More

    ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..

    ನವದೆಹಲಿ: ಐತಿಹಾಸಿಕ ಕುತುಬ್​ ಮಿನಾರ್ ಹೆಸರು ಬದಲಿಸಬೇಕು, ಅದಕ್ಕೆ ವಿಷ್ಣುಸ್ತಂಭ ಎಂದು ನಾಮಕರಣ ಮಾಡಬೇಕು ಎಂಬ ಧ್ವನಿ ಜೋರಾಗಿರುವ ಬೆನ್ನಿಗೇ ಕುತುಬ್ ಮಿನಾರ್​ ಕುರಿತು ಮತ್ತೊಂದು ವಿಷಯ ಹರಿದಾಡುತ್ತಿದೆ. ವಿಶೇಷವೆಂದರೆ, ಅದನ್ನು ನಿರ್ಮಿಸಿದ್ದು ಕುತ್ಬುದ್ದೀನ್ ಐಬಕ್ ಅಲ್ಲ ಎಂಬುದು ಇದೀಗ ಕೇಳಿಬಂದಿದೆ.

    ಕುತುಬ್ ಮಿನಾರನ್ನು ಕುತ್ಬುದ್ದೀನ್ ಐಬಕ್ ನಿರ್ಮಿಸಿದ್ದ, ಅದೇ ಕಾರಣಕ್ಕೆ ಅದಕ್ಕೆ ಕುತುಬ್ ಮಿನಾರ್ ಎಂಬ ಹೆಸರು ಬಂತು ಎಂಬುದು ಶಾಲಾ ಪಠ್ಯದಲ್ಲಿ ಇದುವರೆಗೂ ಓದಿ ಕೇಳಿದ್ದ ವಿಷಯವಾಗಿದೆ. ಆದರೆ ಅಸಲಿಗೆ ಅದನ್ನು ಕಟ್ಟಿಸಿದವರೇ ಬೇರೆ ಹಾಗೂ ಅದರ ನಿರ್ಮಾಣದ ಹಿಂದಿನ ಉದ್ದೇಶವೂ ಮಹತ್ವದ್ದಾಗಿತ್ತು ಎಂಬ ವಿಷಯ ಹರಿದಾಡುತ್ತಿದೆ.

    ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಧರಮ್​ವೀರ್​ ಶರ್ಮಾ ಎಂಬವರ ಹೇಳಿಕೆಯಿಂದ ಈ ವಿಷಯಗಳು ಮುನ್ನೆಲೆಗೆ ಬಂದಿವೆ. ಎಲ್ಲರೂ ಅಂದುಕೊಂಡಂತೆ ಕುತುಬ್​ ಮಿನಾರ್​ ಕಟ್ಟಿಸಿದ್ದು ಕುತ್ಬುದ್ದೀನ್ ಐಬಕ್ ಅಲ್ಲ, ಅದನ್ನು ನಿರ್ಮಿಸಿದ್ದು ರಾಜಾ ವಿಕ್ರಮಾದಿತ್ಯ ಎಂಬುದಾಗಿ ಅವರು ಹೇಳಿದ್ದಾರೆ.

    ಐದನೇ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯ ಸೂರ್ಯನ ದಿಕ್ಕನ್ನು ಅಧ್ಯಯನ ಮಾಡುವ ಸಲುವಾಗಿ ಈ ಸ್ತಂಭವನ್ನು ಸ್ಥಾಪಿಸಿದ್ದ. ಆ ಸಂಬಂಧ ನನ್ನ ಬಳಿ ಹಲವಾರು ಸಾಕ್ಷ್ಯಗಳಿವೆ ಎಂದು ಕುತುಬ್​ ಮಿನಾರನ್ನು ಹಲವಾರು ಸಲ ಸಮೀಕ್ಷೆ ಮಾಡಿರುವ ಧರಮ್​ವೀರ್ ಪ್ರತಿಪಾದಿಸಿದ್ದಾರೆ.

    ಅದರಲ್ಲಿ 25 ಇಂಚುಗಳ ವಾಲುವಿಕೆ ಇದೆ. ಸೂರ್ಯನನ್ನು ಗಮನಿಸಲೆಂದೇ ಅದನ್ನು ಮಾಡಲಾಗಿತ್ತು. ಅದಕ್ಕೆ ಜೂನ್​ 21ರಂದು ಆ ಭಾಗದ ಮೇಲೆ ಕನಿಷ್ಠ ಅರ್ಧ ಗಂಟೆ ನೆರಳು ಬೀಳುವುದಿಲ್ಲ. ಅಲ್ಲದೆ ಹತ್ತಿರದಲ್ಲಿರುವ ಮಸೀದಿಗೂ ಆ ಸ್ತಂಭಕ್ಕೂ ಯಾವುದೇ ಸಂಬಂಧವಿಲ್ಲ, ಅಲ್ಲದೆ ಸ್ತಂಭದ ಬಾಗಿಲು ಉತ್ತರಕ್ಕೆ ಮುಖ ಮಾಡಿದೆ, ರಾತ್ರಿಯಲ್ಲಿ ಧ್ರುವ ನಕ್ಷತ್ರವನ್ನು ವೀಕ್ಷಿಸಲು ಹಾಗೆ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

    ಕಾಡುದಾರಿ, ಹೆರಿಗೆ ಬೇನೆ; ಆ್ಯಂಬುಲೆನ್ಸ್​ಗೇ ಅಡ್ಡ ಬಂದ ಆನೆ!; ಆಪರೇಷನ್​ ಗಜ-ಪ್ರಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts