More

    ಇಸ್ರೋದಿಂದ ಮತ್ತೊಂದು ಸಾಧನೆ; ಸೂರ್ಯನ ಪೂರ್ಣ ಚಿತ್ರ ಸೆರೆಹಿಡಿದ ಆದಿತ್ಯ ಎಲ್​ 1

    ನವದೆಹಲಿ: ಸೂರ್ಯನತ್ತ ಪ್ರಯಾಣ ಕೈಗೊಂಡಿರುವ ಭಾರತದ ಆದಿತ್ಯ ಎಲ್1 ಯೋಜನೆಯಲ್ಲಿ ಮತ್ತೊಂದು ಯಶಸ್ಸು ಸಾಧಿಸಲಾಗಿದೆ. ಸೂರ್ಯನ ಮೊದಲ ಪೂರ್ಣ ಚಿತ್ರಗಳನ್ನು ಆದಿತ್ಯ ಎಲ್​ 1 ಸೆರೆಹಿಡಿದಿದೆ ಎಂದು ಇಸ್ರೋ ಶುಕ್ರವಾರ ಸಂಜೆ ತಿಳಿಸಿದೆ.

    ಈ ಫೋಟೋಗಳು ಹತ್ತಿರದ ನೇರಳಾತೀತ ತರಂಗಾಂತರಗಳಲ್ಲಿ “ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಸಂಕೀರ್ಣ ವಿವರಗಳಿಗೆ ಒಳನೋಟಗಳನ್ನು ಒದಗಿಸುತ್ತವೆ” ಎಂದು ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ಇಸ್ರೋ ಪೋಸ್ಟ್ ಮಾಡಿದೆ.

    ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಅಥವಾ SUIT ಉಪಕರಣವು 200-400 ನ್ಯಾನೊ ಮೀಟರ್​ ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ತಿಳಿಸಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿದಿದೆ.

    ಭೂಮಿಯ ಹವಾಮಾನದ ಮೇಲೆ ಸೌರ ವಿಕಿರಣದ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ಈ ಚಿತ್ರಗಳು ಸಹಾಯ ಮಾಡುತ್ತವೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

    “ನವೆಂಬರ್ 20, 2023 ರಂದು, SUIT ಪೇಲೋಡ್ ಅನ್ನು ಚಾಲನೆ ಮಾಡಲಾಯಿತು. ಯಶಸ್ವಿ ನಿಯೋಜನೆ ನಂತರ, ಈ ದೂರದರ್ಶಕವು ಡಿಸೆಂಬರ್ 6, 2023 ರಂದು ತನ್ನ ಮೊದಲ ಬೆಳಕಿನ ವಿಜ್ಞಾನ ಚಿತ್ರಗಳನ್ನು ಸೆರೆಹಿಡಿಯಿತು” ಎಂದು ಇಸ್ರೋ ಹೇಳಿದೆ,

    ಭೂಮಿಯಿಂದ ಸರಿಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ಮೊದಲ ಲಗ್ರಾಂಜಿಯನ್ ಪಾಯಿಂಟ್ (L1) ಕಕ್ಷೆ ನೆಲೆಸಿ ಸೂರ್ಯನನ್ನು ಅಧ್ಯಯನ ಮಾಡಲು ಪ್ರಯಾಣ ಕೈಗೊಂಡಿರುವ ಭಾರತದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ ಆದಿತ್ಯ ಎಲ್​1, ಈ ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

    ಬಿಯರ್​ ಪ್ರಿಯರಿಗೊಂದು ಕಹಿ ಸುದ್ದಿ… ಕರ್ನಾಟಕದಲ್ಲಿ ನ್ಯೂ ಇಯರ್​ ಸಂದರ್ಭ ಪಾನೀಯದ ಕೊರತೆ!

    ನೀರು ಕುಡಿಯುವಾಗ ಜೇನು ನೊಣ ದೇಹದೊಳಕ್ಕೆ ಸೇರಿತು… ಮುಂದೆ ಸಂಭವಿಸಿದ್ದು ದುರಂತ…

    ಪಾಸ್​ಪೋರ್ಟ್​ ವೆರಿಫಿಕೇಶನ್​ಗಾಗಿ ಸ್ಟೇಶನ್​ಗೆ ತೆರಳಿದ ಮಹಿಳೆ ಮೇಲೆ ಪೊಲೀಸರು ಗುಂಡು ಹಾರಿಸಿದ್ದೇಕೆ?: ಕ್ಯಾಮರಾದಲ್ಲಿ ನಿಜಾಂಶ ಸೆರೆ…

    sc

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts