More

    ಹೆಣ್ಣು ಮಕ್ಕಳೇ ಹುಷಾರ್​… ಯುವ ನಿರ್ಮಾಪಕರಿಬ್ಬರ ಕರಾಳ ಮುಖ ಬಯಲು ಮಾಡಿದ ನಟಿ ಚಾರ್ಮಿಳಾ

    ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಕಾಲಿವುಡ್​ ನಟಿ ಚಾರ್ಮಿಳಾ ಸೇರಿಕೊಂಡಿದ್ದಾರೆ.

    ವೆಬ್​ ಪೋರ್ಟಲ್​ ಒಂದರ ಸಂದರ್ಶನದಲ್ಲಿ ಚಾರ್ಮಿಳಾ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾವೊಂದನ್ನು ಒಪ್ಪಿಕೊಂಡೆ. ಆ ಸಿನಿಮಾ ಶೂಟಿಂಗ್​ ಕ್ಯಾಲಿಕಟ್​ನಲ್ಲಿ ನಡೆಯುತ್ತಿತ್ತು. ನಾನು ನಾಯಕಿಯ ತಾಯಿ ಪಾತ್ರವನ್ನು ಮಾಡುತ್ತಿದ್ದೆ. ಆ ಚಿತ್ರಕ್ಕೆ ಇಬ್ಬರು ನಿರ್ಮಾಪಕರು. ಅವರಿಬ್ಬರಿಗೂ 24 ವರ್ಷ ವಯಸ್ಸಷ್ಟೇ. ಆರಂಭದಲ್ಲಿ ನನ್ನ ಸಹೋದರಿ ಎಂದು ಕರೆಯುತ್ತಿದ್ದವರೂ ಮೂರು ದಿನಗಳ ಬಳಿಕ ತಮ್ಮ ಆಪ್ತ ಸಹಾಯಕನ ಮೂಲಕ ನನಗೆ ಆಫರ್​ ಮಾಡಿದರು. ಲೈಂಗಿಕ ಬಯಕೆ ಈಡೇರಿಸಿದರೆ, 50 ಸಾವಿರ ಕೊಡುವುದಾಗಿ ಹೇಳಿದರು. ಇಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಳಿದರು. ನೀವು ನನ್ನ ಮಗನಿಗಿಂತ ಸ್ವಲ್ಪ ದೊಡ್ಡವರು ಮತ್ತು ನಾನು ತಾಯಿಯ ಸಮಾನಳು ಸಲಹೆ ನೀಡಿದೆ. ಆದರೆ, ಅವರು ಒಪ್ಪಲಿ ತಯಾರಿರಲಿಲ್ಲ. ನಂತರ ವಿಮಾನ ಹತ್ತಿ ಚೆನ್ನೈಗೆ ಮರಳಿದೆ ಎಂದಿದ್ದಾರೆ.

    ಎಲ್ಲಾ ಹೆಣ್ಣುಮಕ್ಕಳು ಅದರಲ್ಲೂ ಒಂಟಿ ತಾಯಂದಿರು ಇಂತಹ ಪುರುಷರಿಗೆ ಮರುಳಾಗಬೇಡಿ ಎಂದು ಚಾರ್ಮಿಳಾ ಒತ್ತಾಯಿಸಿದ್ದಾರೆ. ಹೆಂಗಸರು ಇಂತಹ ವಿಕೃತರನ್ನು ತಮ್ಮ ಜೀವನದಲ್ಲಿ ಪ್ರವೇಶಿಸಲು ಬಿಟ್ಟರೆ ಬೇಕಾದಷ್ಟು ಬಳಸಿಕೊಳ್ಳುತ್ತಾರೆ. ತಮ್ಮ ಲೈಂಗಿಕ ಬಯಕೆ ತೃಪ್ತಿಯಾದ ಬಳಿಕ ಕಣ್ಮರೆಯಾಗುತ್ತಾರೆ ಎಂದು ನಟಿ ಹೇಳಿದ್ದಾರೆ.

    ಅಂದಹಾಗೆ ಚಾರ್ಮಿಳಾ ಅವರು 1979 ರಲ್ಲಿ ಬಿಡುಗಡೆಯಾದ ಶಿವಾಜಿ ಗಣೇಶನ್ ಅಭಿನಯದ ‘ನಲ್ಲತೋರು ಕುಟುಂಬಮ್’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ‘ಒಯಿಲಟ್ಟಂ’ ಚಿತ್ರದ ಮೂಲಕ 1991ರಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು ಮತ್ತು ಹಲವಾರು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.

    ಚಾರ್ಮಿಳಾ 1995 ರಲ್ಲಿ ಮಲಯಾಳಂ ನಟ ಕಿಶೋರ್ ಸತ್ಯ ಅವರನ್ನು ವಿವಾಹವಾದರು. ಆದರೆ ನಾಲ್ಕು ವರ್ಷಗಳ ನಂತರ ಗಂಡನ ಅನೈತಿಕ ಸಂಬಂಧ ಬೆಳಕಿಗೆ ಬಂದ ನಂತರ ವಿಚ್ಛೇದನ ಪಡೆದರು. 2006 ರಲ್ಲಿ ಇಂಜಿನಿಯರ್ ರಾಜೇಶ್ ಅವರೊಂದಿಗೆ ಎರಡನೇ ಮದುವೆಯಾದರು ಮತ್ತು ಮಗನಿಗೆ ಜನ್ಮ ನೀಡಿದರು. ಚಾರ್ಮಿಳಾ ಅವರ ಎರಡನೇ ಮದುವೆಯೂ ವಿಫಲವಾಗಿದ್ದು, 2014 ರಲ್ಲಿ ವಿಚ್ಛೇದನವನ್ನು ಪಡೆದುಕೊಂಡರು. ಸದ್ಯ ಚಾರ್ಮಿಳಾ ಅವರು ತಮ್ಮ ಮಗನೊಂದಿಗೆ ವಾಸಿಸುತ್ತಿದ್ದಾರೆ. (ಏಜೆನ್ಸೀಸ್​)

    PHOTOS| ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಜಾಬ್​ ಸಿಎಂ: ಸರಳವಾಗಿ ಮನೆಯಲ್ಲೇ ನೆರವೇರಿತು 2ನೇ ಮದುವೆ

    ಶಾಲಾ ಮಕ್ಕಳ ಮುಂದೆ ಗುಪ್ತಾಂಗ ಪ್ರದರ್ಶಿಸಿದ ಖ್ಯಾತ ನಟನ ಬಂಧನ​: 2016ರಲ್ಲೂ ಈತ ಅಸಹ್ಯ ಕೃತ್ಯ ಎಸಗಿದ್ದ

    ಪತ್ನಿಯರ ಎಕ್ಸ್​ಚೇಂಜ್: ಸ್ನೇಹಿತರ ಜತೆ ಮಲಗಲು ಹೆಂಡ್ತಿಗೆ ಟಾರ್ಚರ್​- ಪೊಲೀಸರ ಮುಂದೆ ಕಣ್ಣೀರಿಟ್ಟ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts