More

    13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಬಲಿ

    ತೈವಾನ್​: ಬಹುಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 46 ಮಂದಿ ಬಲಿಯಾಗಿರುವ ಘಟನೆ ದಕ್ಷಿಣ ತೈವಾನೀಸ್ ನಗರ ಕಾಹ್ಸಿಯುಂಗ್​ನಲ್ಲಿ ನಡೆದಿದೆ.

    13 ಅಂತಸ್ತಿನ ಬಹು ಬಳಕೆಯ ಕಟ್ಟಡದಲ್ಲಿ ಗುರುವಾರ ಮುಂಜಾನೆಯೇ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಬಹು ಮಹಡಿಗಳವರೆಗೂ ಚಾಚಿದ್ದು, 46 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯಿಂದ ಬೆಂಕಿ ತಹಬದಿಗೆ ಬಂದಿದೆ ಎಂದು ತೈವಾನ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಮೃತಪಟ್ಟರೆ, 41 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯಿಂದ ಸುಟ್ಟು ಕರಕಲಾಗಿರುವ ಕಟ್ಟಡದ ಫೋಟೋವನ್ನು ತೈವಾನ್​ನ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಇಡೀ ಕಟ್ಟಡದ ಸುತ್ತ ದಟ್ಟ ಹೊಗೆ ಆವರಿಸಿದೆ.

    ಮೃತರಲ್ಲಿ ಹೆಚ್ಚಿನವರು ಕಟ್ಟಡದ ಏಳರಿಂದ ಹನ್ನೊಂದು ಮಹಡಿಗಳಲ್ಲಿ ವಾಸಿಸುತ್ತಿದ್ದರು. ಅದು ವಸತಿ ಸಂಕೀರ್ಣವಾಗಿದ್ದರಿಂದ ಹೆಚ್ಚು ಸಾವು-ನೋವು ಸಂಭವಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಐದು ಮಹಡಿಗಳನ್ನು ವಾಣಿಜ್ಯ ಬಳಕೆಗಾಗಿ ಬಳಸಲಾಗುತ್ತಿತ್ತು. ಅಲ್ಲಿ ಜನರು ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದೆ. (ಏಜೆನ್ಸೀಸ್​)

    ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!

    ರಾತ್ರಿ ಸಮಯದಲ್ಲೇಕೆ ವೈದ್ಯರು ಶವಪರೀಕ್ಷೆ ಮಾಡುವುದಿಲ್ಲ? ಇಲ್ಲಿದೆ ಅಚ್ಚರಿಯ ಉತ್ತರ..!

    ಸಮಂತಾರಿಂದ ಡಿವೋರ್ಸ್‌ ಬೆನ್ನಲ್ಲೇ ಟ್ವೀಟರ್‌ನಲ್ಲಿ ಕಾಣಿಸಿಕೊಂಡ ನಾಗಚೈತನ್ಯ: ಅಭಿಮಾನಿಗಳಿಗೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts