿತು. ಎಡಿಟ್​ ಮಾಡಿದ ಅಶ್ಲೀಲ ಫೋಟೋಗಳನ್ನು ಪಾಲಕರಿಗೆ ಕಳುಹಿಸುವುದಾಗಿ ಹೆದರಿಸಿದರು ಎಂದಿದ್ದಾರೆ.

    ಸೆ.11ರಂದು ಒಂದು ಮೆಸೇಜ್​ ಬಂದಿತು. ಅದರಲ್ಲಿ 5 ಲಕ್ಷ ಬಹುಮಾನ ಗೆದ್ದಿರುವುದಾಗಿ ಬರೆಯಲಾಗಿತ್ತು. ಮಸೇಜ್​ನಲ್ಲಿದ್ದ ಲಿಂಕ್​ ಅನ್ನು ಕ್ಲಿಕ್​ ಮಾಡಿದ ಕೂಡಲೇ ಆನ್​ಲೈನ್​ ಲೋನ್​ ಆ್ಯಪ್​ ಒಂದು ಡೌನ್​ಲೋಡ್​ ಆಯಿತು. ಇದಾದ ಕೆಲವೇ ಕ್ಷಣಗಳಲ್ಲಿ ನನ್ನ ಫೋನ್​ ಹ್ಯಾಕ್​ ಆಯಿತು ಎಂದು ಲಕ್ಷ್ಮೀ ತಿಳಿಸಿದ್ದಾರೆ.

    ಇದಾದ ನಾಲ್ಕು ದಿನಗಳ ಬಳಿಕ ಲಕ್ಷ್ಮೀ ಮತ್ತೊಂದು ಮಸೇಜ್​ ಸ್ವೀಕರಿಸಿದ್ದಾರೆ. ನೀವು ಲೋನ್​ ತೆಗೆದುಕೊಂಡಿದ್ದೀರಾ, ಅದನ್ನು ಖಂಡಿತವಾಗಿ ಮರುಪಾವತಿಸಿ ಎಂದು ಮೆಸೇಜ್​ನಲ್ಲಿ ಬರೆಯಲಾಗಿದೆ. ಅದನ್ನು ಓದಿದ ಲಕ್ಷ್ಮೀ ಒಂದು ಕ್ಷಣ ಗಾಬರಿಗೆ ಒಳಗಾಗಿದ್ದಾರೆ. ಏಕೆಂದರೆ, ಲಕ್ಷ್ಮೀ ಅವರು ಲೋನ್​ ತೆಗೆದುಕೊಂಡಿರಲಿಲ್ಲ. ಒಂದು ವೇಳೆ ಲೋನ್​ ಮರು ಪಾವತಿ ಮಾಡದಿದ್ದರೆ, ಎಡಿಟ್​ ಮಾಡಿದ ಅಶ್ಲೀಲ ಫೋಟೋಗಳನ್ನು ವೈರಲ್​ ಮಾಡುವುದಾಗಿ ಬೆದರಿಸಿದರು. ಅಲ್ಲದೆ, ನನ್ನ ಪಾಲಕರು ಸೇರಿದಂತೆ ನನ್ನ ಸಂಪರ್ಕದಲ್ಲಿರುವ ಕೆಲವರ ನಂಬರ್​ಗೆ ಫೋಟೋಗಳನ್ನು ಸಹ ಕಳುಹಿಸಿದ್ದಾರೆಂದು ಲಕ್ಷ್ಮೀ ತಿಳಿಸಿದ್ದಾರೆ.

    ಈ ಕುರಿತು ಸಿಕಂದರಾಬಾದ್ ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿ ನಟಿ ತಿಳಿಸಿದ್ದಾರೆ. ಇನ್ನು ಮುಂದೆ ಯಾರಿಗೂ ಇಂತಹ ಪರಿಸ್ಥಿತಿ ಎದುರಾಗಬಾರದು ಎಂದು ನಟಿ ವಿಡಿಯೋವನ್ನು ಅಂತ್ಯಗೊಳಿಸಿದ್ದಾರೆ. ವಿಡಿಯೋದಲ್ಲಿ ಲಕ್ಷ್ಮೀ ಅವರು ಸೈಬರ್​ ವಂಚಕರ ಕೃತ್ಯ ನೆನೆದು ಕಣ್ಣೀರು ಹಾಕಿದ್ದಾರೆ. ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಅಳಬೇಡಿ ಧೈರ್ಯವಾಗಿರಿ ಎಂದು ಧೈರ್ಯ ತುಂಬಿದ್ದಾರೆ.

    ಅಂದಹಾಗೆ ಲಕ್ಷ್ಮೀ ವಾಸುದೇವನ್​ ಅವರು ತಮಿಳು, ತೆಲುಗು ಮತ್ತು ಕನ್ನಡದ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಅವರು ಚೆನ್ನೈ ಮೂಲದವರಾಗಿದ್ದು, ತಮಿಳಿನಲ್ಲಿ ತುಂಬಾ ಖ್ಯಾತಿ ಪಡೆದಿದ್ದಾರೆ. (ಏಜೆನ್ಸೀಸ್​)

    ಸ್ಟಾರ್​​ ನಟನ ಪುತ್ರನ ಜೊತೆ ರೋಜಾ ಪುತ್ರಿಯ ರೊಮ್ಯಾನ್ಸ್​: ಕಾಲಿವುಡ್​ ಗಲ್ಲಿಯಲ್ಲಿ ಹೀಗೊಂದು ಸುದ್ದಿ…

    ಆಲಿಯಾ​ ಜತೆ ಮಲಗುವುದೆಂದರೆ ಅದೊಂದು ಹೋರಾಟ! ರಣಬೀರ್​​ ಹೇಳಿಕೆಗೆ ಆಲಿಯಾ ಉತ್ತರ ಹೀಗಿತ್ತು….

    ಚಂಡೀಗಢ ವಿವಿ ಹಾಸ್ಟೆಲ್ ವಿಡಿಯೋ ಲೀಕ್​​: ಯೋಧ ಅರೆಸ್ಟ್​, ಆರೋಪಿ ವಿದ್ಯಾರ್ಥಿನಿಗೂ ಯೋಧನಿಗಿದ್ದ ಸಂಬಂಧವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts