More

    ತಂದೆ-ತಾಯಿ ವಿರುದ್ಧವೇ ಹೈಕೋರ್ಟ್​ ಮೆಟ್ಟಿಲೇರಿದ ನಟ ವಿಜಯ್​: ಬ್ಯಾನ್​ ಮಾಡುವಂತೆ ಕೋರ್ಟ್​ಗೆ ಮನವಿ!

    ಚೆನ್ನೈ: ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಅವರು ತಮ್ಮ ತಂದೆ-ತಾಯಿ ವಿರುದ್ಧವೇ ಕಾನೂನಿನ ಮೆಟ್ಟಿಲೇರಿರುವುದು ಎಲ್ಲರ ಹುಬ್ಬೇರಿಸಿದೆ. ತಮ್ಮ ಒಡೆತನದ ವಿಜಯ್​ ಮಕ್ಕಳ್​ ಇಯಕ್ಕಮ್ (ವಿಎಂಐ) ಹೆಸರಿನ ಸಾಮಾಜಿಕ ಕಲ್ಯಾಣ ಸಂಸ್ಥೆಯ ತಂಡವೂ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನೇಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ವಿಜಯ್​ ದೂರಿದ್ದಾರೆ.

    ತನ್ನ ತಂದೆ ಎಸ್​.ಎ. ಚಂದ್ರಶೇಖರ್​ ಮತ್ತು ತಾಯಿ ಶೋಭಾ ಸೇರಿದಂತೆ ವಿಎಂಐ ಸಂಸ್ಥೆಯ ಮಾಜಿ ಮತ್ತು ಹಾಲಿ ಕಾರ್ಯನಿರ್ವಾಹಕರ ತಂಡವನ್ನು ನಿಷೇಧಿಸುವಂತೆ ವಿಜಯ್​ ಅವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈ ಹೈಕೋರ್ಟ್​ನಲ್ಲಿ ಕೇಸು ದಾಖಲಾಗಿದ್ದು, ಇದೇ ತಿಂಗಳ 27ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ.

    ಆಲ್​ ಇಂಡಿಯಾ ಕಮ್ಯಾಂಡರ್​ ವಿಜಯ್​​ ಪೀಪಲ್​ ಮೂವ್ಮೆಂಟ್ ಎಂಬ​ ಪಾರ್ಟಿಯನ್ನು ಆರಂಭಿಸಿದ ವಿಜಯ್​ ಸೋದರಸಂಬಂಧಿ ಪದ್ಮನಾಭನ್​ ಅವರು ಅದರ ನಾಯಕರಾಗಿದ್ದಾರೆ. ವಿಜಯ್​ ತಂದೆ ಎಸ್​.ಎ. ಚಂದ್ರಶೇಖರ್​ ಮತ್ತು ತಾಯಿ ಶೋಭಾ ಅವರು ಪಕ್ಷದ ಖಜಾಂಚಿಗಳಾಗಿದ್ದಾರೆ. ಆದರೆ, ಈ ಪಾರ್ಟಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಈಗಾಗಲೇ ವಿಜಯ್​ ನಿರಾಕರಿಸಿದ್ದಾರೆ.

    ಇದೀಗ ಕೋರ್ಟ್​ ಮೆಟ್ಟಿಲೇರಿರುವ ವಿಜಯ್​, ತನ್ನ ಹೆಸರನ್ನು ಬಳಸಿಕೊಂಡು ವಿಎಂಐ ತಂಡವು ಸಭೆಗಳನ್ನು ನಡೆಸುವುದನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸಮಯದಲ್ಲಿ ವಿಜಯ್​ ತಾಯಿ ಶೋಭಾ ಪರವಾಗಿ ತಂದೆ ಚಂದ್ರಶೇಖರ್​ ಅವರು ಪ್ರತ್ಯುತ್ತರ ಅರ್ಜಿಯನ್ನು ಸಲ್ಲಿದ್ದಾರೆ. ಆದರೆ, ವಿಜಯ್​ ಪರ ವಕೀಲ ಕೋರ್ಟ್​ಗೆ ಹಾಜರಾಗದ ಕಾರಣ ಈ ಪ್ರಕರಣವನ್ನು ಸೆ. 27ಕ್ಕೆ ಹೈಕೋರ್ಟ್​ ಮುಂದೂಡಿದೆ.

    ತಂದೆ ಚಂದ್ರಶೇಖರ್​ ಮತ್ತು ವಿಜಯ್​ ನಡುವೆ ಕೆಲವು ದಿನಗಳಿಂದ ಶೀತಲ ಸಮರ ನಡೆಯುತ್ತಿರುವುದು ತಿಳಿದಿದೆ. ಆದರೆ, ವಿಜಯ್​ ತಮ್ಮ ತಾಯಿ ವಿರುದ್ಧವೇ ಕೋರ್ಟ್​ ಹೋಗಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ವಿಜಯ್​ ತಮ್ಮ ಮುಂದಿನ “ಬೀಸ್ಟ್​” ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

    ಅರಣ್ಯಾಧಿಕಾರಿ ಸಾವು ಪ್ರಕರಣ: ಪತ್ನಿಯ ಅಕ್ರಮ ಸಂಬಂಧದ ಮುಖವಾಡ ಕಳಚಲು ಪೊಲೀಸರ ಮೆಗಾ ಪ್ಲಾನ್​..!

    ಕಿವೀಸ್ ಕೈ ಕೊಟ್ರು​ ನಾನಿಲ್ಲವೇ? ವಿಶ್ವದೆದುರು ಬೆತ್ತಲಾಗಿರೋ ಪಾಕ್​ಗೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಬೆಂಬಲ

    ತಿರುಪತಿ ಭೇಟಿ ವೇಳೆ ಪತ್ರಕರ್ತರ ಮೇಲೆ ಸಮಂತಾ ಗರಂ: ನಿಮಗೆ ಬುದ್ಧಿ ಇಲ್ವಾ ಎಂದ ಸೌತ್​ ಬ್ಯೂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts