More

    ಕರಾಚಿಯಲ್ಲಿ ಸೂಸೈಡ್​ ಬಾಂಬ್​ ದಾಳಿ ನಡೆಸಿದ ಮಹಿಳೆ ಎಂಎಸ್ಸಿ ಪದವೀಧರೆ, ಗಂಡ ಡಾಕ್ಟರ್​

    ಕರಾಚಿ: ಪಾಕಿಸ್ತಾನದ ಪ್ರತ್ಯೇಕತಾವಾದಿ ಗುಂಪಿಗೆ ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್​ ದಾಳಿಗೆ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಕರಾಚಿಯಲ್ಲಿ ನಿನ್ನೆ (ಏ.26) ನಡೆದಿದೆ. ಇದೇ ಮೊದಲ ಬಾರಿಗೆ ಮಹಿಳಾ ಸೂಸೈಡ್​ ಬಾಂಬರ್​ ಅನ್ನು ಬಳಲಾಗಿದ್ದು, ಆತ್ಮಾಹುತಿ ದಾಳಿ ನಡೆಸಿದ ಮಹಿಳೆ ಸಾಮಾನ್ಯ ಮಹಿಳೆಯಲ್ಲ, ಆಕೆ ಉನ್ನತ ಶಿಕ್ಷಣ ಪಡೆದಿದ್ದಳು.

    ಸೂಸೈಡ್​ ಬಾಂಬರ್​ ಹೆಸರು ಶಾರಿ ಬಲೂಚ್​ (30). ಈಕೆ ಬಲೂಚಿಸ್ತಾನದ ಟರ್ಬ್ಯಾಟ್​ನಲ್ಲಿರುವ ನೈಜಾರ್​ ಅಬಾದ್​ ಮೂಲದವಳು. ಪ್ರಾಣಿಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪೂರ್ಣಗೊಳಿಸಿ, ವೈದ್ಯೆರೊಬ್ಬರನ್ನು ಮದುವೆ ಆಗಿದ್ದಳು. ದಂಪತಿ ಇಬ್ಬರು ಮಕ್ಕಳು ಸಹ ಇದ್ದಾರೆ.

    ಅಫ್ಘಾನಿಸ್ತಾನದ ಮೂಲದ ಉಗ್ರ ಸಂಘಟನೆ ಬಲೂಚಿಸ್ತಾನ್​ ಲಿಬರೇಷನ್​ ಆರ್ಮಿ (ಬಿಎಲ್​ಎ) ದಾಳಿಯ ಹೊಣೆ ಹೊತ್ತುಕೊಂಡಿದೆ. ಮಹಿಳೆಯ ಬಗ್ಗೆ ಅದೇ ಸಂಘಟನೆ ಮಾಹಿತಿ ನೀಡಿದ್ದು, ಎಂಫಿಲ್​ ಮುಗಿಸಿದ್ದ ಶಾರಿ ಬಲೂಚ್​, ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಬಿಎಲ್​ಎ ಸಂಘಟನೆ ವಿಶೇಷ ಆತ್ಮಾಹುತಿ ದಳ ಮಜೀದ್​ ಬ್ರಿಗೇಡ್​ಗೆ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದಳು. ತನ್ನ ಇಬ್ಬರು ಚಿಕ್ಕ ಮಕ್ಕಳ ಕಾರಣದಿಂದ ತಂಡದಿಂದ ಹೊರಗುಳಿಯುವ ಆಯ್ಕೆಯನ್ನು ಆಕೆಗೆ ನೀಡಲಾಗಿತ್ತು. ಆದರೂ ಅದನ್ನು ನಿರಾಕರಿಸಿ ಆತ್ಮಾಹುತಿ ದಾಳಿಗೆ ಒಪ್ಪಿಕೊಂಡಳು ಎಂದು ಬಿಎಲ್​ಎ ಹೇಳಿದೆ.

    ಬಲೂಚಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಚೀನಾದ ಹಿತಾಸಕ್ತಿಗಳನ್ನು ಗುರಿಯಾಗಿಸುವ ಬೆದರಿಕೆಯನ್ನು ಮಜೀದ್ ಬ್ರಿಗೇಡ್ ಹಾಕಿದೆ. ಕರಾಚಿ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಚೀನಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್​ಗೆ ಸಂಬಂಧಿಸಿದ ಸಿಬ್ಬಂದಿ ವಾಹನದ ಮೇಲೆ ಗುರಿಯಾಗಿಸಿ ಮಹಿಳಾ ಬಾಂಬರ್ ಶಾರಿ ಬಲೂಚ್​ ನಿನ್ನೆ ದಾಳಿ ಮಾಡಿದ್ದಾಳೆ. ಈ ಘಟನೆಯಲ್ಲಿ ಚೀನಾದ ಮೂವರು ಅಧಿಕಾರಿಗಳಾದ ಹುವಾಂಗ್​ ಗಿಪಿಂಗ್​, ದಿಂಗ್​ ಮಫಂಗ್​ ಮತ್ತು ಚೆನ್​ ಸಾಯ್​ ಮೃತಪಟ್ಟಿದ್ದಾರೆ.

    ಘಟನೆಯ ಬೆನ್ನಲ್ಲೇ ದಾಳಿ ಹೊಣೆ ಹೊತ್ತುಕೊಂಡ ಬಿಎಲ್​ಎ, ಇಂದಿನ ಕಾರ್ಯಾಚರಣೆಯನ್ನು ಮಜೀದ್ ಬ್ರಿಗೇಡ್‌ನ ಫಿದಾಯೀನ್ ಶಾರಿ ಬಲೋಚ್ ಅಲಿಯಾಸ್ ಬ್ರಾಮ್ಶ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದೆ. ವಿದ್ಯಾರ್ಥಿನಿಯಾಗಿದ್ದಾಗ ಶಾರಿ ಬಲೂಚ್ ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರಾಗಿದ್ದರು ಮತ್ತು ಬಲೂಚ್ ನರಮೇಧ ಮತ್ತು ಬಲೂಚಿಸ್ತಾನದ ಆಕ್ರಮಣದ ಬಗ್ಗೆ ತಿಳಿದಿದ್ದರು ಎಂದು ಬಿಎಲ್​ಎ ಪ್ರಕಟಣೆಯಲ್ಲಿ ತಿಳಿಸಿದೆ.

    ಬಲುಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾದ ಮೇಲೆ ಪ್ರತ್ಯೇಕತಾವಾದಿಗಳು ನಿಯಮಿತವಾಗಿ ದಾಳಿ ಮಾಡುತ್ತಿರುತ್ತಾರೆ. ಚೀನಾ ಸರ್ಕಾರವೂ ತನ್ನ ಬೆಲ್ಟ್ ಮತ್ತು ರೋಡ್ ಯೋಜನೆಯ ಭಾಗವಾಗಿ ಬೃಹತ್ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ಬಲುಚಿಸ್ತಾನ್​ ಪ್ರತ್ಯೇಕತವಾದಿ ಗುಂಪಿಗೆ ಇಷ್ಟವಿಲ್ಲ. ಅದನ್ನು ವಿರೋಧಿಸುತ್ತಲೇ ಬರುತ್ತಿದ್ದು, ಅದರ ಭಾಗವಾಗಿ ಇಂದು ಬಾಂಬ್​ ದಾಳಿ ನಡೆದಿದೆ ಎಂದು ಹೇಳಲಾಗಿದೆ.

    ಬಲೂಚಿಸ್ತಾನ್​ ಪ್ರದೇಶದಲ್ಲಿ ಲಾಭದಾಯಕ ಗಣಿಗಾರಿಕೆ ಮತ್ತು ಇಂಧನ ಯೋಜನೆಗಳ ವಿರುದ್ಧ ಪ್ರತ್ಯೇಕತಾವಾದಿಗಳು ದೀರ್ಘಕಾಲದಿಂದ ಅಸಮಾಧಾನವನ್ನು ಹೊಂದಿದ್ದಾರೆ, ಸ್ಥಳೀಯರು ಇದರ ಪ್ರಯೋಜನಗಳನ್ನು ಅನುಭವಿಸುವುದಿಲ್ಲ ಎಂಬುದೇ ಅವರ ಅಸಮಾಧಾನಕ್ಕೆ ಕಾರಣ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಮಹಿಳಾ ಸೂಸೈಡ್ ಬಾಂಬರ್ ದಾಳಿಗೆ ಚೀನಿಯರು ಸೇರಿ ನಾಲ್ವರ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಆಂಗ್​ ಸಾನ್​ ಸೂಕಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್​ ನ್ಯಾಯಾಲಯ

    ಬುದ್ಧಿಮಾಂದ್ಯ ಮಕ್ಕಳಿಗೆ ಜನ್ಮ ನೀಡಿದಳೆಂದು ಬೆಂಕಿ ಹಚ್ಚಿ ಕೊಂದ ಅತ್ತೆ-ನಾದಿನಿ! ಪತಿ ಸೇರಿ ಮೂವರಿಗೆ ಕೊನೆಗೂ ಆಯ್ತು ತಕ್ಕ ಶಾಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts