More

    ಮಹಿಳೆಯ ತೂಕಕ್ಕಿಂತಲೂ ಹೆಚ್ಚು ಭಾರವಾದ ಗಡ್ಡೆಯನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರು!

    ಅಹಮದಾಬಾದ್​: ಗುಜರಾತಿನ ಅಹಮದಾಬಾದ್​ನಲ್ಲಿರುವ ಅಪೊಲೋ ಆಸ್ಪತ್ರೆಯ 8 ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳು ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ​

    ಮಹಿಳೆಯು ಸುಮಾರು 18 ವರ್ಷಗಳಿಂದ ಗಡ್ಡೆಯನ್ನು ತನ್ನ ಹೊತ್ತುಕೊಂಡು ಭಾರೀ ಶ್ರಮ ಪಟ್ಟಿದ್ದಳು. ಆದರೆ, ಕೆಲ ತಿಂಗಳುಗಳಿಂದ ಹೊಟ್ಟೆ ತುಂಬ ಭಾರವಾಗಿ ನಡೆದಾಡುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಸದಾ ಬೆಡ್​ ಮೇಲೆಯೇ ಮಲಗಿರುತ್ತಿದ್ದಳು. ಕೊನೆಗೆ ಉಸಿರಾಟಕ್ಕೂ ತೊಂದರೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಸರಿ ಅಂದುಕೊಂಡು ಅಹಮದಾಬಾದ್​ನ ಅಪೊಲೋ ಆಸ್ಪತ್ರೆಗೆ ಮಹಿಳೆ ದಾಖಲಾದಳು.

    ಚೀಫ್ ಗ್ಯಾಸ್ಟ್ರೋಎಂಟರಾಲಜಿಸ್ಟ್​ ನೇತೃತ್ವದ ನಾಲ್ವರು ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವು ಸರ್ಜರಿಯನ್ನು ಯಶಸ್ವಿಗೊಳಿಸಿದೆ. ಅಂಗಾಂಶಗಳ ಸುತ್ತ ಬೆಳೆದಿದ್ದ ಹೆಚ್ಚುವತಿ ಚರ್ಮವನ್ನು ತೆಗೆಯುವ ಮೂಲಕ ಸುಮಾರು 47 ಕೆಜಿ ಭಾರವನ್ನು ಕಡಿಮೆ ಮಾಡಲಾಗಿದೆ. ಸುಮಾರು 18 ವರ್ಷಗಳಿಂದ ಭಾರವನ್ನು ಹೊತ್ತುಕೊಂಡು ಬಳಲಿದ್ದ ಮಹಿಳೆ ಇದೀಗ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

    ಶಸ್ತ್ರಚಿಕಿತ್ಸೆಗೂ ಮುನ್ನ ರೋಗಿಯು ತೂಕವನ್ನು ನೋಡಿರಲಿಲ್ಲ. ಆದರೆ, ಪ್ರಸ್ತುತ ಆಕೆಯ ತೂಕ 49 ಕೆ.ಜಿ. ಇದೆ. 56 ವರ್ಷದ ಮಹಿಳೆಯ ದೇಹದಿಂದ 47 ಕೆಜಿ ತೂಕದ ಗಡ್ಡೆಯನ್ನು ತೆಗೆಯಲಾಗಿದೆ. ಫೆಬ್ರವರಿ 15 ರಂದು ಅಹಮದಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.

    ‘ತೆಗೆದ ಗಡ್ಡೆಯು ಮಹಿಳೆಯ ತೂಕಕ್ಕಿಂತ ಹೆಚ್ಚಿತ್ತು. ಗಡ್ಡೆ ನಿರಂತರ ಬೆಳೆಯುವುದರಿಂದ ಆಂತರಿಕ ಅಂಗಗಳ ಸ್ಥಾನಗಳನ್ನು ಬದಲಾಯಿಸಲು ಕಾರಣವಾಗುತ್ತದೆ. ಹೊಟ್ಟೆಗೆ ಅಂಟಿಕೊಂಡಿರುವ ಗಡ್ಡೆಯ ಒತ್ತಡದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಮೂತ್ರಕೋಶದ ಭಾಗಗಳು ಬಾಧಿಸುತ್ತವೆ ವೈದ್ಯರೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದುವೆ ಸಂಭ್ರಮದ ವೇಳೆ ಘನಘೋರ ದುರಂತ: ಆಕಸ್ಮಿಕವಾಗಿ ಬಾವಿಗೆ ಬಿದ್ದು 11 ಮಂದಿ ದುರ್ಮರಣ

    ಈ ಬಾರಿ ಬದಲಾವಣೆ ಇಲ್ಲವೇ ಇಲ್ಲ… ಮದುವೆ ವಿಚಾರದಲ್ಲಿ ಆರ್‌ಸಿಬಿಗೆ ಶಾಕ್ ನೀಡಿದ ಮ್ಯಾಕ್ಸ್‌ವೆಲ್!

    ಕೈ-ಕಮಲ ಧ್ವಜ ಸಂಘರ್ಷ: ಈಶ್ವರಪ್ಪ-ಡಿ.ಕೆ. ಶಿವಕುಮಾರ್ ವಾಕ್ಸಮರ; ಕಲಾಪ ನುಂಗಿದ ಮೇಲಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts