More

    ಶಿವಕುಮಾರ ಶ್ರೀಗಳ 115ನೇ ಜಯಂತಿ: ಸಿದ್ದಗಂಗಾ ಮಠದಲ್ಲಿ ನಡೆಯೋ ಕಾರ್ಯಕ್ರಮದ ಪೂರ್ಣ ಮಾಹಿತಿ ಇಲ್ಲಿದೆ

    ತುಮಕೂರು: ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದಲೇ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಭಕ್ತರು.

    ಇಂದು ಬೆಳಗ್ಗೆ 11 ಗಂಟೆಗೆ ಮಠದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೂ‌ ಮೊದಲು ಮಠದ ಆವರಣದಲ್ಲಿ ವಿವಿಧ ಧಾರ್ಮಿಕ‌ ವಿಧಿವಿದಾನಗಳು ನಡೆಯುತ್ತಿವೆ. ಮುಂಜಾನೆ ಮಠದ ಆವರಣದಲ್ಲಿರುವ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದಿದೆ.

    ಇಂದು ಇಡೀ ದಿನ ಏನೇನು ನಡೆಯಲಿದೆ?
    ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ 4.30 ರಿಂದ‌ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಅಭಿಷೇಕ‌ ಹಾಗೂ ವಿಶೇಷ ಪೂಜೆ. ಸಿದ್ದಲಿಂಗಸ್ವಾಮೀಜಿ ನೇತೃತ್ವದಲ್ಲಿ ಸ್ವಾಮೀಜಿಗಳ ತಂಡದಿಂದ ಪೂಜೆ ಸಲ್ಲಿಕೆ. ಇದಾದ ಬಳಿಕ ಶಿವಕುಮಾರಸ್ವಾಮೀಜಿಗಳ‌ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ.‌

    ನಡೆದಾಡುವ ಬಸವ ಭಾರತ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಕುಳಿತುಕೊಳ್ಳಲು ಒಟ್ಟು 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಸಾವರ್ಜನಿಕರಿಗೆ ಕ್ಯಾತಸಂದ್ರ ಮಾರ್ಗವಾಗಿ ಮಠಕ್ಕೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಮಠದ ಹಿಂಬದಿಯ ಗೇಟ್ ನಲ್ಲಿ ವಿಐಪಿಗಳ ಪ್ರವೇಶಕ್ಕೆ ಅನುಮತಿ ಇದೆ.

    ಕಾರ್ಯಕ್ರಮದ ಗಣ್ಯರು ಹಾಗೂ ಅಥಿತಿಗಳು
    * ಸಿದ್ದಲಿಂಗಸ್ವಾಮಿಜಿಗಳ‌ ನೇತೃತ್ವ.
    * ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ
    * ಕಾರ್ಯಕ್ರಮ ಉದ್ಘಾಟನೆ ಅಮಿತ್ ಷಾ
    * ಕಾರ್ಯಕ್ರಮ ಅಧ್ಯಕ್ಷತೆ ಬಿ.ಎಸ್ ಯಡಿಯೂರಪ್ಪ
    * ನುಡಿ ನಮನ ಸಿಎಂ ಬಸವರಾಜ ಬೊಮ್ಮಾಯಿ
    * ಪ್ರಹ್ಲಾದ್ ಜೋಷಿ ಕೇಂದ್ರ ಸಚಿವರು ಸಿದ್ದಗಂಗಾ ಫಾರ್ಮಸಿ ಕಾಲೇಜು ಕಟ್ಟಡ ಶಂಕುಸ್ಥಾಪನೆ
    * ಮುಖ್ಯ ಅತಿಥಿಗಳು: ಭಗವಂತಕೂಬಾ, ಕೇಂದ್ರ ಸಚಿವ, ಅರಗಜ್ಞಾನೇಂದ್ರ, ರಾಜ್ಯ ಗೃಹಸಚಿವ, ಜೆ.ಸಿ ಮಾಧುಸ್ವಾಮಿ, ಬಿ.ಸಿ ನಾಗೇಶ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಶಾಸಕ ಜ್ಯೋತಿಗಣೇಶ್, ಗೌರಿಶಂಕರ್, ಸಂಸದ ಜಿ.ಎಸ್ ಬಸವರಾಜು, ಮೇಯರ್ ಕೃಷ್ಣಪ್ಪ ಮುಖ್ಯ ಅಥಿತಿಗಳು.
    * ಕಾರ್ಯಕ್ರಮ ಸ್ವಾಗತ – ಬಿ.ವೈ ವಿಜಯೇಂದ್ರ.

    ಅಮಿತ್ ಷಾ ಭೇಟಿಯ ಸಮಯ ಮತ್ತು ಮಾರ್ಗ
    ಬೆಳಗ್ಗೆ 10.30: ತುಮಕೂರು ವಿವಿ ಆವರಣದ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್
    10.40: ಬಿ.ಎಚ್ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ಪ್ರವೇಶ, ತುಮಕೂರು ವಿವಿ – ಬಟವಾಡಿ- ಎಚ್.ಎಂ.ಟಿ ಎದುರಿನ ರಸ್ತೆ ಮೂಲಕ ಶ್ರೀನಗರ – ಬಂಡೇಪಾಳ್ಯದ ಮಾರ್ಗವಾಗಿ ಮಠಕ್ಕೆ ಪ್ರವೇಶ.
    10.45ಕ್ಕೆ ಶಿವಕುಮಾರಸ್ವಾಮಿಜಿ ಗದ್ದುಗೆಗೆ ಭೇಟಿ ಮತ್ತು ಗದ್ದುಗೆಯಲ್ಲಿ ಪೂಜೆ ಸಲ್ಲಿಸಲಿರುವ ಅಮಿತ್ ಷಾ.
    10.50ಕ್ಕೆ ನೇರವಾಗಿ ಮಠದ ಆವರಣದ ವೇದಿಕೆಗೆ ಭೇಟಿ. 10.45ರಿಂದ 10.50ರೊಳಗೆ ವೇದಿಕೆಗೆ ಆಗಮನ. ಮಧ್ಯಾಹ್ನ 1 ಗಂಟೆಗಳ ಕಾಲ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಬಂಡೇಪಾಳ್ಯ- ಶ್ರೀನಗರ – ಎಚ್.ಎಂ.ಟಿ ಎದುರಿನ ರಸ್ತೆ- ಬಟವಾಡಿ ಮಾರ್ಗವಾಗಿ ತುಮಕೂರು ವಿವಿ ಹೆಲಿಪ್ಯಾಡ್ ತಲುಪಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪಯಣ ಮಾಡಲಿದ್ದಾರೆ.

    ಪೊಲೀಸ್ ಭದ್ರತೆ
    ತುಮಕೂರು ವಿವಿ ಹೆಲಿಪ್ಯಾಡ್​ನಿಂದ ಸಿದ್ದಗಂಗಾ ಮಠದವರೆಗೂ ಪೊಲೀಸ್ ಬಿಗಿ ಸರ್ಪಗಾವಲು ಕೈಗೊಳ್ಳಲಾಗಿದೆ. ಹೆಜ್ಜೆಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಹಾಗೂ ದಾವಣಗೆರೆ ಎಸ್ಪಿ ಸೇರಿದಂತೆ ನಾಲ್ಕು ಎಸ್ಪಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಾಲ್ಕು ವಿಶೇಷ ತಂಡಗಳನ್ನು ನೇಮಕ ಮಾಡಲಾಗಿದೆ.

    ಊಟದ ವ್ಯವಸ್ಥೆ
    ನಾಲ್ಕು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿ ಸಾಧ್ಯತೆ ಇದ್ದು, ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಠದ ಆಳವರಣದ ಎಂಟು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಪ್ರಾರ್ಥನಾ ಮಂದಿರ, ಕೆಂಪಹೊನ್ನಯ್ಯ ಅಥಿತಿ ಗೃಹ, ಸೌದೆ ಕೊಪ್ಪಲು, ಸಿದ್ದಾರ್ಥ ಅತಿಥಿ ಗೃಹ, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದೇಶದ ಊಟದ ಮನೆ ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬರುವ ಎಲ್ಲಾ ಭಕ್ತರಿಗೂ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.

    ಊಟದ ಮೆನು ಹೀಗಿದೆ..
    ಬೆಳಗ್ಗೆ ತಿಂಡಿ: ಉಪ್ಪಿಟ್ಟು – ಕೇಸರಿಬಾತ್ , ಚಿತ್ರಾನ್ನ.
    ಮಧ್ಯಾಹ್ನದ ಊಟ ಬೆಳಗ್ಗೆ 11 ಗಂಟೆಯಿಂದ ಪ್ರಾರಂಭ): ಪಾಯಸ, ಬೂಂದಿ ಚಿತ್ರನ್ನಾ, ಹೆಸರು ಬೆಳೆ ಕೂಟು, ಅನ್ನ- ಸಾಂಬರ್, ಮಜ್ಜಿಗೆ.
    ರಾತ್ರಿ ಊಟ: ಪಾಯಸ, ಬೂಂದಿ ಚಿತ್ರನ್ನಾ, ಅನ್ನ- ಸಾಂಬರ್, ಅನ್ನ- ಮಜ್ಜಿಗೆ

    20 ಎಕರೆಯ ಬೃಹತ್ ಪಾರ್ಕಿಂಗ್
    ಮಠದ ಬಳಿ ಬಹೃತ್ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಠದ ಬಂಡೆಪಾಳ್ಯ ಬಳಿ 20 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ‌ ಇದೆ. ಬಸ್, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ನಿಲ್ಲಲ್ಲು ಅವಕಾಶ ಇದೆ. ಇಂದು ಸರಿ ಸುಮಾರು 4 ಲಕ್ಷ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದ್ದು, ಯಾವುದೇ ಅವ್ಯವಸ್ಥೆ ಆಗದಂತೆ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ.

    ಇನ್ನಾದರೂ ನ್ಯಾಯ ಸಿಗಲಿ; ಕಾಶ್ಮೀರಿ ಪಂಡಿತರ ಬಗ್ಗೆ ಪ್ರಕಾಶ್ ಬೆಳವಾಡಿ ಮಾತು

    ಮೇಡಂ ಪ್ಲೀಸ್​​… ಕ್ಯಾಬ್​ ಚಾಲಕನ ಜತೆಗಿನ ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ ಶ್ರದ್ಧಾ ಶ್ರೀನಾಥ್​..!

    ಹೊಸ ಆರ್ಥಿಕ ವರ್ಷ; ಜನಸ್ನೇಹಿ ಕ್ರಮಗಳು ಅನುಷ್ಠಾನ ಸಮರ್ಪಕವಾಗಿರಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts