More

    ಒಬ್ಬನ ಹಿಂದೆ ಬಿದ್ದ 200 ಪೊಲೀಸರು! ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಈತ ಯಾರು?

    ಹೈದರಾಬಾದ್​: ನೂರಾರು ಪೊಲೀಸರು ಓರ್ವ ಆರೋಪಿ ಅಥವಾ ಖದೀಮನ ಹಿಂದೆ ಬೀಳುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ನಿಜವಾಗಿಯು ನಡೆಯುತ್ತಿದೆ. ಓರ್ವ ಖತರ್ನಾಕ್​ ಸರಗಳ್ಳನಿಗಾಗಿ ಸುಮಾರು 200 ಪೊಲೀಸರು ಹಗಲು ರಾತ್ರಿಯೆನ್ನದೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಹೈದರಾಬಾದ್​ನಲ್ಲಿ ಬರುವ ಮೂರು ಕಮಿಷನರೇಟ್​ ವ್ಯಾಪ್ತಿಯಲ್ಲೇ ಖದೀಮ ತನ್ನ ಕೈಚಳಕವನ್ನು ನಿತ್ಯವು ತೋರಿಸುತ್ತಿದ್ದಾನೆ. ಆದರೆ, ಈವರೆಗೂ ಆರೋಪಿಯನ್ನು ಬಂಧಿಸಲು ಪೊಲೀಸರ ಕೈಯಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ತನಿಖಾ ತಂಡವನ್ನು ರಚಿಸಿಕೊಂಡು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಸರಗಳ್ಳನ ಖಚಿತ ಮಾಹಿತಿಯನ್ನು ಪಡೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆತ ನಗರಕ್ಕೆ ಯಾವ ರೀತಿಯಲ್ಲಿ ನುಸುಳುತ್ತಾನೆ ಮತ್ತು ಎಲ್ಲಿಂದ ಓಡಿ ಹೋಗುತ್ತಿದ್ದಾನೆ ಎಂಬಿತ್ಯಾದಿ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.

    ಇನ್ನು ಕಳೆದ ಕೆಲವು ದಿನಗಳಿಂದ ನಗರದ ಅನೇಕ ಏರಿಯಾಗಳಲ್ಲಿ ನಡೆಯುತ್ತಿರುವ ಸರಗಳ್ಳತನದ ಹಿಂದೆ ಒಬ್ಬನೇ ವ್ಯಕ್ತಿಯ ಕೈವಾಡ ಇರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖಾ ಭಾಗವಾಗಿ ಪೊಲೀಸರು ಈಗಾಗಲೇ ಅನೇಕ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ರಾಚಕೊಂಡ ಮದಿಪಲ್ಲಿಯ ಹೋಟೆಲ್​ ಒಂದರ ಬಳಿ ಖದೀಮ ಬಿಟ್ಟು ಹೋದ ಸ್ಕೂಟಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಖತರ್ನಾಕ್​ ಖದೀಮ ಮೊದಲು ಸ್ಕೂಟಿಯನ್ನು ಆಸೀಫ್​ ನಗರದಲ್ಲಿ ಕದ್ದು, ಅದರಲ್ಲಿ ಸರಗಳ್ಳತನ ಮಾಡಿ ಮತ್ತೆ ಅದನ್ನು ಅನಾಥವಾಗಿ ಬಿಟ್ಟು ತಪ್ಪಿಸಿಕೊಳ್ಳುತ್ತಿರುವ ವಿಚಾರ ಪೊಲೀಸರಿಗೆ ತಿಳಿದಿದೆ.

    ಇದೇ ತಿಂಗಳು 19ರಂದು ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಖದೀಮ ನಗರದಲ್ಲಿ ಹಲವು ಕಡೆ ಸರಗಳ್ಳತನ ಎಸಗಿದ್ದಾನೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ಮತ್ತು ಫೋಟೋವನ್ನು ಜಿಲ್ಲಾ ಪೊಲೀಸ್​ ಠಾಣೆಗಳಿಗೂ ಕಳುಹಿಸಲಾಗಿದೆ.

    ಖದೀಮ ರಾಚಕೊಂಡದ ಮದಿಪಲ್ಲಿಯ ಹೋಟೆಲ್​ ಮುಂಭಾಗ ಸ್ಕೂಟಿ ನಿಲ್ಲಿಸಿ ವಾರಂಗಲ್​ ಕಡೆ ಬಸ್​ನಲ್ಲಿ ಹೊರಟಿರುವ ಮಾಹಿತಿ ಮೇರೆಗೆ ಪೊಲೀಸ್​ ಅಧಿಕಾರಿಗಳು ವಾರಂಗಲ್​ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್​ ಜಾಲದಲ್ಲಿ ಸಿಲುಕಿದ್ದ ಖದೀಮ ಸ್ವಲ್ಪದರಲ್ಲೇ ಎಸ್ಕೇಪ್​ ಆಗಿರುವ ಮಾಹಿತಿಯು ದೊರಕಿದೆ. ಆರೋಪಿ ಕ್ಯಾಪ್​, ಕಪ್ಪು ಮಾಸ್ಕ್​, ಜಾಕೆಟ್​, ಸ್ಕಿನ್​ ಟೋನ್​, ಶೂ ಧರಿಸಿದ್ದು, ಆತ ಅಂತಾರಾಜ್ಯ ಖದೀಮನಾಗಿರಬಹುದು ಎಂಬ ಅಂತಿಮ ತೀರ್ಮಾನಕ್ಕೆ ಇಂದು ಬಂದಿಲ್ಲ. ಆದರೆ, ಆತ ಎಲ್ಲಿ ಉಳಿಯುತ್ತಿದ್ದಾನೆ? ಹೇಗೆ ಸಂಚು ರೂಪಿಸುತ್ತಾನೆ? ಅದನ್ನು ಹೇಗೆ ಕಾರ್ಯಗತ ಮಾಡುತ್ತಾನೆ? ಎಂಬ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುಮಾರು 200 ಪೊಲೀಸರಿಂದ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಖದೀಮನ ಎಡೆಮುರಿ ಕಟ್ಟುವುದಾಗಿ ಹಿರಿಯ ಪೊಲೀಸ್​ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಕನ್ನಡ ಪ್ರೀತಿಗೆ ಸಲಾಂ! ಹೆಜ್ಜೆ ಹಾಕಿದ್ದು ತೆಲುಗು ಸಿನಿಮಾ ಹಾಡಿಗೆ ಆದ್ರೆ ವಾರ್ನರ್ ಗೆದ್ದಿದ್ದು ಕನ್ನಡಿಗರ ಹೃದಯ

    ಯೂಟ್ಯೂಬ್​ ವಿಡಿಯೋಗಳೆಲ್ಲ ನಿಜವೆಂದು ನಂಬಿದ್ರೆ ನಿಮಗೂ ಇದೇ ಗತಿ ಆಗ್ಬಹುದು ಹುಷಾರ್..!​​

    ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts