More

    ನಿಜವಾದ ರೈತನಾಯಕ ಯಡಿಯೂರಪ್ಪ: ಬಸವರಾಜ ಬೊಮ್ಮಾಯಿ

    ಗದಗ: ರೈತರಿಗೆ ನಿರಂತರ ಅನ್ಯಾಯ ಮಾಡುತ್ತಿರುವ ಈ ದರಿದ್ರ ಸರ್ಕಾರ ಅಧಿಕಾರದಲ್ಲಿ ಉಳಿಯಬೇಕಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
    ಗಜೇಂದ್ರಘಡ ದಲ್ಲಿ ನಡೆದ ಬಿಜೆಪಿ ಏರ್ಪಡಿಸಿದ್ದ ಬೃಹತ್ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
    ರೈತರ ವಿಚಾರದಲ್ಲಿಯೂ ಕಾಂಗ್ರೆಸ್ ಮೋಸ ಮಾಡಿದೆ. ನಿಜವಾದ ರೈತನಾಯಕ ಯಡಿಯೂರಪ್ಪ. 2008 ರಲ್ಲಿ ಎಲ್ಲ ರೈತರಿಗೂ ಹತ್ತು ಎಚ್ ಪಿ ವರೆಗೂ ಉಚಿತ ವಿದ್ಯುತ್ ನೀಡುವ ಆದೇಶ ಮಾಡಿದರು. ಅಧಿಕಾರಿಗಳು ವಿರೋದ ಮಾಡಿದರೂ, ಯಡಿಯೂರಪ್ಪ ನಾನು ರೈತರಿಂದ ಸಿಎಂ ಆಗಿದ್ದೇನೆ. ಯೋಜನೆ ಜಾರಿ ಮಾಡಿ ಎಂದು ಆದೇಶ ಮಾಡಿದರು. ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿದರು. ರಸಗೊಬ್ಬರ ಖಾಸಗಿ ವಲಯದಲ್ಲಿತ್ತು. ಅದನ್ನು ಸೊಸೈಟಿ ಮೂಲಕ ಕೊಡುವ ವ್ಯವಸ್ಥೆ ಜಾರಿ ಮಾಡಿದರು.
    ಜಗದೀಶ ಶೆಟ್ಡರ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ವಿಧಾನಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ಯಡಿಯೂರಪ್ಪ ಸೂಚನೆ ನೀಡಿದರು. ಜಗದೀಶ್ ಶೆಟ್ಟರ್ ಅದನ್ನು ಆದೇಶ ಮಾಡಿದರು ಎಂದು ಹೇಳಿದರು.
    ರಾಜ್ಯದಲ್ಲಿ ಇಷ್ಟು ದೊಡ್ಡ ಬರ ಇದ್ದರೂ ರಾಜ್ಯ ಸರ್ಕಾರ ಒಂದು ಪೈಸೆ ತನ್ನ ಖಜಾನೆಯಿಂದ ಕೊಟ್ಡಿಲ್ಲ. ಕೇಂದ್ರ ಸರ್ಕಾರ 3500. ಕೋಟಿ ರೂ. ಕೊಟ್ಟಿದೆ. ಇವರು ಅದಕ್ಕೆ ಸಮನಾದ ಹಣ ಸೇರಿಸಿ ಕೊಡಿವಂತೆ ಕೇಳಿದರೂ ಕೊಡುತ್ತಿಲ್ಲ‌. ಇಂತ ದರಿದ್ರ ಸರ್ಕಾರ ಇರಬೇಕಾ ಎಂದು ಪ್ರಶ್ನಿಸಿದರು.
    ಯಡಿಯೂರಪ್ಪ ಅವರ ಅವಧಿಯಲ್ಲಿ ಸಿಂಗಟಾಲೂರು ಯೋಜನೆ ಜಾರಿಗೊಳಿಸಿ ನೀರು ತಂದಿದ್ದಾರೆ.‌ ಕಾಂಗ್ರೆಸ್ ನವರು ರೋಣ ತಾಲೂಕಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ಕೊಪ್ಪಳ ಏತ ನಿರಾವರಿ ಯೋಜನೆಯನ್ನು ನಾನು ನೀರಾವರಿ ಸಚಿವನಿದ್ದಾಗ ಮಾಡಿದೆ. ಕೃಷ್ಣಾ ಮೇಲ್ದಂಡೆ ಎರಡನೇ ಹಂತ ಅಸಾಧ್ಯ ಎಂದರು ನಾವು ಮಾಡಿದ ಮೇಲೆ ಕಾಂಗ್ರೆಸ್ ನವರು ಅಡಿಗಲ್ಲು ಹಾಕುವ‌ ಕೆಲಸ ಮಾಡಿದರು.
    ನಾವು ರೋಣ, ನರೆಗಲ್ ಗೆ ನೀರು ತರುವ ಯೋಜನೆ ಮಾಡಿದ್ದೇವೆ. ಕಳಕಪ್ಪ ಬಂಡಿಯವರು ಕೆರೆ ತುಂಬಿಸುವ ಯೊಜನೆ ತಂದರು ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ ಎಂದರು.

    ಹಿಂದುಳಿದವರಿಗೆ ಮೋಸ:
    ರಾಹುಲ್ ಗಾಂಧಿ ಹಿಂದುಳಿದ ವರ್ಗದ ಸಮೀಕ್ಷೆ ಮಾಡುವುದಾಗಿ ಹೇಳುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ವರದಿ ಪಡೆದರೂ ಬಿಡಿಹಡೆ ಮಾಡಿಲ್ಲ. ಕಾಂಗ್ರೆಸ್ ನವರು ಜನರಿಗೆ ಕಣ್ಣು ವರೆಸುವ ತಂತ್ರ ಮಾಡುತ್ತಾರೆ.
    ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್.
    ಈಗ ದಲಿತರ ಬಗ್ಗೆ ಮಾತನಾಡುತ್ತಾರೆ. ನಾನು ಯಡಿಯೂರಪ್ಪ ಅವರ ಬಯಕೆಯಂತೆ ಎಸ್ಸಿ ಎಸ್ಟಿ ಸಮುದಾಯದ ಮಿಸಲಾತಿ ಹೆಚ್ಚಳ ಮಾಡಿದೆ. ಎಸ್ಸಿ ಶೇ 15 %ರಿಂದ 17 ಎಸ್ಟಿ 3 ರಿಂದ 7% ಹೆಚ್ಚಳ ಮಾಡಿದೆವು ಎಂದು ಹೇಳಿದರು.

    ಮೋದಿ ಮಹಾನ್ ನಾಯಕ
    ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಭಯೋತ್ಪಾದಕರನ್ನು ಅವರ ನೆಲದಲ್ಲಿ ಹೋಗಿ ದ್ವಂಸ ಮಾಡಿ. ಭಯೊತ್ಪಾದಕರಿಗೆ ಭಯವಹುಟ್ಟುವಂತೆ ಮಾಡಿದರು. ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಕೊಟ್ಟು ಜೀವ ಉಳಿಸಿದರು. ಉಜ್ವಲ ಗ್ಯಾಸ್ ಕೊಟ್ಟು, ಐದು ಕೆಜಿ ಉಚಿತ ಅಕ್ಕಿ ಕೊಟ್ಟಿರುವುದು ಮೋದಿಯವರು. ಅದನ್ನು ಕಾಂಗ್ರೆಸ್ ತನ್ನ ಭಾಗ್ಯ ಎಂದು ಹೇಳಿಕೊಳ್ಳುತ್ತಿದೆ. ಮೋದಿಯವರ ಋಣ ತೀರಿಸಲು ಬಿಜೆಪಿಗೆ ಮತದಾನ ಮಾಡುವ ಮೂಲಕ ಮೋದಿಯವರನ್ನು ಗೆಲ್ಲಿಸಿ, ನನ್ನ ಆರಿಸಿ ಕಳಿಸಿದರೆ ಸಂಸತ್ತಿನಲ್ಲಿ ನಿಮ್ಮ ಪರವಾಗಿ ಸಿಂಹ ಘರ್ಜನೆ ಮಾಡುತ್ತೇನೆ ಎಂದರು.
    ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಜಿ ಸಚಿವ ಕಳಕಪ್ಪ ಬಂಡಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts